Site icon Vistara News

Hoax Bomb Threat: ಮತ್ತೆ ಹುಸಿಬಾಂಬ್‌ ಸಂದೇಶ- ಮೂರು ಮಾಲ್‌ಗಳು, ಆಸ್ಪತ್ರೆಗೆ ಬೆದರಿಕೆ

Hoax Bomb Threat

ನವದೆಹಲಿ: ದಕ್ಷಿಣ ದೆಹಲಿಯ ಮೂರು ಮಾಲ್‌ಗಳು ಮತ್ತು ಆಸ್ಪತ್ರೆಗೆ ಬಾಂಬ್ ಬೆದರಿಕೆ(Hoax Bomb Threat) ಬಂದಿದೆ. ಇಮೇಲ್ ಮೂಲಕ ಈ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣ ಜನರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ದೆಹಲಿಯ 3 ಮಾಲ್‌ಗಳು(Mall) ಮತ್ತು ಒಂದು ಆಸ್ಪತ್ರೆ(Hospital)ಗೆ ಈ ಸಂದೇಶ ಬಂದಿದ್ದು, ಕೆಲವೇ ಗಂಟೆಗಳನ್ನು ಬಾಂಬ್‌ ಸ್ಫೋಟಗೊಳ್ಳಲಿದೆ ಎಂದು ಕಿಡಿಗೇಡಿಗಳು ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ.

ಚಾಣಕ್ಯ ಮಾಲ್ (ಚಾಣಕ್ಯಪುರಿ), ಸೆಲೆಕ್ಟ್ ಸಿಟಿವಾಕ್ (ಸಾಕೇತ್), ಆಂಬಿಯೆನ್ಸ್ ಮಾಲ್ (ವಸಂತ್ ಕುಂಜ್) ಮತ್ತು ಪ್ರೈಮಸ್ ಆಸ್ಪತ್ರೆ (ಚಾಣಕ್ಯಪುರಿ) ಮತ್ತು ಇತರ ಕೆಲವು ಸ್ಥಳಗಳಲ್ಲಿ ಬಾಂಬ್ ಬೆದರಿಕೆಯ ಕುರಿತು ಮಾಹಿತಿ ಪಡೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಬಂದ ಸ್ಥಳಗಳಲ್ಲಿ ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ದಳಗಳು ಶೋಧ ಕಾರ್ಯಾಚರಣೆ ನಡೆಸಿವೆ. ಶೋಧದ ವೇಳೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂಬುದು ತಿಳಿದುಬಂದಿದೆ.

ನಿನ್ನೆಯಷ್ಟೇ ಮುಂಬೈ, ನೋಯ್ಡಾ, ಗುರುಗ್ರಾಮ, ಚೆನ್ನೈ ಸೇರಿ ದೇಶದ ವಿವಿಧ ನಗರಗಳ ಮಾಲ್‌, ಆಸ್ಪತ್ರಗಳಿಗೆ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ನಗರದ ವೈಟ್‌ಫೀಲ್ಡ್‌ನ ಮಾಲ್ ಸೇರಿ ಹಲವು ಮಾಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ನೀವು ಯಾರೂ ಬದುಕಲು ಅರ್ಹರಲ್ಲ. ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲ್ಲೇ ಮಾಲ್‌ಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿರುವುದರಿಂದ ಆತಂಕ ಮೂಡಿಸಿದೆ. “ಕಟ್ಟಡದ ಒಳಗೆ ಬಾಂಬ್ ಇದೆ. ಈ ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತದೆ. ನಾನು ಮಾನವೀಯತೆಯನ್ನು ದ್ವೇಷಿಸುವೆ, ನೀವು ಯಾರೂ ಬದುಕಲು ಅರ್ಹರಲ್ಲ. ನಿಮ್ಮನ್ನೆಲ್ಲಾ ಕೊಲ್ಲುತ್ತೇನೆ, ನಾವು ಭಯೋತ್ಪಾದನೆಯನ್ನು ನಿಲ್ಲಿಸುವುದಿಲ್ಲ. ಈ ಸಂದೇಶ ಕಳುಹಿಸಿರುವುದು KNR ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಗಸ್ಟ್ 17 ರಂದು ಕೂಡ, ಗುರುಗ್ರಾಮ್‌ನಲ್ಲಿರುವ ಆಂಬಿಯೆನ್ಸ್ ಮಾಲ್ ಮ್ಯಾನೇಜ್‌ಮೆಂಟ್ ಇಮೇಲ್‌ ಅಡ್ರೆಸ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಅದರಲ್ಲಿ ಕಳುಹಿಸುವವರು “ಕಟ್ಟಡದಲ್ಲಿರುವ ಪ್ರತಿಯೊಬ್ಬರನ್ನು ಕೊಲ್ಲಲು” ಬಾಂಬ್‌ಗಳನ್ನು ಇಟ್ಟಿರೋದಾಗಿ ಬೆದರಿಕೆ ಹಾಕಲಾಗಿತ್ತು. ಮಾಲ್ ಸ್ಥಳಾಂತರಗೊಂಡು ಶೋಧ ನಡೆಸಲಾಗಿತ್ತಾದರೂ ಬಾಂಬ್ ಪತ್ತೆಯಾಗಿರಲಿಲ್ಲ.

ಅದೇ ದಿನ, ನೋಯ್ಡಾದ DLF ಮಾಲ್ ಆಫ್ ಇಂಡಿಯಾದ ಅಧಿಕಾರಿಗಳು ಕಟ್ಟಡದಿಂದ ಜನರನ್ನು ಸ್ಥಳಾಂತರಿಸಿದರು, ಇದು ಬಾಂಬ್ ಭಯದ ಭಯವನ್ನು ಉಂಟುಮಾಡಿತು. ಆದಾಗ್ಯೂ, ಮಾಲ್‌ನ ಭದ್ರತೆಯನ್ನು ಪರಿಶೀಲಿಸಲು ಅಣಕು ಡ್ರಿಲ್‌ಗಾಗಿ ಇದನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಆಗಸ್ಟ್ 2 ರಂದು, ಗ್ರೇಟರ್ ಕೈಲಾಶ್‌ನ ಶಾಲೆಗೆ ಇಮೇಲ್ ಬಾಂಬ್ ಬೆದರಿಕೆ ಬಂದಿತ್ತು, ಅದರಲ್ಲಿ ಕಟ್ಟಡವನ್ನು ಸ್ಫೋಟಿಸಲಾಗುವುದು ಎಂದು ಬೆದರಿಕೆ ಬಂದಿತ್ತು. ಆದರೆ, ತನಿಖೆಯಲ್ಲಿ ಏನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: Bomb Threat: ಅಸ್ಸಾಂನ 19 ಕಡೆಗಳಲ್ಲಿ ಬಾಂಬ್‌ ಇರಿಸಿ, ಬಳಿಕ ನಿಷ್ಕ್ರೀಯಗೊಳಿಸುವಂತೆ ಮನವಿ ಮಾಡಿದ ಉಲ್ಫಾ ಉಗ್ರರು

Exit mobile version