ಹೂಸ್ಟನ್: ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು (Human in Space) ಅಸಾಧಾರಣ ಕಷ್ಟಕರ ಮತ್ತು ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದೂ, ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. 2025ರಲ್ಲಿ ಚಂದ್ರನಲ್ಲಿ ಮನುಷ್ಯರನ್ನು ಕಳುಹಿಸಲು ನಾಸಾ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಹೊಸ ಪ್ರಶ್ನೆಯೊಂದು ಉದ್ಭವವಾಗಿದೆ. ಒಂದು ವೇಳೆ, ಬಾಹ್ಯಾಕಾಶದಲ್ಲಿ ಮಾನವ ಸತ್ತರೆ(Someone Dies In Space), ಆ ದೇಹವನ್ನು ಏನು ಮಾಡಲಾಗುತ್ತದೆ?(NASA)
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ. ಇದಕ್ಕಾಗಿ ನಾಸಾ ತನ್ನದೇ ಆದ ಪ್ರೋಟೊಕಾಲ್ ಸಿದ್ಧಪಡಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತಹ ಕಡಿಮೆ-ಭೂಮಿ-ಕಕ್ಷೆಯ ಕಾರ್ಯಾಚರಣೆಯಲ್ಲಿ ಯಾರಾದರೂ ಸತ್ತರೆ, ಸಿಬ್ಬಂದಿಯು ಕೆಲವೇ ಗಂಟೆಗಳಲ್ಲಿ ದೇಹವನ್ನು ಕ್ಯಾಪ್ಸುಲ್‌ನಲ್ಲಿ ಭೂಮಿಗೆ ಹಿಂತಿರುಗಿಸಬಹುದಾಗಿದೆ. ಒಂದು ವೇಳೆ, ಚಂದ್ರನಲ್ಲಿದ್ದಾಗ ಮೃತಪಟ್ಟರೆ, ಸಿಬ್ಬಂದಿಯು ಶವದೊಂದಿಗೆ ವಾಪಸ್ ಭೂಮಿಗೆ ಬರಬೇಕಾಗುತ್ತದೆ.
ಶವವನ್ನು ತ್ವರಿತವಾಗಿ ವಾಪಸ್ ಭೂಮಿಗೆ ಕಳುಹಿಸಲು ಸಾಧ್ಯವಾಗುವುದರಿಂದ ಯಾರಾದರೆ ಸತ್ತರೆ ಆ ದೇಹವನ್ನು ಹೇಗೆ ರಕ್ಷಿಸಿಕೊಳ್ಳುವುದು ನಾಸಾಗೆ ಅಂಥ ದೊಡ್ಡ ಆತಂಕವಲ್ಲ. ಅದರ ಬದಲಾಗಿ, ಉಳಿದ ಸಿಬ್ಬಂದಿಯ ಸುರಕ್ಷಿತವಾಗಿ ವಾಪಸ್ ಭೂಮಿಗೆ ಮರಳುವಂತೆ ಮಾಡುವುದೇ ನಾಸಾ ಮುಂದಿನ ಮೊದಲ ಆದ್ಯತೆಯಾಗಿರುತ್ತದೆ. ಆದರೆ, ಒಂದೊಮ್ಮೆ 300 ಮಿಲಿಯನ್ ಮೈಲ್ ದೂರು ಇರುವ ಮಂಗಳನ ಮೇಲೆ ಮನುಷ್ಯ ಮೃತಪಟ್ಟರೆ, ಇಡೀ ಪರಿಸ್ಥಿತಿಯೇ ಭಿನ್ನವಾಗಿರುತ್ತದೆ.
ಮಂಗಳ ಅಂಗಳದಲ್ಲಿ ಮಾನವ ಮೃತಪಟ್ಟರೆ ತಕ್ಷಣವೇ ವಾಪಸ್ ಭೂಮಿಗೆ ಬರಲು ಸಾಧ್ಯವಾಗುವುದಿಲ್ಲ. ಸಿಬ್ಬಂದಿ ವಾಪಸ್ ಭೂಮಿಗೆ ಬರುವಾಗಲೇ ಶವವನ್ನು ತೆಗೆದುಕೊಂಡು ಬರಬೇಕಾಗುತ್ತದೆ. ಅಂದರೆ ಸುಮಾರು 1 ವರ್ಷವದವರೆಗೂ ಕಾಯಬೇಕಾಗುತ್ತದೆ. ಈ ಮಧ್ಯೆ, ಸಿಬ್ಬಂದಿಯನ್ನು ಶವವನ್ನು ವಿಶೇಷವಾಗಿ ತಯಾರಿಸಲಾದ ಬಾಡಿ ಬ್ಯಾಗ್‌ನಲ್ಲಿ ಅಥವಾ ಪ್ರತ್ಯೇಕ್ ಚೇಂಬರ್‌ನಲ್ಲಿ ಶವವನ್ನು ರಕ್ಷಿಸಿಇಡಬೇಕಾಗುತ್ತದೆ. ಆದರೆ ಬಾಹ್ಯಾಕಾಶ ನಿಲ್ದಾಣ ಅಥವಾ ಬಾಹ್ಯಾಕಾಶ ನೌಕೆಯಂತಹ ಒತ್ತಡದ ವಾತಾವರಣದಲ್ಲಿ ಯಾರಾದರೂ ಸತ್ತರೆ ಮಾತ್ರ ಆ ಎಲ್ಲಾ ಸನ್ನಿವೇಶಗಳು ಅನ್ವಯಿಸುತ್ತವೆ.
ಬಾಹ್ಯಾಕಾಶ ಸೂಟ್‌ನ ರಕ್ಷಣೆಯಿಲ್ಲದೆ ಯಾರಾದರೂ ಬಾಹ್ಯಾಕಾಶಕ್ಕೆ ಕಾಲಿಟ್ಟರೆ ಏನಾಗುತ್ತದೆ? ಖಂಡಿತವಾಗಿಯೂ ಆ ಕೂಡಲೇ ಗಗನಯಾನಿ ಮೃತಪಡುತ್ತಾನೆ. ಒತ್ತಡದ ನಷ್ಟ ಮತ್ತು ಬಾಹ್ಯಾಕಾಶದ ನಿರ್ವಾತಕ್ಕೆ ಒಡ್ಡಿಕೊಳ್ಳುವುದರಿಂದ ಗಗನಯಾತ್ರಿಗೆ ಉಸಿರಾಡಲು ಅಸಾಧ್ಯವಾಗುತ್ತದೆ ಮತ್ತು ರಕ್ತ ಮತ್ತು ಇತರ ದೇಹದ ದ್ರವಗಳು ಕುದಿಯಲಾರಂಭಿಸುತ್ತವೆ.
ಚಂದ್ರ, ಮಂಗಳ ಮೇಲೆ ಸ್ಪೇಸ್‌ಸೂಟ್ ಇಲ್ಲದೇ ಹೋದರೆ ಏನಾಗುತ್ತೆ?
ಚಂದ್ರನ ಮೇಲೆ ಯಾವುದೇ ವಾತಾವರಣವಿಲ್ಲ. ಇದ್ದರೂ ತೀರಾ ನಗಣ್ಯ. ಇನ್ನು ಮಂಗಳನ ಮೇಲೂ ಇದೇ ಪರಿಸ್ಥಿತಿ ಇದೆ. ತೀರಾ ನಗಣ್ಯ ಎನ್ನಬಹುದಾದಷ್ಟು ವಾತಾರವಣವಿದೆ ಮತ್ತು ಆಮ್ಲಜನಕವಂತೂ ಇಲ್ಲವೇ ಇಲ್ಲ. ಹೀಗಿರುವಾಗ, ಸ್ಪೇಸ್‌ಸೂಟ್ ಇಲ್ಲದೇ ಹೋದರೆ, ಬಾಹ್ಯಾಕಾಶದಲ್ಲಿ ಏನಾಗುತ್ತದೆ ಅದೇ ಸ್ಥಿತಿ ಇಲ್ಲೂ ಆಗುತ್ತದೆ. ಮನುಷ್ಯ ಕೂಡಲೇ ಉಸಿರುಗಟ್ಟುತ್ತದೆ ಹಾಗೂ ರಕ್ತ ಕುದಿಯಲಾರಂಭಿಸುತ್ತದೆ.
ಈ ಸುದ್ದಿಯನ್ನೂ ಓದಿ: NASA Launches SWOT | ಭೂಮಿಯ ಜಲಮೂಲಗಳ ಸಮೀಕ್ಷೆಗೆ ನಾಸಾದಿಂದ ಉಪಗ್ರಹ ಲಾಂಚ್, ಏನೆಲ್ಲ ಮಾಹಿತಿ ಸಿಗಲಿದೆ?
ಸಮಾಧಿ ಮಾಡಬಹುದಾ?
ಮಂಗಳ ಗ್ರಹದ ಮೇಲ್ಮೈಯಲ್ಲಿದ್ದಾಗ ಗಗನಯಾತ್ರಿ ಇಳಿದ ನಂತರ ಮೃತಪಟ್ಟರೆ ಏನಾಗುತ್ತದೆ. ಹಾಗಂತ ಅಲ್ಲಿಯೇ ಸಮಾಧಿ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಸಾಕಷ್ಟು ಇಂಧನ ಬೇಕಾಗುತ್ತದೆ. ಇಡೀ ಇಂಧನ ಇದಕ್ಕಾಗಿಯೇ ವಿನಿಯೋಗಿಸಿದರೆ, ಉಳಿದ ಕೆಲಸಕ್ಕೆ ಗಗನಯಾತ್ರಿಗಳ ಬಳಿ ಇಂಧನವೇ ಉಳಿಯುವುದಿಲ್ಲ. ಹಾಗಾಗಿ, ಸಮಾಧಿ ಮಾಡುವುದು ಉತ್ತಮ ಐಡಿಯಾ ಎನಿಸಿಕೊಳ್ಳುವುದಿಲ್ಲ. ಒಂದೊಮ್ಮೆ ಸಮಾದಿ ಮಾಡಿದರೆ, ದೇಹದಲ್ಲಿನ ಬ್ಯಾಕ್ಟಿರಿಯಾ ಹಾಗೂ ಇತರ ಸೂಕ್ಷ್ಮಾಣುಗಳ ಮಂಗಳ ಮೇಲ್ಮೈಯನ್ನು ಕಲುಷಿತಗೊಳಿಸಬಹುದು! ಸಮಾಧಿಗೆ ಬದಲಾಗಿ ಗಗನಯಾತ್ರಿಗಳು, ಮೃತಪಟ್ಟ ವ್ಯಕ್ತಿಯ ದೇಹವನ್ನು ಬಾಡಿ ಬ್ಯಾಗ್‌ನಲ್ಲಿ ಸಂರಕ್ಷಿಸಿ ಇಡುತ್ತಾರೆ. ಭೂಮಿಗೆ ವಾಪಸ್ ಬರುವಾಗ ಶವವನ್ನು ಜೊತೆಗೆ ತೆಗೆದುಕೊಂಡು ಬರುತ್ತಾರೆ.