Site icon Vistara News

Rajnath Singh: ಪಾಕ್‌ಗೆ ಆಗದಿದ್ದರೆ ನಾವು ಉಗ್ರವಾದ ತೊಲಗಿಸುತ್ತೇವೆ ಎಂದ ರಾಜನಾಥ್‌ ಸಿಂಗ್!

Rajnath Singh

Rajnath Singh

ನವದೆಹಲಿ: ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಹೇಳಿದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಅವರು ನೆರೆ ರಾಷ್ಟ್ರಕ್ಕೆ ಮತ್ತೆ ತಿರುಗೇಟು ನೀಡಿದ್ದಾರೆ. “ಪಾಕಿಸ್ತಾನಕ್ಕೆ (Pakistan) ಉಗ್ರವಾದವನ್ನು (Terrorism) ನಿರ್ಮೂಲನೆ ಮಾಡಲು ಆಗದಿದ್ದರೆ, ನಾವೇ ನಿರ್ನಾಮ ಮಾಡುತ್ತೇವೆ” ಎಂದು ಹೇಳಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಪಾಕಿಸ್ತಾನದ ಕುರಿತು ಅವರು ಪ್ರಸ್ತಾಪಿಸಿದ್ದಾರೆ. “ಪಾಕಿಸ್ತಾನಕ್ಕೆ ಉಗ್ರವಾದವನ್ನು ತೊಲಗಿಸಲು ಆಗುತ್ತಿಲ್ಲ ಎಂಬುದಾಗಿ ನನಗೆ ಎನಿಸುತ್ತಿದೆ. ಹಾಗಾಗಿ, ನಮಗೆ ಬಿಟ್ಟರೆ ನಾವೇ ಉಗ್ರವಾದ ನಿರ್ಮೂಲನೆ ಮಾಡುತ್ತೇವೆ” ಎಂದಿದ್ದಾರೆ.

ತುರ್ತು ಪರಿಸ್ಥಿತಿಯ ದಿನಗಳನ್ನು ಕೂಡ ರಾಜನಾಥ್‌ ಸಿಂಗ್‌ ನೆನೆದರು. “ದೇಶದ ಮೇಲೆ ತುರ್ತು ಪರಿಸ್ಥಿತಿ ಕಾಂಗ್ರೆಸ್‌, ನಮ್ಮನ್ನೆಲ್ಲ ಜೈಲಿಗೆ ಕಳುಹಿಸಿದರು. ನನ್ನ ತಾಯಿಯ ಅಂತಿಮ ದರ್ಶನಕ್ಕೂ ನನಗೆ ಅವಕಾಶ ಕೊಡಲಿಲ್ಲ. ನನಗೆ ಪೆರೋಲ್‌ ಕೊಡಿ ಎಂದರೂ ಕೊಡಲಿಲ್ಲ. ಇಂತಹ ಹಿನ್ನೆಲೆ ಇರುವ ಕಾಂಗ್ರೆಸ್‌ ಈಗ ನಮ್ಮನ್ನು ಸರ್ವಾಧಿಕಾರಿಗಳು ಎಂದು ಕರೆಯುತ್ತಾರೆ” ಎಂಬುದಾಗಿ ತಿಳಿಸಿದರು.

ನುಗ್ಗಿ ಹೊಡೆಯೋದು ಗ್ಯಾರಂಟಿ

ಭಾರತ ವಿರೋಧಿಗಳು ಅಥವಾ ಭಯೋತ್ಪಾದಕರು ನಮ್ಮ ನೆರೆಯ ದೇಶದಲ್ಲಿ ಕುಳಿತು ತೊಂದರೆ ನೀಡಲು ಪ್ರಯತ್ನಿಸಿದರೆ ಅಥವಾ ಭಾರತದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದರೆ ನುಗ್ಗಿ ಹೊಡೆಯೋದು ಗ್ಯಾರಂಟಿ ಎಂದು ಕೆಲ ದಿನಗಳ ಹಿಂದಷ್ಟೇ ರಾಜನಾಥ್‌ ಸಿಂಗ್‌ ಅವರ ಹೇಳಿದ್ದರು. ಯಾರಾದರೂ ಭಾರತವನ್ನು ಮತ್ತೆ ಮತ್ತೆ ಗುರಿಯಾಗಿಸಿಕೊಂಡರೆ, ಭಾರತವು ಅವರನ್ನು ಬಿಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ವಿದೇಶಿ ನೆಲದಲ್ಲಿ ವಾಸಿಸುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ವ್ಯಾಪಕ ಕಾರ್ಯತಂತ್ರದ ಭಾಗವಾಗಿ ಭಾರತ ಸರ್ಕಾರ ಪಾಕಿಸ್ತಾನದಲ್ಲಿ ವ್ಯಕ್ತಿಗಳನ್ನು ಹತ್ಯೆ ಮಾಡಿದೆ ಎಂದು ಗಾರ್ಡಿಯನ್ ನಲ್ಲಿ ಪ್ರಕಟವಾದ ವರದಿಗೆ ಸಿಂಗ್ ಪ್ರತಿಕ್ರಿಯಿಸಿದ್ದರು. ವರದಿಯು ಭಾರತೀಯ ಮತ್ತು ಪಾಕಿಸ್ತಾನದ ಗುಪ್ತಚರ ಇಲಾಖೆ ಮತ್ತು ಪಾಕಿಸ್ತಾನದ ತನಿಖಾಧಿಕಾರಿಗಳು ಹಂಚಿಕೊಂಡ ದಾಖಲೆಗಳನ್ನು ತನ್ನ ಮಾಹಿತಿಯ ಮೂಲವೆಂದು ಗಾರ್ಡಿಯನ್ ಉಲ್ಲೇಖಿಸಿದೆ. ಈ ಸಾವುಗಳು ಹೆಚ್ಚಾಗಿ ಯುನೈಟೆಡ್ ಅರಬ್ ಎಮಿರೇಟ್ಸ್​ನಿಂದ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗುಪ್ತಚರ ಸ್ಲೀಪರ್-ಸೆಲ್​​ಗಳಿಂದ ನಿರ್ವಹಿಸುತ್ತಿವೆ ಎಂದು ಪಾಕಿಸ್ತಾನದ ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಅದು ಹೇಳಿತ್ತು.

ಇದನ್ನೂ ಓದಿ: Hanuman Chalisa: ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ FIR;‌ ಪಾಕಿಸ್ತಾನವನ್ನು ಆಳುತ್ತಿದ್ದೀರಾ ಎಂದು ಸಿಎಂಗೆ ಜೋಶಿ ಪ್ರಶ್ನೆ

Exit mobile version