ನವದೆಹಲಿ: ಭಾರತ ಮತ್ತು ಅರ್ಜೆಂಟೀನಾ (India ands Argentina) ನಡುವೆ ಐದು ಲಿಥಿಯಂ ಬ್ಲಾಕ್‌ಗಳ (Lithium Mining) ಪರಿಶೋಧನೆ ಹಾಗೂ ಗಣಿಗಾರಿಕೆಗೆ ಒಪ್ಪಂದ ಏರ್ಪಟ್ಟಿದೆ. ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ 5 ಲಿಥಿಯಂ ಬ್ಲಾಕ್‌ಗಳ ಪರಿಶೋಧನೆ ಮತ್ತು ಗಣಿಗಾರಿಕೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಅರ್ಜೆಂಟೀನಾದಲ್ಲಿ 5 ಲಿಥಿಯಂ ಬ್ಲಾಕ್ ಗಳಲ್ಲಿ ಗಣಿಗಾರಿಕೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಭಾರತ ಹೊಸ ಮೈಲಿಗಲ್ಲು ಸಾಧಿಸಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
India's First Ever Lithium Exploration and Mining Project in Argentina.#CriticalMinerals4Indiahttps://t.co/DSVCkvwXA2 pic.twitter.com/WuRT9I7763
— Pralhad Joshi (@JoshiPralhad) January 15, 2024
ಖನೀಜ್ ಬಿಡೇಶ್ ಇಂಡಿಯಾ ಲಿಮಿಟೆಡ್ ಮತ್ತು CAMYEN, ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದ ಸರ್ಕಾರಿ ಸ್ವಾಮ್ಯದ ಕಂಪನಿ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಯೋಜನೆ ಭಾರತಕ್ಕೆ ಲಿಥಿಯಂ ಪೂರೈಕೆಯನ್ನು ಬಲಪಡಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ.
ಈ ಒಪ್ಪಂದದಿಂದ ಎರಡೂ ದೇಶಗಳ ಲಿಥಿಯಂ ಗಣಿಗಾರಿಕೆ ಮತ್ತು ಡೌನ್‌ಸ್ಟ್ರೀಮ್ ವಲಯಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ಜಾಗತಿಕ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ನಿರ್ಣಾಯಕ ವಸ್ತುಗಳಿಗೆ ಪೂರೈಕೆ, ವೈವಿಧ್ಯೀಕರಣವನ್ನು ಸಹ ಸುಗಮಗೊಳಿಸುತ್ತದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ Explainer | ದೇಶೀಯವಾಗಿ ಲಿಥಿಯಂ ಹುಡುಕಾಟ, ಮಂಡ್ಯದಲ್ಲೇ ಇದೆ ನಿಕ್ಷೇಪ!