ನವದೆಹಲಿ: ‘ಇಂಡಿಯಾ’ ಬದಲಿಗೆ ‘ಭಾರತ’ (India Vs Bharat) ಎಂದು ಮರುನಾಮಕರಣ ಮಾಡುವ ಸಂಬಂಧ ವರದಿಗಳಿವೆ. ಇದಕ್ಕೆ ಪುಷ್ಟಿ ನೀಡುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಆಮಂತ್ರಣ ಪತ್ರಿಕೆಯಲ್ಲೂ ಪ್ರೆಸಿಡೆಂಟ್ ಆಫ್ ಭಾರತ್(president of Bharat), ಪ್ರೈಮ್ ಮಿನಿಸ್ಟರ್ ಆಫ್ ಭಾರತ್ (Prime Minister of Bharat) ಎಂದು ಬರೆದುಕೊಂಡಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದಿಂದ ಇಂಡಿಯಾ ಪದ ಕೈ ಬಿಟ್ಟು ಭಾರತ ಎಂಬ ಪದವನ್ನು ಸೇರಿಸುವುದಕ್ಕಾಗಿಯೇ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಪಾಕಿಸ್ತಾನ ಸರ್ಕಾರವು (Pakistan Government), ‘ಇಂಡಿಯಾ’ ಪದದ ಮೇಲೆ ಕಣ್ಣಿಟ್ಟಿದೆಯಾ? ಹೌದು ರೀತಿಯ ಚರ್ಚೆಗಳು ಕೂಡ ಶುರುವಾಗಿವೆ. ಎಕ್ಸ್ ವೇದಿಕೆಯಲ್ಲಿ (X Social Media) ಮಾಡಲಾದ ಪೋಸ್ಟ್ ಒಂದು ಚರ್ಚೆಗೆ ನಾಂದಿ ಹಾಡಿದೆ. ಒಂದು ವೇಳೆ, ಭಾರತವು ‘ಇಂಡಿಯಾ’ ಪದಕ್ಕೆ ಕೊಕ್ ನೀಡಿದರೆ, ಪಾಕಿಸ್ತಾನವು ತನ್ನ ದೇಶಕ್ಕೆ ಕ್ಲೇಮ್ ಮಾಡಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಪಾಕಿಸ್ತಾನ ಸರ್ಕಾರವು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಜತೆಗೆ, ಭಾರತ ಸರ್ಕಾರ ಕೂಡ ಈವರೆಗೂ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ದಕ್ಷಿಣ ಏಷ್ಯಾ ಇಂಡೆಕ್ಸ್‌ನ X ಹ್ಯಾಂಡಲ್‌ನಿಂದ ಹಂಚಿಕೊಂಡ ಪೋಸ್ಟ್‌ನಲ್ಲಿ, “ಭಾರತವು ವಿಶ್ವ ಸಂಸ್ಥೆಯ ಮಟ್ಟದಲ್ಲಿ ಅಧಿಕೃತವಾಗಿ “ಇಂಡಿಯಾ” ಎಂಬ ಹೆಸರನ್ನು ರದ್ದುಗೊಳಿಸಿದರೆ, ಪಾಕಿಸ್ತಾನವು ಅದರ ಮೇಲೆ ಹಕ್ಕು ಸಾಧಿಸಬಹುದು ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ. ಪಾಕಿಸ್ತಾನದ ರಾಷ್ಟ್ರೀಯವಾದಿಗಳು ಪಾಕಿಸ್ತಾನವು ಇಂಡಿಯಾ ಹೆಸರಿನ ಹಕ್ಕುಗಳನ್ನು ಹೊಂದಿದೆ ಎಂದು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ಇದಕ್ಕೆ ಅವರು ಪಾಕಿಸ್ತಾನದ ಸಿಂಧೂ ಪ್ರದೇಶವನ್ನು (ಇಂಡಸ್ ವ್ಯಾಲಿ) ಉಲ್ಲೇಖಿಸುತ್ತಾರೆ.
ಎಕ್ಸ್ ವೇದಿಕೆಯಲ್ಲಿನ ಈ ಪೋಸ್ಟ್‌ಗೆ ಸಾಕಷ್ಟು ಕಮೆಂಟ್‌ಗಳು ಬಂದಿವೆ, ಹಲವುರು ತಮಾಶೆಯಾಗಿ ಉತ್ತರ ನೀಡಿದ್ದಾರೆ. ಮತ್ತೆ ಕೆಲವರು ಇದೊಂದು ಜೋಕ್ ಎಂದು ಮುನ್ನಡೆದಿದ್ದಾರೆ. ಆದರೆ, ಈ ಕುರಿತು ಪಾಕಿಸ್ತಾನವಾಗಲೀ, ಭಾರತವಾಗಲೀ ಯಾವುದೇ ಅಧಿಕೃ ಹೇಳಿಕೆಗಳನ್ನು ನೀಡಿಲ್ಲ ಎಂಬುದನ್ನು ಗಮನಿಸಬೇಕು.
ಈ ಸುದ್ದಿಯನ್ನೂ ಓದಿ: India vs Bharat row: ದೇಶದ ಹೆಸರಿನಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದ ದಿನೇಶ್ ಗುಂಡೂರಾವ್
ಒಂದು ವೇಳೆ ಪಾಕಿಸ್ತಾನವು ಇಂಡಿಯಾ ಮೇಲೆ ಹಕ್ಕು ಸಾಧಿಸಿದರೆ, ಆಫ್ಘಾನಿಸ್ತಾನ ಪಾಕಿಸ್ತಾನದ ಮೇಲೆ ಹಕ್ಕು ಸಾಧಿಸಬಹುದು. ಅದೇ ರೀತಿ, ರಷ್ಯಾ ಆಫ್ಘಾನಿಸ್ತಾನದ ಮೇಲೆ… ಹೀಗೆ ಚೈನ್ ಮುಂದುರಿಯಬಹುದು. ಹಾಗಾಗಿ, ಪಾಕಿಸ್ತಾನ ಯಾವುದೇ ಕಾರಣಕ್ಕೂ ಈ ರೀತಿಯ ಕೆಲಸಕ್ಕೆ ಮುಂದಾಗಬಾರದು ಎಂದು ತಮಾಶೆಯಾಗಿ ಹೇಳಿದ್ದಾರೆ. ಇದೇ ರೀತಿ ಹಲವು ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಈ ಪೋಸ್ಟ್ ಅನ್ನು ಎಂಜಾಯ್ ಮಾಡಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.