Site icon Vistara News

Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

Indian Chutneys

ಬೆಂಗಳೂರು: ಚಟ್ನಿ ಎಂದಾಗ ಬಾಯಲ್ಲಿ ನೀರು ಬರುವುದು ಸಹಜ. ದೋಸೆ, ಇಡ್ಲಿ ಮಾಡಿದಾಗ ಸಾಂಬಾರಿನ ಹಂಗಿಲ್ಲದೇ ಚಟ್ನಿ ಜೊತೆ ಇವುಗಳನ್ನು ಸವಿಯಬಹುದು. ಇನ್ನು ಬಿಸಿ ಬಿಸಿ ಅನ್ನದ (Rice) ಜೊತೆಗೆ ಈ ಚಟ್ನಿಯ ಕಾಂಬಿನೇಷನ್‌ ಸೂಪರ್‌ ಆಗಿರುತ್ತದೆ. ಹೆಚ್ಚಾಗಿ  ನಾವು ಕೊತ್ತಂಬರಿಸೊಪ್ಪಿನ ಚಟ್ನಿ, ಮಾವಿನಕಾಯಿ ಚಟ್ನಿ (Mango Chutney), ಟೊಮೆಟೊ ಚಟ್ನಿ, ಶೇಂಗಾ ಚಟ್ನಿ ಮಾಡುತ್ತೇವೆ. ಇನ್ನು ಹಲವು ಬಗೆಯ ತರಕಾರಿಗಳನ್ನು ಬಳಸಿ ರುಚಿ ರುಚಿಯಾದ ಚಟ್ನಿಗಳನ್ನು ಮಾಡಬಹುದು. ಚಟ್ನಿಯ ಕುರಿತು ಯಾಕಿಷ್ಟು ಪೀಠಿಕೆಯೆಂದರೆ, ಇದೀಗ ಭಾರತದ ಚಟ್ನಿಗಳಲ್ಲಿ (Indian Chutneys)ಎರಡು ಚಟ್ನಿಗಳು ವಿಶ್ವದ 50 ಡಿಪ್ ಗಳಲ್ಲಿ ಸ್ಥಾನ ಪಡೆದಿವೆಯಂತೆ!

ಟೇಸ್ಟ್ ಅಟ್ಲಾಸ್ ಇತ್ತೀಚೆಗೆ ಜೂನ್ 2024ರ  ಶ್ರೇಯಾಂಕದ ಪ್ರಕಾರ ವಿಶ್ವದ 50 ಅತ್ಯುತ್ತಮ ಡಿಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತೀಯ ಮಿಕ್ಸ್ ಚಟ್ನಿ  42ನೇ ಸ್ಥಾನ ಪಡೆದುಕೊಂಡಿದೆ. ಈ ಚಟ್ನಿಯನ್ನು ಬೇಯಿಸಿದ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ಹಣ್ಣು ಹಾಗೂ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೀರಿಗೆ, ಏಲಕ್ಕಿ, ಹುಣಸೆಹಣ್ಣು, ಶುಂಠಿ ಮತ್ತು ಅರಿಶಿನದಂತಹ ವಿವಿಧ ಮಸಾಲೆಗಳನ್ನು ಬೆರೆಸಿ ತಯಾರಿಸಲಾಗುತ್ತದೆಯಂತೆ. ಇದನ್ನು “ಭಾರತದ ರಾಷ್ಟ್ರೀಯ ಕಾಂಡಿಮೆಂಟ್ಸ್”ಎಂದು ಕರೆಯಲಾಗಿದೆ. ಹಾಗೇ ಟೇಸ್ಟ್ ಅಟ್ಲಾಸ್ ನ ಪಟ್ಟಿಯಲ್ಲಿ 47 ನೇ ಸ್ಥಾನದಲ್ಲಿ ನಮಗೆ ಪ್ರಿಯವಾದಂತಹ ಕೊತ್ತಂಬರಿ ಚಟ್ನಿ (ಧನಿಯಾ ಚಟ್ನಿ) ಹಾಗೂ ಕೊನೆಯ ಅಂದರೆ 50 ನೇ ಸ್ಥಾನದಲ್ಲಿ ಮಾವಿನ ಚಟ್ನಿ ಇದೆ. ಇದನ್ನು ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಈ ಮಾವಿನ ಚಟ್ನಿ ಹುಳಿ, ಸಿಹಿ ಮತ್ತು ಮಸಾಲೆಯ ಸುವಾಸನೆಯಿಂದ ಕೂಡಿತ್ತು ಎನ್ನಲಾಗಿದೆ.

ಅಲ್ಲದೇ ಈ ಪಟ್ಟಿಯಲ್ಲಿ ಲೆಬನಾನ್ ನಿಂದ ಟೌಮ್ ಮೊದಲ ಸ್ಥಾನದಲ್ಲಿದ್ದರೆ , ಮೆಕ್ಸಿಕನ್ ನ ಜನಪ್ರಿಯ ಡಿಲೈಟ್ ಗ್ವಾಕಮೋಲ್ 4ನೇ ಸ್ಥಾನದಲ್ಲಿದೆ. ಹಮ್ಮಸ್ 10 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇದಕ್ಕೂ ಮೊದಲು ಹಲವಾರು ಭಾರತೀಯ ಭಕ್ಷ್ಯಗಳು ಟೇಸ್ಟ್ ಅಟ್ಲಾಸ್ ನ ಟಾಪ್ 50 ಪಟ್ಟಿಗಳಲ್ಲಿ ಸ್ಥಾನ ಪಡೆದಿತ್ತು. ವಡಾ ಪಾವ್, ಮಹಾರಾಷ್ಟ್ರದ ಪ್ರಸಿದ್ಧ ಬೀದಿ ಶೈಲಿಯ ತಿಂಡಿ ವಿಶ್ವದ ಅತ್ಯುತ್ತಮ ಸ್ಯಾಂಡ್ ವಿಚ್ ಗಳಲ್ಲಿ ಹೆಸರು ಪಡೆದಿವೆ.  ಅಷ್ಟೇ ಅಲ್ಲದೇ ಮೂರು ಭಾರತೀಯ ಸಿಹಿತಿಂಡಿಗಳು ವಿಶ್ವದ 10 ಅತ್ಯುತ್ತಮ ರೈಸ್ ಪುಡಿಂಗ್ ಗಳಲ್ಲಿ ಸ್ಥಾನ ಪಡೆದಿವೆ.

ಇದೇ ರೀತಿ ಭಾರತೀಯ ಎಲ್ಲಾ ಭಕ್ಷ್ಯಗಳು ವಿಶ್ವದ ಎಲ್ಲಾ ಕಡೆ ಮೆಚ್ಚುಗೆಯನ್ನು ಗಳಿಸುವಂತಾಗಲಿ. ಎಲ್ಲರ ನಾಲಿಗೆಯ ರುಚಿಯನ್ನು ಹೆಚ್ಚಿಸುವಂತಾಗಲಿ.

Exit mobile version