Site icon Vistara News

Salt intake: ಭಾರತೀಯರಿಗೆ ‘ಉಪ್ಪು’ ತಿನ್ನೋದು ‘ನೀರು’ ಕುಡಿದಷ್ಟೇ ಸಲೀಸು! ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣ ಲೆಕ್ಕಕ್ಕಿಲ್ಲ

salt uses

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO Recommendations) ನಿಗದಿ ಪಡಿಸಿದ ಪ್ರಮಾಣಕ್ಕಿಂತಲೂ ಭಾರತೀಯ ನಿತ್ಯ ಹೆಚ್ಚು ಉಪ್ಪು ಸೇವಿಸುತ್ತಾರಂತೆ! ಹೌದು, ನ್ಯಾಷನಲ್ ಎನ್‌ಸಿಡಿ ಮಾನಿಟರಿಂಗ್ ಸರ್ವೇ(NNMS) ಭಾಗವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ICMR)ಕೈಗೊಂಡ ಸಮೀಕ್ಷೆಯ ಪ್ರಕಾರ, ನಿತ್ಯ ಭಾರತೀಯರು (Indians) 8.09 ಗ್ರಾಮ್ ಉಪ್ಪು ಸೇವಿಸುತ್ತಾರೆ(Salt intake). ಈ ಪೈಕಿ ಪುರುಷರು ನಿತ್ಯ 8.9 ಮತ್ತು ಮಹಿಳೆಯರು 7.1 ಗ್ರಾಮ್ ಉಪ್ಪು ಸೇವಿಸುತ್ತಾರೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ. ಡಬ್ಲ್ಯೂಎಚ್‌ಒ ನಿತ್ಯ 5 ಗ್ರಾಮ್ ಉಪ್ಪು ಸೇವಿಸಲು ಶಿಫಾರಸು ಮಾಡುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಹೋಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿರುವ ಪುರುಷರೇ ಹೆಚ್ಚು ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ಭಾರತೀಯ ಜನಸಂಖ್ಯೆಯಲ್ಲಿ ಸರಾಸರಿ ಆಹಾರದ ಉಪ್ಪು ಸೇವನೆಯು ಅಧಿಕವಾಗಿದೆ. ಸಂಸ್ಕರಿಸಿದ ಆಹಾರಗಳನ್ನು ಮತ್ತು ಮನೆಯ ಹೊರಗೆ ಬೇಯಿಸಿದ ಆಹಾರವನ್ನು ತಿನ್ನುವುದನ್ನು ನಾವು ಕಡಿಮೆ ಮಾಡಬೇಕು. 18–69 ವರ್ಷ ವಯಸ್ಸಿನ 10,659 ವಯಸ್ಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ICMR-ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರಶಾಂತ್ ಮಾಥುರ್ ಹೇಳಿದ್ದಾರೆ.

ಉದ್ಯೋಗದಲ್ಲಿರುವವರು(8.6 ಗ್ರಾಮ್), ತಂಬಾಕು ಸೇವನೆ ಮಾಡುವವರು(8.3 ಗ್ರಾಮ್) ಮತ್ತು ಅಧಿಕ ರಕ್ತದೊತ್ತಡ(8.5 ಗ್ರಾಮ್) ಇರುವವರು ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಸೇವಿಸುವುದು ಅಧ್ಯಯನದ ವೇಳೆ ಗೊತ್ತಾಗಿದೆ. ಉಪ್ಪ ಸೇವನೆಯನ್ನು ಕಡಿಮೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜತೆಗೆ, ಶೇ.25ರಷ್ಟು ರಕ್ತದೊತ್ತಡ ಇಳಿಕೆಯ ಸಂಬಂಧ ವೆಚ್ಚ ನಿಯಂತ್ರಣವೂ ಸಾಧ್ಯವಾಗಲಿದೆ. ಇದರಿಂದಾಗಿ 2025ರ ಹೊತ್ತಿಗೆ ಶೇ.30ರಷ್ಟು ಜನಸಂಖ್ಯೆ ಉಪ್ಪು ಸೇವನೆ ಕಡಿಮೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Sugar Vs Salt: ಸಕ್ಕರೆ ಮತ್ತು ಉಪ್ಪು: ಕಿಡ್ನಿಗೆ ಯಾವುದು ಹಿತಕರ?

ಭಾರತದಲ್ಲಿನ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ.28.1 ಸಾವುಗಳು ಹೃದಯ ಸಂಬಂಧಿ ಕಾಯಿಲೆಗಳಿಂದಲೇ ಸಂಭವಿಸಿವೆ. 1990 ರಲ್ಲಿ 0.78 ಮಿಲಿಯನ್ ಸಾವುಗಳಿಗೆ ಹೋಲಿಸಿದರೆ 2016ರಲ್ಲಿ 1.63 ಮಿಲಿಯನ್ ಸಾವುಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿವೆ ಎಂದು ಅಧ್ಯಯನವು ಹೇಳಿದೆ.

ಭಾಗವಹಿಸುವವರಲ್ಲಿ ಅರ್ಧಕ್ಕಿಂತ ಕಡಿಮೆ ಜನರು ಆಹಾರದ ಉಪ್ಪು ಸೇವನೆಯನ್ನು ನಿಯಂತ್ರಿಸುವ ಕ್ರಮಗಳನ್ನು ಅಭ್ಯಾಸ ಮಾಡಿದ್ದಾರೆ ಮತ್ತು ಉಪ್ಪಿನ ಮಿತಿಮೀರಿದ ಪ್ರಮಾಣವನ್ನು ತಡೆಗಟ್ಟಲು ಸಾಮಾನ್ಯವಾಗಿ ಅಳವಡಿಸಿಕೊಂಡ ಹಂತವೆಂದರೆ ಮನೆಯ ಹೊರಗೆ ಊಟವನ್ನು ಕಡಿಮೆ ಮಾಡುವುದು ಆಗಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version