Site icon Vistara News

Justin Trudeau: ಜಿ20 ಸಭೆಗೆ ಬಂದಾಗಲೇ ಜಸ್ಟಿನ್‌ ಟ್ರುಡೊ ದೌಲತ್ತು; ವಿಐಪಿ ಕೋಣೆ ತಿರಸ್ಕರಿಸಿದ್ದ ಕೆನಡಾ ಪ್ರಧಾನಿ

Justin Trudeau

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಎರಡು ದಿನ ನಡೆದ ಜಿ20 ಶೃಂಗಸಭೆ (G20 Summit 2023) ಬಳಿಕ ಕೆನಡಾ ತೆರಳಿರುವ ಪ್ರಧಾನಿ ಜಸ್ಟಿನ್‌ ಟ್ರುಡೋ (Justin Trudeau) ಅವರು ಭಾರತದ ವಿರುದ್ಧ ಶೀತಲ ಸಮರ ಸಾರಿದ್ದಾರೆ. ಭಾರತದ ಜತೆಗಿನ ಒಪ್ಪಂದವನ್ನು ಮುಂದೂಡಿದ್ದಾರೆ. ಅಲ್ಲದೆ, ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿ ಕೊಡಿ ಎಂದು ಭಾರತವೂ ತಿರುಗೇಟು ನೀಡಿದೆ. ಇದರ ಬೆನ್ನಲ್ಲೇ, ಭಾರತದಲ್ಲಿದ್ದಾಗಲೇ ವಿಐಪಿ ಕೋಣೆಗಳನ್ನು ತಿರಸ್ಕರಿಸಿ ಜಸ್ಟಿನ್‌ ಟ್ರುಡೋ ಅಹಂಕಾರ ಪ್ರದರ್ಶಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಹೌದು, ಜಿ20 ಶೃಂಗಸಭೆ ಬಳಿಕ ಜಸ್ಟಿನ್‌ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರು 36 ಗಂಟೆ ಭಾರತದಲ್ಲೇ ಉಳಿದಿದ್ದರು. ಆಗ ಭಾರತವು ಅವರಿಗೆ ವಿಶೇಷ ಆತಿಥ್ಯದ ವ್ಯವಸ್ಥೆ ಮಾಡಿತ್ತು. ರಾಷ್ಟ್ರಪತಿ ಅಥವಾ ಬೇರೆ ದೇಶದ ಮುಖ್ಯಸ್ಥರು ಉಳಿಯಲೆಂದೇ ಇರುವ ವಿಐಪಿ ಕೋಣೆಗಳನ್ನು (Presidential Suite) ಜಸ್ಟಿನ್‌ ಟ್ರುಡೋ ಅವರಿಗೆ ನೀಡಲಾಗಿತ್ತು. ಆದರೆ, ಜಸ್ಟಿನ್‌ ಟ್ರುಡೋ ಅವರು ಈ ಕೋಣೆಗಳಲ್ಲಿ ಇರಲು ಒಪ್ಪದೆ, ಸಾಮಾನ್ಯ ಕೋಣೆಗಳಲ್ಲಿಯೇ ಉಳಿಯುವ ಮೂಲಕ ಭಾರತದ ಸಿಬ್ಬಂದಿಗೆ ರಕ್ಷಣೆಯ ತಲೆನೋವು ತಂದಿದ್ದರು ಎಂದು ಮೂಲಗಳು ತಿಳಿಸಿವೆ.

ಬುಲೆಟ್‌ಪ್ರೂಫ್‌ ಗಾಜುಗಳುಳ್ಳ ಕೋಣೆಗಳ ವ್ಯವಸ್ಥೆ

ಕೇಂದ್ರೀಯ ದೆಹಲಿಯಲ್ಲಿರುವ ಲಲಿತ್‌ನಲ್ಲಿ ಜಸ್ಟಿನ್‌ ಟ್ರುಡೋ ಹಾಗೂ ಅವರ ನಿಯೋಗ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬುಲೆಟ್‌ಪ್ರೂಫ್‌ ಗಾಜುಗಳುಳ್ಳ ಕೋಣೆಗಳನ್ನು ಅವರಿಗಾಗಿ ಮೀಸಲಿರಿಸಲಾಗಿತ್ತು. ಸಕಲ ವ್ಯವಸ್ಥೆಗಳುಳ್ಳ, ಹೆಚ್ಚು ಭದ್ರತೆಗಳುಳ್ಳ ಹೋಟೆಲ್‌ಗಳನ್ನು ಕೇಂದ್ರ ಸರ್ಕಾರ ಕಾಯ್ದಿರಿಸಿತ್ತು. ದೆಹಲಿ ಪೊಲೀಸರ ಕಾವು ಹೋಟೆಲ್‌ಗಳಿಗೆ ಇತ್ತು. ಇವೆಲ್ಲ ಸೌಲಭ್ಯಗಳನ್ನು ತಿರಸ್ಕರಿಸಿದ ಜಸ್ಟಿನ್‌ ಟ್ರುಡೋ, ಸಾಮಾನ್ಯ ಕೋಣೆಗಳಲ್ಲಿ ಇರುವ ಮೂಲಕ ತಲೆನೋವು ತಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: India Canada Row: ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ

ಜಿ20 ಶೃಂಗಸಭೆ ಬಳಿ ಮುಗಿಸಿ ತಮ್ಮ ದೇಶಕ್ಕೆ ತೆರಳಬೇಕಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರು ಹಾಗೂ ಅವರ ನಿಯೋಗವು 36 ಗಂಟೆ ದೆಹಲಿಯಲ್ಲಿಯೇ ಉಳಿದಿತ್ತು. ಆದರೆ, ಅವರು ಕೆನಡಾಗೆ ಹಿಂದಿರುಗಲು ಕೇಂದ್ರ ಸರ್ಕಾರವು ‘ಏರ್‌ ಇಂಡಿಯಾ ಒನ್’ ವಿಮಾನದ ಆಫರ್‌ ನೀಡಿದರೂ ಜಸ್ಟಿನ್‌ ಟ್ರುಡೋ ಅವರು, ಆಫರ್‌ ತಿರಸ್ಕರಿಸಿ ದೆಹಲಿಯಲ್ಲಿಯೇ ಉಳಿದಿದ್ದರು. ಅವರ ವಿಶೇಷ ವಿಮಾನ ಬರುವವರೆಗೆ ಕಾದು, ಅದರಲ್ಲಿಯೇ ಟ್ರುಡೋ ಕೆನಡಾಗೆ ಹಿಂದಿರುಗಿದ್ದರು.

Exit mobile version