Site icon Vistara News

Female Ownership : ಕರ್ನಾಟಕದ ಶೇ.68 ಆಸ್ತಿಗಳಿಗೆ ಮಹಿಳೆಯರು ಮಾಲೀಕರು : ವಿಶ್ವ ಬ್ಯಾಂಕ್‌ ಅಧ್ಯಯನ

karnataka-has-more-asset-with-female-ownership

#image_title

ಬೆಂಗಳೂರು: ಮಹಿಳಾ ಸಬಲೀಕರಣದ ಕುರಿತು ಹೆಚ್ಚಾಗುತ್ತಿರುವ ಜಾಗೃತಿ, ಸರ್ಕಾರದ ಉತ್ತೇಜನ ಕ್ರಮಗಳು ಸೇರಿ ಕರ್ನಾಟಕದ ಶೇ.67.6 ಆಸ್ತಿಗಳಿಗೆ ಮಹಿಳೆಯರೂ ಮಾಲೀಕರಾಗಿದ್ದಾರೆ (Female Ownership). ಮಹಿಳೆಯರೇ ಪೂರ್ಣ ಮಾಲೀಕರಾಗಿರುವ ಹಾಗೂ ಜಂಟಿ ಮಾಲೀಕತ್ವ ಹೊಂದಿರುವ ಆಸ್ತಿಗಳನ್ನು ಪರಿಗಣಿಸಿ ವಿಶ್ವಬ್ಯಾಂಕ್‌ ಸಮೂಹದ ಅಧ್ಯಯನ ತಿಳಿಸಿದೆ.

ರಾಜುಲ್‌ ಆವಸ್ಥಿ, ಕೇಟಿ ಪೈಲ್‌, ನಮಿತಾ ಅಗರ್ವಾಲ್‌ ಹಾಗೂ ಪರ್ವೀಣಾ ರಾಖಿಮೋವಾ 2019-20ರ ಅವಧಿವರೆಗೆ ವಿಶ್ವ ಬ್ಯಾಂಕ್‌ ಸಮೂಹದ ಈ ಅಧ್ಯಯನವನ್ನು ನಡೆಸಿದ್ದಾರೆ. ಭಾರತದ ಒಟ್ಟು ಎಂಟು ರಾಜ್ಯಗಳಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ.

ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಶೇ. 64.5 ಆಸ್ತಿಗಳಿಗೆ ಮಹಿಳೆಯರೂ ಮಾಲೀಕರಾಗಿದ್ದರೆ, ನಗರ ಪ್ರದೇಶದಲ್ಲಿ ಇದು 69.7 ಇದೆ. ಒಟ್ಟಾರೆಯಾಗಿ 67.6 ಆಸ್ತಿಗಳಿಗೆ ಮಹಿಳೆಯರೂ ಮಾಲೀಕತ್ವ ಹೊಂದಿದ್ದಾರೆ. ಕರ್ನಾಟಕದ ಹೋಲಿಕೆಯಲ್ಲಿ ಒಡಿಶಾ (ಶೇ.43.5), ಮಹಾರಾಷ್ಟ್ರ(ಶೇ.22.9), ಗುಜರಾತ್‌ (ಶೇ.42.6), ದೆಹಲಿ (ಶೇ.22.7) ಇದೆ. ಒಟ್ಟಾರೆ ಭಾರತದಲ್ಲಿ ಸರಾಸರಿ ಶೇ.43.3 ಇದೆ. ಕರ್ನಾಟಕವು ರಾಷ್ಟ್ರೀಯ ಸರಾಸರಿಗಿಂತಲೂ ಮುಂದೆ.

2015-16ರ ಹೋಲಿಕೆಯಲ್ಲಿ (ಶೇ.57.5) ಕರ್ನಾಟಕದಲ್ಲಿ ಮಹಿಳೆಯರೂ ಮಾಲೀಕರಾಗಿರುವ ಆಸ್ತಿಯ ಪ್ರಮಾಣ ಶೇ. 15.8 ಏರಿಕೆ ಕಂಡಿದೆ.

ವಿವಿಧ ರಾಜ್ಯಗಳಲ್ಲಿ ಸ್ಥಿತಿ

ಕಾರಣ ಏನು?
ಮಹಿಳೆಯರಿಗೆ ಆಸ್ತಿ ಹಕ್ಕುಗಳನ್ನು ನೀಡುವಲ್ಲಿ ಬಹಳಷ್ಟು ಅಂಶಗಳು ಪ್ರಭಾವ ಬೀರಿವೆ ಎಂದು ವರದಿ ತಿಳಿಸಿದೆ.‌ ಕುಟುಂಬದ ಆಸ್ತಿಯಲ್ಲಿ ಮಹಿಳೆಯರಿಗೂ ಪಾಲನ್ನು ನೀಡಿದ ಸುಪ್ರೀಂಕೋರ್ಟ್‌ ಆದೇಶವೂ ಒಂದು ಪಾತ್ರ ವಹಿಸಿದೆ. ಮಹಿಳೆಯರು ಮಾಲೀಕರಾಗಿರುವ ಆಸ್ತಿಗಳಿಗೆ ತೆರಿಗೆಯಲ್ಲಿ ಅನೇಕ ರಾಜ್ಯಗಳು ರಿಯಾಯಿತಿ ಘೋಷಣೆ ಮಾಡಿರುವುದು, ನೋಂದಣಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಮಹಿಳಾ ಮಾಲೀಕತ್ವ ಹೊಂದಿದ್ದರೆ ಹೆಚ್ಚಿನ ಪ್ರಮಾಣದ ಗೃಹಸಾಲ ಸಿಗುತ್ತದೆ. ಇದರಿಂದಾಗಿ ಮಹಿಳೆಯರು ಹೆಚ್ಚೆಚ್ಚು ಮಾರುಕಟ್ಟೆ, ವ್ಯಾಪಾರಗಳಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಗುತ್ತಿದೆ ಎಂದು ವರದಿ ಒಟ್ಟಾರೆಯಾಗಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : WIPL 2023: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್; 5 ತಂಡ ಘೋಷಣೆ; ಒಂದು ತಂಡ ಅದಾನಿ ಪಾಲು

Exit mobile version