Site icon Vistara News

coronavirus | ಕೋವಿಡ್-19 ಉಪತಳಿ ಮೇಲೆ ಕಣ್ಗಾವಲು: ಸಂಸತ್ತಿಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ

Mansukh Mandaviya @ Corona Virus

ನವದೆಹಲಿ: ಚೀನಾದಲ್ಲಿ ಕೋವಿಡ್-19 ಪ್ರಕರಣಗಳ (coronavirus) ಹೆಚ್ಚಳಕ್ಕೆ ಕಾರಣವಾಗಿರುವ ಕೊರೊನಾ ಉಪತಳಿಗಳ ಬಗ್ಗೆ ಭಾರತದಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಹಾಗೆಯೇ, ಮಾಸ್ಕ್‌ಗಳನ್ನು ಕಡ್ಡಾಯ ಮಾಡುವಂತೆಯೂ ತಿಳಿಸಲಾಗಿದೆ ಎಂದು ತಿಳಿಸಿದರು.

ಜಾಗತಿಕ ಕೋವಿಡ್ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದೇವೆ. ಜಾಗತಿಕ ಬೆಳವಣಿಗೆಗಳ ಅನುಸಾರವೇ ನಾವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹಾಗಾಗಿ, ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳನ್ನು ಹೆಚ್ಚಿಸುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ನಿಯಂತ್ರಣಕ್ಕೆ ಬೇಕಾಗಿರುವ ಎಲ್ಲ ಸಹಾಯವನ್ನು ರಾಜ್ಯಗಳಿಗೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ 220 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮಾಂಡವೀಯಾ ಅವರು ತಿಳಿಸಿದರು.

ಕಳೆದ ಕೆಲವು ದಿನಗಳಿಂದ ಜಗತ್ತಿನಾದ್ಯಂತ ಕೋವಿಡ್ ಕೇಸ್‌ಗಳು ಹೆಚ್ಚಳವಾಗುತ್ತಿವೆ. ಆದರೆ, ಭಾರತದಲ್ಲಿ ಸ್ಥಿರವಾಗಿದೆ. ಚೀನಾದಲ್ಲಂತೂ ಕೋವಿಡ್ ಪ್ರಕರಣಗಳು ಹೆಚ್ಚಳ ಮಾತ್ರವಲ್ಲದೇ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ | Corona Virus | ರಾಜ್ಯದಲ್ಲಿ 18 ಜನರಲ್ಲಿ ಕೋವಿಡ್‌ ವೈರಸ್‌ ಪತ್ತೆ, ಮಾಸ್ಕ್‌ ಕಡ್ಡಾಯ ಆದೇಶ ಜಾರಿ ಸಾಧ್ಯತೆ

Exit mobile version