Site icon Vistara News

Kapil Sibal: ವೈದ್ಯೆ ಕೊಲೆ ಕೇಸ್‌- ಸುಪ್ರೀಂಕೋರ್ಟ್‌ ವಿಚಾರಣೆ ವೇಳೆ ಎಲ್ಲರೆದುರು ಜೋರಾಗಿ ನಕ್ಕ ಕಪಿಲ್‌ ಸಿಬಲ್‌-ಭಾರೀ ಆಕ್ರೋಶ ವ್ಯಕ್ತ

Kapil sibal

ಕೋಲ್ಕತ್ತಾ: ಟೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್‌(Supreme Court) ವಿಚಾರಣೆ ನಡೆಯಿತು. ಈ ವೇಳೆ ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ಕಪಿಲ್‌ ಸಿಬಲ್‌(Kapil Sibal) ತಮ್ಮ ಬೇಜವಾಬ್ದಾರಿಯುವ ನಡೆಯಿಂದಾಗಿ ವಿವಾದಕ್ಕೀಡಾಗಿದ್ದಾರೆ. ವಿಚಾರಣೆ ವೇಳೆ ಕಪಿಲ್‌ ಸಿಬಲ್‌ ನಗುವ ಮೂಲಕ ವಿಲಕ್ಷಣ ವರ್ತನೆ ತೋರಿದ್ದು, ಅವರ ವರ್ತನೆಗೆ ಸಾಲಿಸಿಟರ್‌ ಜನರಲ್‌ ಗರಂ ಆಗಿದ್ದಾರೆ.

ಏನಿದು ಘಟನೆ?

ಕೋಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯುತ್ತಿತ್ತು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಸಿಬಲ್ ಮತ್ತು ತುಷಾರ್ ಮೆಹ್ತಾ ನಡುವೆ ವಾದ ನಡೆಯುತ್ತಿರುವಾಗ ಹಿರಿಯ ವಕೀಲರು ನಕ್ಕಿದ್ದಾರೆ. ಸರ್ಕಾರಿ ವಕೀಲರು ಪೊಲೀಸರಿಂದ ಎಫ್‌ಐಆರ್‌ನ ದಾಖಲಾತಿಯಲ್ಲಿನ ವ್ಯತ್ಯಾಸವನ್ನು ಪ್ರಸ್ತಾಪಿಸಿ ಅದನ್ನು ಎತ್ತಿ ತೋರಿಸುತ್ತಿದ್ದ ಸಂದರ್ಭದಲ್ಲಿ ಕಪಿಲ್‌ ಸಿಬಲ್‌ ಬಹಳ ನಿರ್ಲಕ್ಷ್ಯವಾಗಿ, ಬೆಜವಾಬ್ದಾರಿಯುವಾಗಿ ನಕ್ಕಿದ್ದಾರೆ.

ಇದಕ್ಕೆ ಸಿಟ್ಟುಗೊಂಡ ಮೆಹ್ತಾ, ಒಂದು ಹುಡುಗಿ ತನ್ನ ಪ್ರಾಣವನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಕಳೆದುಕೊಂಡಿದ್ದಾಳೆ. ಯಾರೋ ಸತ್ತಿದ್ದಾರೆ. ಇದು ನಗುವಂತಹ ವಿಚಾರವಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇನ್ನು ಈ ಘಟನೆಯ ವಿಡಿಯೊವನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್‌ ಆಗುತ್ತಿದೆ. 32 ಸೆಕೆಂಡ್ ಅವಧಿಯ ಕ್ಲಿಪ್ ಅನ್ನು ಹಂಚಿಕೊಂಡ ಬಿಜೆಪಿಯ ಅಮಿತ್ ಮಾಳವಿಯಾ, ಸಿಬಲ್ ಅವರ ವರ್ತನೆಯನ್ನು ಟೀಕಿಸಿದ್ದಾರೆ.

ಮಾಳವಿಯಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಕೇಂದ್ರ ಸಚಿವ ಕಪಿಲ್‌ ಸಿಬಲ್‌ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಂತೆ ಕೋಲ್ಕತ್ತಾ ವೈದ್ಯೆ ಹತ್ಯೆ ಬಗ್ಗೆ ಕಿಂಚಿತ್ತೂ ನೋವಿಲ್ಲ. ಹೀಗಾಗಿಯೇ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನಗಬೇಡಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕಪಿಲ್ ಸಿಬಲ್ ಅವರಿಗೆ ನೆನಪಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಬರೋಬ್ಬರಿ 11ದಿನಗಳ ಬಳಿಕ ಮುಷ್ಕರ ಹಿಂಪಡೆದ ವೈದ್ಯರು

Exit mobile version