ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case)ದಲ್ಲಿ ಇನ್ನಷ್ಟು ಆತಂಕಕಾರಿ ವಿವರಗಳು ಹೊರಬಿದ್ದಿವೆ. ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜೋಯ್ ರಾಯ್, ಆಕೆಯ ಕನ್ನಡಕವನ್ನು ಒಡೆದುಹಾಕುವಷ್ಟು ಬಲವಾಗಿ ಹೊಡೆದಿದ್ದರಿಂದ ಆಕೆಯ ಕಣ್ಣುಗಳಿಗೆ ಗಾಜಿನ ಚೂರುಗಳು ಚುಚ್ಚಿದವು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಗಿದೆ.
ವರದಿಯಲ್ಲಿ, “ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವ ಮತ್ತು ಮುಖದ ಮೇಲೆ ಗಾಯಗಳಾಗಿದ್ದವು. ಸಂತ್ರಸ್ತೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವೂ ಆಗಿತ್ತು. ಆಕೆಯ ಹೊಟ್ಟೆ, ಎಡಗಾಲು… ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು… ತುಟಿಗಳಲ್ಲಿ ಗಾಯಗಳಾಗಿವೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.
ಇಲ್ಲಿದೆ ಕೆಲವು ಪ್ರಮುಖ ಸಂಗತಿ
- ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ಎಸಗಿದ ನಂತರ ಸಂಜಯ್ ರಾಯ್ ಆಕೆಯ ಕತ್ತು ಹಿಸು ಕಿ ಕೊಲೆ ಮಾಡಿದ್ದಾನೆ. ಬೆಳಗ್ಗಿನ ಜಾವ 3ಗಂಟೆಯಿಂದ 5ಗಂಟೆ ನಡುವೆ ಈ ಕೃತ್ಯ ಎಸಗಿದ್ದಾನೆ.
- ಸಂಜಯ್ ರಾಯ್ ಅಶ್ಲೀಲ ಸಿನಿಮಾಗಳ ಗೀಳು ಇಟ್ಟುಕೊಂಡಿದ್ದ. ಆತ ಮೊಬೈಲ್‌ನಲ್ಲಿ ಅಂತಹ ವಿಡಿಯೋಗಳೇ ತುಂಬಿತ್ತು.
- 2019 ರಲ್ಲಿ ನಾಗರಿಕ ಸ್ವಯಂಸೇವಕರಾಗಿ ಕೋಲ್ಕತ್ತಾ ಪೊಲೀಸ್‌ಗೆ ಸೇರಿದ 33 ವರ್ಷದ ಆರೋಪಿ, ಕನಿಷ್ಠ ನಾಲ್ಕು ಬಾರಿ ವಿವಾಹವಾಗಿದ್ದನಂತೆ. ಈತನೋರ್ವ ಮಹಿಳಾ ಪೀಡಕನಾಗಿದ್ದ ಎನ್ನಲಾಗಿದೆ. ಈ ಹಿಂದೆ ತನ್ನ ಎಲ್ಲಾ ಪತ್ನಿಯರನ್ನು ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದ.
- ಸಂಜೋಯ್ ರಾಯ್ ಮೊದಲ ಹೆಂಡತಿ ಬೆಹಾಲಾ ಮೂಲದವಳಾಗಿದ್ದರೆ, ಎರಡನೇ ಹೆಂಡತಿ ಪಾರ್ಕ್ ಸರ್ಕಸ್‌ನಿಂದ ಬಂದವಳು. ಬ್ಯಾರಕ್‌ಪುರದ ಹುಡುಗಿಯನ್ನು ಮೂರನೇ ಬಾರಿಗೆ ವಿವಾಹವಾಗಿದ್ದ. ಆದರೆ ಅದೂ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಅವರು ನಗರದ ಅಲಿಪುರ ಪ್ರದೇಶದ ಹುಡುಗಿಯನ್ನು ಮದುವೆಯಾಗಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
- ಇಷ್ಟೆಲ್ಲಾ ಆದರೂ ತನ್ನ ಮಗ ಅಮಾಯಕ, ಆತನ ವಿರುದ್ಧದ ಆರೋಪಗಳು ಸುಳ್ಳು ಎಂದು ಸಂಜಯ್ ರಾಯ್ ತಾಯಿ ಮಾಲತಿ ರಾಯ್ ಹೇಳಿದ್ದಾರೆ.
ಏನಿದು ಘಟನೆ?
ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ(West Bengal)ದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ದೆಹಲಿ ಏಮ್ಸ್(AIIMS) ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(FORDA) ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.
ಇದನ್ನೂ ಓದಿ: Kolkata Doctor Murder Case: ʼಬೇಕಿದ್ದರೆ ಗಲ್ಲಿಗೇರಿಸಿʼ.. ವಿಚಾರಣೆ ವೇಳೆ ವೈದ್ಯೆಯ ಹಂತಕನ ಉಡಾಫೆ ಉತ್ತರ