Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ; ಶಾಕಿಂಗ್‌ ಸಂಗತಿ ಬಯಲು - Vistara News

ದೇಶ

Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ; ಶಾಕಿಂಗ್‌ ಸಂಗತಿ ಬಯಲು

Kolkata Doctor Murder Case: ವರದಿಯಲ್ಲಿ, “ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವ ಮತ್ತು ಮುಖದ ಮೇಲೆ ಗಾಯಗಳಾಗಿದ್ದವು. ಸಂತ್ರಸ್ತೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವೂ ಆಗಿತ್ತು. ಆಕೆಯ ಹೊಟ್ಟೆ, ಎಡಗಾಲು… ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು… ತುಟಿಗಳಲ್ಲಿ ಗಾಯಗಳಾಗಿವೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.

VISTARANEWS.COM


on

Kolkata Doctor Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲ್ಕತ್ತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case)ದಲ್ಲಿ ಇನ್ನಷ್ಟು ಆತಂಕಕಾರಿ ವಿವರಗಳು ಹೊರಬಿದ್ದಿವೆ. ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸಂಜೋಯ್ ರಾಯ್, ಆಕೆಯ ಕನ್ನಡಕವನ್ನು ಒಡೆದುಹಾಕುವಷ್ಟು ಬಲವಾಗಿ ಹೊಡೆದಿದ್ದರಿಂದ ಆಕೆಯ ಕಣ್ಣುಗಳಿಗೆ ಗಾಜಿನ ಚೂರುಗಳು ಚುಚ್ಚಿದವು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಯಲಾಗಿದೆ.

ವರದಿಯಲ್ಲಿ, “ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತಸ್ರಾವ ಮತ್ತು ಮುಖದ ಮೇಲೆ ಗಾಯಗಳಾಗಿದ್ದವು. ಸಂತ್ರಸ್ತೆಯ ಖಾಸಗಿ ಭಾಗಗಳಿಂದ ರಕ್ತಸ್ರಾವವೂ ಆಗಿತ್ತು. ಆಕೆಯ ಹೊಟ್ಟೆ, ಎಡಗಾಲು… ಕುತ್ತಿಗೆ, ಬಲಗೈ, ಉಂಗುರ ಬೆರಳು ಮತ್ತು… ತುಟಿಗಳಲ್ಲಿ ಗಾಯಗಳಾಗಿವೆ ಎಂಬುದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ.

ಇಲ್ಲಿದೆ ಕೆಲವು ಪ್ರಮುಖ ಸಂಗತಿ

  1. ವೈದ್ಯೆಯ ಮೇಲೆ ಅತ್ಯಾಚಾರ ಕೊಲೆ ಎಸಗಿದ ನಂತರ ಸಂಜಯ್‌ ರಾಯ್‌ ಆಕೆಯ ಕತ್ತು ಹಿಸು ಕಿ ಕೊಲೆ ಮಾಡಿದ್ದಾನೆ. ಬೆಳಗ್ಗಿನ ಜಾವ 3ಗಂಟೆಯಿಂದ 5ಗಂಟೆ ನಡುವೆ ಈ ಕೃತ್ಯ ಎಸಗಿದ್ದಾನೆ.
  2. ಸಂಜಯ್‌ ರಾಯ್‌ ಅಶ್ಲೀಲ ಸಿನಿಮಾಗಳ ಗೀಳು ಇಟ್ಟುಕೊಂಡಿದ್ದ. ಆತ ಮೊಬೈಲ್‌ನಲ್ಲಿ ಅಂತಹ ವಿಡಿಯೋಗಳೇ ತುಂಬಿತ್ತು.
  3. 2019 ರಲ್ಲಿ ನಾಗರಿಕ ಸ್ವಯಂಸೇವಕರಾಗಿ ಕೋಲ್ಕತ್ತಾ ಪೊಲೀಸ್‌ಗೆ ಸೇರಿದ 33 ವರ್ಷದ ಆರೋಪಿ, ಕನಿಷ್ಠ ನಾಲ್ಕು ಬಾರಿ ವಿವಾಹವಾಗಿದ್ದನಂತೆ. ಈತನೋರ್ವ ಮಹಿಳಾ ಪೀಡಕನಾಗಿದ್ದ ಎನ್ನಲಾಗಿದೆ. ಈ ಹಿಂದೆ ತನ್ನ ಎಲ್ಲಾ ಪತ್ನಿಯರನ್ನು ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದ.
  4. ಸಂಜೋಯ್ ರಾಯ್ ಮೊದಲ ಹೆಂಡತಿ ಬೆಹಾಲಾ ಮೂಲದವಳಾಗಿದ್ದರೆ, ಎರಡನೇ ಹೆಂಡತಿ ಪಾರ್ಕ್ ಸರ್ಕಸ್‌ನಿಂದ ಬಂದವಳು. ಬ್ಯಾರಕ್‌ಪುರದ ಹುಡುಗಿಯನ್ನು ಮೂರನೇ ಬಾರಿಗೆ ವಿವಾಹವಾಗಿದ್ದ. ಆದರೆ ಅದೂ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ನಂತರ ಅವರು ನಗರದ ಅಲಿಪುರ ಪ್ರದೇಶದ ಹುಡುಗಿಯನ್ನು ಮದುವೆಯಾಗಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ.
  5. ಇಷ್ಟೆಲ್ಲಾ ಆದರೂ ತನ್ನ ಮಗ ಅಮಾಯಕ, ಆತನ ವಿರುದ್ಧದ ಆರೋಪಗಳು ಸುಳ್ಳು ಎಂದು ಸಂಜಯ್‌ ರಾಯ್‌ ತಾಯಿ ಮಾಲತಿ ರಾಯ್‌ ಹೇಳಿದ್ದಾರೆ.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ(West Bengal)ದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ದೆಹಲಿ ಏಮ್ಸ್‌(AIIMS) ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(FORDA) ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.

ಇದನ್ನೂ ಓದಿ: Kolkata Doctor Murder Case: ʼಬೇಕಿದ್ದರೆ ಗಲ್ಲಿಗೇರಿಸಿʼ.. ವಿಚಾರಣೆ ವೇಳೆ ವೈದ್ಯೆಯ ಹಂತಕನ ಉಡಾಫೆ ಉತ್ತರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Patanjali Ayurved Ads: ನ್ಯಾಯಾಂಗ ನಿಂದನೆ ಪ್ರಕರಣ ರದ್ದು; ಬಾಬಾ ರಾಮದೇವ್‌ಗೆ ಬಿಗ್‌ ರಿಲೀಫ್

Patanjali Ayurved Ads: ಆಧುನಿಕ ಔಷಧದ ವಿರುದ್ಧ ರಾಮ್‌ದೇವ್ ಮತ್ತು ಪತಂಜಲಿಯವರ ಅವಹೇಳನಕಾರಿ ಹೇಳಿಕೆಗಳ ವಿರುದ್ಧ 2022 ರಲ್ಲಿ ಸುಪ್ರೀಂ ಕೋರ್ಟ್‌ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಹಿಂಪಡೆಯುವಂತೆ ಆದೇಶ ನೀಡಿತ್ತು. ಕೊರ್ಟ್‌ ಆದೇಶದಂತೆ ಪತಂಜಲಿ ತನ್ನ ಎಲ್ಲಾ ಜಾಹೀರಾತನ್ನು ವಾಪಸ್‌ ಪಡೆದಿದೆ. ಹೀಗಾಗಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ರದ್ದುಗೊಳಿಸಲಾಗಿದೆ.

VISTARANEWS.COM


on

Patanjali ads
Koo

ನವದೆಹಲಿ: ಜನರ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurved Ads) ಮುಖ್ಯಸ್ಥ ಬಾಬಾ ರಾಮದೇವ್‌ (Baba Ramdev) ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ (Acharya Balkrishna) ಅವರ ವಿರುದ್ಧದ ನ್ಯಾಯಾಂಗ ನಿಂದನೆ(contempt case) ಪ್ರಕರಣವನ್ನು ಸುಪ್ರೀಂಕೋರ್ಟ್‌(Supreme Court) ರದ್ದುಗೊಳಿಸಿದೆ.

ಆಧುನಿಕ ಔಷಧದ ವಿರುದ್ಧ ರಾಮ್‌ದೇವ್ ಮತ್ತು ಪತಂಜಲಿಯವರ ಅವಹೇಳನಕಾರಿ ಹೇಳಿಕೆಗಳ ವಿರುದ್ಧ 2022 ರಲ್ಲಿ ಸುಪ್ರೀಂ ಕೋರ್ಟ್‌ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಹಿಂಪಡೆಯುವಂತೆ ಆದೇಶ ನೀಡಿತ್ತು. ಕೊರ್ಟ್‌ ಆದೇಶದಂತೆ ಪತಂಜಲಿ ತನ್ನ ಎಲ್ಲಾ ಜಾಹೀರಾತನ್ನು ವಾಪಸ್‌ ಪಡೆದಿದೆ. ಹೀಗಾಗಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ರದ್ದುಗೊಳಿಸಲಾಗಿದೆ.

ಏನಿದು ಪ್ರಕರಣ?

ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್‌ ಆ್ಯಂಡ್‌ ಮ್ಯಾಜಿಕ್‌ ರೆಮೆಡೀಸ್‌ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರು ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ರೋಗಗಳ ನಿವಾರಣೆ ಕುರಿತು ಪತಂಜಲಿ ಸಂಸ್ಥೆಯು ಜನರ ದಾರಿತಪ್ಪಿಸುವ ರೀತಿ ಜಾಹೀರಾತು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥೆ ಸಹ ಸಂಸ್ಥಾಪಕ ಬಾಬಾ ರಾಮದೇವ್‌ ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಬಾಬಾ ರಾಮದೇವ್‌ ಆಪ್ತ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಸುಪ್ರೀಂ ಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್‌ ಹೊರಡಿಸಿತ್ತು. ಇಷ್ಟಾದರೂ, ಬಾಬಾ ರಾಮದೇವ್‌ ಆಗಲಿ, ಆಚಾರ ಬಾಲಕೃಷ್ಣ ಆಗಲಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್‌, ಏಪ್ರಿಲ್‌ 2ರಂದು ಇಬ್ಬರೂ ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತ್ತು. ಹಾಗೆಯೇ, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನೇಕೆ ಆರಂಭಿಸಬಾರದು ಎಂದು ಕುಟುಕಿತ್ತು. ಇದಾದ ಬಳಿಕ ಇಬ್ಬರೂ ಸುಪ್ರೀಂ ಕೋರ್ಟ್‌ಗೆ ಬೇಷರತ್‌ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ: Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್‌ ರದ್ದು, ಬಾಬಾ ರಾಮದೇವ್‌ ವಿರುದ್ಧ ಬಿತ್ತು ಕೇಸ್

Continue Reading

ದೇಶ

Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

Kolkata Doctor Murder Case: ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದಿಲ್ಲಿ ಸೇರಿದಂತೆ ಅನೇಕ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ವೈದ್ಯರು ಪ್ರತಿಭಟನೆ ನಡೆಸಿ, ನೋ ಸೇಫ್ಟಿ….ನೋ ಡ್ಯೂಟಿ ಎಂದು ಘೋಷಣೆ ಕೂಗಿದರು. ಇನ್ನು ಹಲವೆಡೆ ಚಿಕಿತ್ಸೆ ನೀಡುವಂತೆ ರೋಗಿಗಳು ಒಪಿಡಿ ಬಾಗಿಲು ಬಡಿಯುತ್ತಿರುವ ದೃಶ್ಯ ಕಂಡು ಬಂತು. ಅಗತ್ಯ ಸೇವೆಗಳು ತೆರೆದಿರುತ್ತವೆ ಎಂದು ವೈದ್ಯರ ಸಂಘ ಸ್ಪಷ್ಟಪಡಿಸಿದ್ದರೂ, ಹೊರರೋಗಿ ವಿಭಾಗಗಳ (OPDs) ಹೊರಗೆ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ.

VISTARANEWS.COM


on

kolkata doctor murder case
Koo

ಕೋಲ್ಕತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case) ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ, ಧರಣಿ ಭುಗಿಲೆದ್ದಿದೆ. ಅನೇಕ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್‌ ಮಾಡಿ ವೈದ್ಯರು ಪ್ರತಿಭಟನೆ ನಡೆಸಿದ್ದು, ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತಾಯಿತು.

ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದಿಲ್ಲಿ ಸೇರಿದಂತೆ ಅನೇಕ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ವೈದ್ಯರು ಪ್ರತಿಭಟನೆ ನಡೆಸಿ, ನೋ ಸೇಫ್ಟಿ….ನೋ ಡ್ಯೂಟಿ ಎಂದು ಘೋಷಣೆ ಕೂಗಿದರು. ಇನ್ನು ಹಲವೆಡೆ ಚಿಕಿತ್ಸೆ ನೀಡುವಂತೆ ರೋಗಿಗಳು ಒಪಿಡಿ ಬಾಗಿಲು ಬಡಿಯುತ್ತಿರುವ ದೃಶ್ಯ ಕಂಡು ಬಂತು. ಅಗತ್ಯ ಸೇವೆಗಳು ತೆರೆದಿರುತ್ತವೆ ಎಂದು ವೈದ್ಯರ ಸಂಘ ಸ್ಪಷ್ಟಪಡಿಸಿದ್ದರೂ, ಹೊರರೋಗಿ ವಿಭಾಗಗಳ (OPDs) ಹೊರಗೆ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ(West Bengal)ದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ದೆಹಲಿ ಏಮ್ಸ್‌(AIIMS) ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(FORDA) ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.

ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ; ಏಮ್ಸ್‌ ವೈದ್ಯರ ಪ್ರೊಟೆಸ್ಟ್‌-ಪ್ರಾಂಶುಪಾಲರು ರಿಸೈನ್‌

Continue Reading

ದೇಶ

Gurmeet Ram Rahim: ಮತ್ತೆ ಜೈಲಿನಿಂದ ಹೊರಬಂದ ಗುರ್ಮೀತ್ ರಾಮ್​ ರಹೀಮ್​; ನಾಲ್ಕು ವರ್ಷಗಳಲ್ಲಿ 10ನೇ ಬಾರಿ ಪೆರೋಲ್‌!

Gurmeet Ram Rahim: ಉತ್ತರಪ್ರದೇಶದ ಭಾಗ್‌ಪಟ್‌ ಜಿಲ್ಲೆಯಲ್ಲಿರುವ ಡೇರಾ ಸಚ್ಚಾ ಸೌಧ ಆಶ್ರಮದಲ್ಲಿ ಅವರು ತಂಗಲಿದ್ದಾರೆ. 56 ವರ್ಷದ ರಾಮ್ ರಹೀಮ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಎಂಟು ಪ್ರತ್ಯೇಕ ಸಂದರ್ಭಗಳಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

VISTARANEWS.COM


on

gurmeet ram rahim
Koo

ನವದೆಹಲಿ: ಕೊಲೆ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌಧ(Dera Sacha Sauda)ದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​(Gurmeet Ram Rahim) ಮತ್ತೆ ಫರ್ಲೋ ಮೇಲೆ ಹೊರಬಂದಿದ್ದಾರೆ. ಆ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ ಇದು ಹತ್ತನೇ ಬಾರಿ ಅವರು ಇಂತಹ ಫರ್ಲೋ(Furlough) ಮೂಲಕ ಹೊರಬರುತ್ತಿರುವುದು. 21 ದಿನಗಳ ಕಾಲ ರಿಲೀಫ್‌ ಪಡೆದಿರುವ ಗುರ್ಮೀತ್ ರಾಮ್​ ರಹೀಮ್ ಇಂದು ಬೆಳಗ್ಗೆ 6:30ಕ್ಕೆ ಜೈಲಿನಿಂದ ಹೊರ ಬಂದಿದ್ದಾರೆ.

ಮೂಲಗಳ ಪ್ರಕಾರ ಉತ್ತರಪ್ರದೇಶದ ಭಾಗ್‌ಪಟ್‌ ಜಿಲ್ಲೆಯಲ್ಲಿರುವ ಡೇರಾ ಸಚ್ಚಾ ಸೌಧ ಆಶ್ರಮದಲ್ಲಿ ಅವರು ತಂಗಲಿದ್ದಾರೆ. 56 ವರ್ಷದ ರಾಮ್ ರಹೀಮ್, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿ ಮಾಡಲು ಮನವಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಎಂಟು ಪ್ರತ್ಯೇಕ ಸಂದರ್ಭಗಳಲ್ಲಿ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಏನಿದು ಫರ್ಲೋ?

ಫರ್ಲೋ ಮತ್ತು ಪೆರೋಲ್‌ ನಡುವ ಸ್ವಲ್ಪ ವ್ಯತ್ಯಾಸ ಇದೆ. ಪೆರೋಲ್‌ ನೀಡಲೂ ಬಹುದು ಅಥವಾ ಅದನ್ನು ತಿರಸ್ಕರಿಸುವ ಅವಕಾಶ ಇದೆ. ಆದರೆ ಫರ್ಲೋ ಅಂದರೆ ಶಿಕ್ಷೆಯ ನಿಗದಿತ ಭಾಗವನ್ನು ಪೂರ್ಣಗೊಳಿಸಿದ ನಂತರ ಕೈದಿಯ ಕಿರು ಬಿಡುಗಡೆಯಾಗಿದೆ. ಇದು ಕೈದಿಯ ಅಧಿಕಾರವಾಗಿರುತ್ತದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅವರಿಗೆ ತಾತ್ಕಾಲಿಕ ಬಿಡುಗಡೆಯ ಮಂಜೂರಾತಿಯನ್ನು ಪ್ರಶ್ನಿಸಿದ ಅರ್ಜಿಯನ್ನು ವಜಾಗೊಳಿಸಿದ ಬಳಿಕ ರಾಮ್ ರಹೀಮ್ಗೆ ಬಿಡುಗಡೆ ಭಾಗ್ಯ ದೊರೆತಿದೆ.

ಸಿರ್ಸಾ ಆಶ್ರಮದಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ರಾಮ್‌ ರಹೀಮ್‌ ಅಕ್ಟೋಬರ್ 18, 2021 ರಂದು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಲಯ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ: Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

Continue Reading

ಪ್ರಮುಖ ಸುದ್ದಿ

CM Siddaramaiah: ಬೆಂಗಳೂರಿನಲ್ಲಿ ಸಿಎಂ‌ ಸಿದ್ದರಾಮಯ್ಯಗೆ ಟೆನ್ಷನ್; ದೆಹಲಿಯಲ್ಲಿ ಡಿಕೆ‌ ಶಿವಕುಮಾರ್ ಲಾಬಿ

CM Siddaramaiah: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂದು ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರಗಳು ಹಾಗೂ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.

VISTARANEWS.COM


on

CM Siddaramaiah DK Shivakumar and Mallikarjuna Kharge in background of congress Flag and 9 Congress candidates finalised for Lok Sabha Election 2024
Koo

ಬೆಂಗಳೂರು: ಒಂದೆಡೆ ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿ ಹೈಕೋರ್ಟ್‌ (High Court) ಆದೇಶ ಇಂದು ಹೊರಬೀಳಲಿದ್ದು, ಸಿಎಂ ಸಿದ್ದರಾಮಯ್ಯ (CM Siddaramaiah) ಅದಕ್ಕಾಗಿ ಕಾಯುತ್ತಿದ್ದಾರೆ. ಇನ್ನೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್‌ಗೆ (DCM DK Shivakumar) ಅವರಿಗೆ ಹೈಕಮಾಂಡ್‌ ಬುಲಾವ್‌ ಬಂದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂದು ಎಲ್ಲಾ ರಾಜ್ಯಗಳ ಪಿಸಿಸಿ ಅಧ್ಯಕ್ಷರಗಳು ಹಾಗೂ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇಂದು ಬೆಳಿಗ್ಗೆ 10:30ಕ್ಕೆ ಎಐಸಿಸಿ ಕಚೇರಿಯಲ್ಲಿ ಸಭೆ ಆಯೋಜನೆಗೊಂಡಿದ್ದು, ಕೆಲ ಪ್ರಮುಖ ವಿಚಾರಗಳ ಕುರಿತು ಚರ್ಚೆಯಾಗಲಿದೆ.

ದೇಶಾದ್ಯಂತ ಪಕ್ಷ ಸಂಘಟನೆ ಕುರಿತು, ಎಐಸಿಸಿ ಪುನರ್ ರಚನೆ ಕುರಿತು ಕೂಲಂಕಷ ಚರ್ಚೆ ನಡೆಸುವ ಸಾಧ್ಯತೆಯಿದೆ. ರಾಜ್ಯದ ಯಾವ ನಾಯಕರನ್ನು ಎಐಸಿಸಿ ಪರಿಗಣಿಸಬೇಕು ಎಂಬ ಅಭಿಪ್ರಾಯ ಸಂಗ್ರಹ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ಮಾತುಕತೆ, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿದರೆ ಹೇಗೆ ಎದುರಿಸಬೇಕು, ಜಾತಿ ಜನಗಣತಿ, ಒಳಮೀಸಲಾತಿ ವಿಚಾರದ ಒಂದಷ್ಟು ಮಾತುಕತೆ ನಡೆಯಲಿದೆ. ಕೆಲ ರಾಜ್ಯಗಳ ಪಿಸಿಸಿ ಪ್ರೆಸಿಡೆಂಟ್ ಹಾಗೂ ರಾಜ್ಯ ಉಸ್ತುವಾರಿಗಳ ಬದಲಾವಣೆ ಕುರಿತು ಚರ್ಚೆ ನಡೆಯಲಿದೆ.

ಕೆಪಿಸಿಸಿ ಸಾರಥ್ಯಕ್ಕೆ ಟವೆಲ್

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿದೆ. ಸಚಿವ ಈಶ್ವರ್ ಖಂಡ್ರೆ, ಶರಣುಪ್ರಕಾಶ್ ಪಾಟೀಲ್, ಬಿಕೆ ಹರಿಪ್ರಸಾದ್, ಸತೀಶ್ ಜಾರಕಿಹೊಳಿ‌ ಹೆಸರು ಮುನ್ನೆಲೆಗೆ ಬಂದಿದೆ. ಲಿಂಗಾಯತ ಸಮುದಾಯಕ್ಕೆ ಪಟ್ಟ ಕಟ್ಟುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕೆಪಿಸಿಸಿ ಸ್ಥಾನಕ್ಕಾಗಿ ಸತೀಶ್ ಜಾರಕಿಹೊಳಿ‌ ತೀವ್ರ ಲಾಬಿ ನಡೆಸುತ್ತಿದ್ದಾರೆ. ಹೈಕಮಾಂಡ್ ಸೂಚನೆಗೆ ನಾನು ಬದ್ಧ ಎಂಬ ಅಭಿಪ್ರಾಯವನ್ನು ಬಿಕೆ ಹರಿಪ್ರಸಾದ್ ಹೊಂದಿದ್ದಾರೆ. ಹೀಗಾಗಿ, ಕೆಪಿಸಿಸಿ ನೂತನ ಸಾರಥಿ ಯಾರು ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ

ರಾಜ್ಯದಲ್ಲಿ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಬದಲಾಯಿಸಬೇಕು ಎಂಬ ಕೂಗು ಇದೆ. ಪಕ್ಷದ ಆಂತರಿಕ ವಲಯದಲ್ಲಿ ಬದಲಾವಣೆ ಕುರಿತು ಪರ- ವಿರೋಧದ ಚರ್ಚೆಯಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಸುರ್ಜೇವಾಲ ಮುಂದುವರೆಯುತ್ತಾರಾ ಅಥವಾ ಬದಲಾಗುತ್ತಾರಾ ಎಂಬ ಕುತೂಹಲವನ್ನು ಎಐಸಿಸಿ ನಡೆ ಮೂಡಿಸಿದೆ.

ಸಿಎಂಗೆ ಮುಡಾ ತೀರ್ಪಿನ ಆತಂಕ

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರಿಗೆ ಮುಡಾ ಹಗರಣದ ಟೆನ್ಷನ್‌ ಮತ್ತೆ ಎದುರಾಗಿದೆ. ಮುಡಾ ಪ್ರಕರಣವನ್ನು ತನಿಖೆಗೆ ಎತ್ತಿಕೊಲ್ಳಬಹುದೇ ಬೇಡವೇ ಎಂಬ ಪ್ರಶ್ನೆಯ ಬಗ್ಗೆ ಇಂದು ಹೈಕೋರ್ಟ್ ಆದೇಶ ನೀಡಲಿದೆ. ಕೋರ್ಟ್ ತೀರ್ಪಿನತ್ತ ರಾಜ್ಯಪಾಲರ ಗಮನ ನೆಟ್ಟಿದ್ದು, ತೀರ್ಪು ನೋಡಿಕೊಂಡು ರಾಜ್ಯಪಾಲರು ಮುಂದುವರಿಯಲಿದ್ದಾರೆ.

ಇದೇ ಸಮಯದಲ್ಲಿ ದೆಹಲಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆಸಬಹುದು. ಸರ್ಕಾರ ವರ್ಸಸ್ ಗವರ್ನರ್ ಕಚೇರಿ ನಡುವೆ ನಡೆಯುತ್ತಿರುವ ಫೈಟ್ ಬಗ್ಗೆ ಚರ್ಚೆ ನಡೆಸಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಲಿದ್ದಾರೆ. ಕೋರ್ಟ್ ಹಾಗೂ ರಾಜ್ಯಪಾಲರಿಂದ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಸಮಸ್ಯೆ ಆದರೆ ತಮ್ಮನ್ನ ಪರಿಗಣಿಸುವಂತೆ ಮನವಿ ಮಾಡಬಹುದು ಎಂದು ತರ್ಕಿಸಲಾಗಿದೆ.

ಇದನ್ನೂ ಓದಿ: CM Siddaramaiah: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮೇಲೆ ಪ್ರಕರಣ, ಇಂದು ಕೋರ್ಟ್‌ ತೀರ್ಮಾನ

Continue Reading
Advertisement
Self harming
ಕರ್ನಾಟಕ16 seconds ago

Self harming : ಶಿವಮೊಗ್ಗದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Patanjali ads
ದೇಶ6 mins ago

Patanjali Ayurved Ads: ನ್ಯಾಯಾಂಗ ನಿಂದನೆ ಪ್ರಕರಣ ರದ್ದು; ಬಾಬಾ ರಾಮದೇವ್‌ಗೆ ಬಿಗ್‌ ರಿಲೀಫ್

Gold Rate Today
ಚಿನ್ನದ ದರ14 mins ago

Gold Rate Today: ಮತ್ತೆ ಕೈ ಸುಡುತ್ತಿದೆ ಚಿನ್ನ; ಬಂಗಾರ ದರದಲ್ಲಿ ಇಂದು ಭಾರಿ ಏರಿಕೆ

ಬೆಂಗಳೂರು17 mins ago

Assault Case: ಪಾರ್ಕಿಂಗ್‌ ವಿಚಾರಕ್ಕೆ ಡಿಶುಂ ಡಿಶುಂ; ಮಹಿಳೆಗೆ ಕಪಾಳಮೋಕ್ಷ!

Muda Scam
ಕರ್ನಾಟಕ27 mins ago

Muda Scam: ಸಿಎಂ ವಿರುದ್ಧದ ಅರ್ಜಿ ವಿಚಾರಣೆಗೆ ಸ್ವೀಕರಿಸದಂತೆ ಕೋರ್ಟ್‌ಗೆ ಅರ್ಜಿ

Tungabhadra Dam
ಪ್ರಮುಖ ಸುದ್ದಿ37 mins ago

Tungabhadra Dam: ಗೇಟ್‌ ರಿಪೇರಿಗಾಗಿ 60 ಟಿಎಂಸಿ ನೀರು ಖಾಲಿ, 8 ಜಿಲ್ಲೆಗಳ ರೈತರಿಗೆ ನೀರಿಲ್ಲ!

Naga Chaitanya
ಸಿನಿಮಾ39 mins ago

Naga Chaitanya: ನಾಗ ಚೈತನ್ಯ-ಶೋಭಿತಾ ನಿಶ್ಚಿತಾರ್ಥದ ಫೋಟೊ ಹಂಚಿಕೊಂಡ ಸಮಂತಾ

Paris Paralympic 2024
ಕ್ರೀಡೆ49 mins ago

Paris Paralympic 2024: ಪ್ಯಾರಾಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಹಾಲಿ ಚಾಂಪಿಯನ್‌ ಪ್ರಮೋದ್ ಭಗತ್‌ಗೆ ಅಮಾನತು ಶಿಕ್ಷೆ

kolkata doctor murder case
ದೇಶ50 mins ago

Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

borewell water More than 40 people suffer from vomiting after drinking borewell water
ಬೆಳಗಾವಿ55 mins ago

Borewell water : ಬೋರ್‌ವೆಲ್ ನೀರು ಕುಡಿದು 40ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು7 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ7 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌