Site icon Vistara News

Layoffs Season | ಟೆಕ್ ಕಂಪನಿಗಳು ಏಕೆ ಉದ್ಯೋಗ ಕಡಿತ ಮಾಡುತ್ತಿವೆ? ಇದಕ್ಕೇನು ಕಾರಣ?

Layoffs @ Tech Companies

ಮುಂಬೈ: ಟ್ವಿಟರ್, ಮೆಟಾ, ಅಮೆಜಾನ್ ಸೇರಿದಂತೆ ಟೆಕ್ ದೈತ್ಯ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಮೆಟಾ ಆಲ್ಮೋಸ್ಟ್ 11 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದ್ದರೆ, ಅಮೆಜಾನ್ ಕೂಡ 10 ಸಾವಿರ ಉದ್ಯೋಗ ಕಡಿತ (Layoffs Season) ಮಾಡುತ್ತಿದೆ. ಈ ಸಾಲಿಗೆ ಉಬರ್, ಏರ್‌ಬಿಎನ್‌ಬಿ, ಜಿಲ್ಲೋ, ಕ್ವಾಯಿನ್‌ಬೇಸ್, ಲಿಫ್ಟ್, ನೆಟ್‌ಫ್ಲಿಕ್ಸ್, ಸ್ಫೋಟಿಫೈ, ಪೆಲೋಟೋನ್, ಸ್ಟ್ರೈಪ್ ಮತ್ತು ರಾಬಿನ್‌ಹುಡ್ ಕಂಪನಿಗಳು ಸೇರ್ಪಡೆಯಾಗುತ್ತಿವೆ.

ಈ ವಿಷಯದಲ್ಲಿ ಭಾರತೀಯ ಕಂಪನಿಗಳೂ ಕೂಡ ಹಿಂದೆ ಬಿದ್ದಿಲ್ಲ. ಎಜುಟೆಕ್ ಕಂಪನಿಗಳಾದ ಬೈಜೂಸ್, ಅನ್‌ಅಕಾಡೆಮಿ, ವೇದಾಂತು, ವೈಟ್‌ಹ್ಯಾಟ್ ಜೂ ಇತ್ಯಾದಿ ಕಂಪನಿಗಳು ಉದ್ಯೋಗ ಕಡಿತ ಮಾಡಿವೆ. ಜಗತ್ತಿನಾದ್ಯಂತ ಅಕ್ಟೋಬರ್‌ ತಿಂಗಳಲ್ಲಿ ಒಟ್ಟಾರೆ 2,17,100 ಉದ್ಯೋಗಗಳನ್ನು ಕಡಿತ ಮಾಡಲಾಗಿದೆ.

ಇದಕ್ಕೇನು ಕಾರಣಗಳೇನು?
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜನರು ಎಲ್ಲದಕ್ಕೂ ಆನ್‌ಲೈನ್ ಮೇಲೆ ಅವಲಂಬಿತವಾಗಿದ್ದರು. ಹಾಗಾಗಿ, ಕಂಪನಿಗಳು ಗ್ರಾಹಕರ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದವು. ಈಗ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯು ಕರಗಿ, ಕೋವಿಡ್ ಪೂರ್ವ ಸ್ಥಿತಿಗೆ ಜಗತ್ತು ಮರಳಿದೆ. ಇದರಿಂದಾಗಿ ಹೆಚ್ಚುವರಿ ಉದ್ಯೋಗಿಗಳನ್ನು ಕಂಪನಿಗಳು ಮನೆಗೆ ಕಳುಹಿಸತ್ತಿವೆ.

ಹೆಚ್ಚುತ್ತಿರುವ ಹಣದುಬ್ಬರವೂ ಸಾಮೂಹಿಕ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ಕಂಪನಿಗಳು ಜಾಹೀರಾತು ಮೇಲೆ ಹೆಚ್ಚಿನ ಹಣ ವೆಚ್ಚ ಮಾಡಲು ಸಿದ್ಧವಿಲ್ಲ. ವೆಚ್ಚ ಕಡಿತ ಸೂತ್ರವನ್ನು ಅನುಸರಿಸುತ್ತಿವೆ. ಹಣಕಾಸು ವರ್ಷ ಮುಕ್ತಾಯಕ್ಕೆ ಮುಂಚೆಯೇ ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ.

ಇನ್ನೂ ಉದ್ಯೋಗ ಕಡಿತ
ಉದ್ಯೋಗ ಕಡಿತ ಪರ್ವ ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ತರಲಿವೆ ಎನ್ನುತ್ತಾರೆ ತಜ್ಞರು. ಅದರಲ್ಲೂ ಟೆಕ್ ಉದ್ಯಮವೂ ಹೆಚ್ಚಿನ ಹೊಡೆತವನ್ನು ಅನುಭವಿಸಲಿದೆ. ಆದರೆ, ಇದಕ್ಕೆ ಪರಿಹಾರವಿಲ್ಲ ಎಂದಲ್ಲ. ಕಂಪನಿಗಳು ಈ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಸರಿಯಾದ ದಿಕ್ಕಿನಲ್ಲಿ ಸಾಗಿದರೆ ಖಂಡಿತವಾಗಿಯೂ ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ | Amazon layoff | ಅಮೆಜಾನ್‌ನಲ್ಲಿ 2023ರಲ್ಲೂ ಮುಂದುವರಿಯಲಿದೆ ಉದ್ಯೋಗ ಕಡಿತ : ಸಿಇಒ

Exit mobile version