Site icon Vistara News

ICMR Report: ಕೋವಿಡ್ ವ್ಯಾಕ್ಸಿನ್‌ಗೂ ಹಾರ್ಟ್ ಅಟ್ಯಾಕ್‌ಗೂ ಇದ್ಯಾ ನಂಟು? ಐಸಿಎಂಆರ್ ಅಧ್ಯಯನ ವರದಿಯಲ್ಲಿ ಏನಿದೆ?

Sudden death of youth is not caused by Covid-19 vaccine Says ICMR Report

ನವದೆಹಲಿ: ಕೋವಿಡ್ (Covid-19) ಅಟ್ಟಹಾಸ ಬಹುತೇಕ ನಿತ್ರಾಣಗೊಂಡಿದೆ. ಈ ಕೋವಿಡ್ ಎದುರಿಸಲು ನೀಡಲಾದ ಲಸಿಕೆಗಳ (Covid Vaccine) ಅಡ್ಡ ಪರಿಣಾಮ ಕಾಣಿಸಿಕೊಳ್ಳುತ್ತಿದೆಯೇ? ಈ ಅನುಮಾನಕ್ಕೆ ಕಾರಣವಿದೆ. ಯಾಕೆಂದರೆ, ಕಳೆದ ಎರಡ್ಮೂರು ವರ್ಷದಲ್ಲಿ ಸಡನ್ ಹಾರ್ಟ್ ಅಟ್ಯಾಕ್ (Heart Attack) ಆಗಿ ಮೃತಪಡುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಲಸಿಕೆಯೇ ಇದಕ್ಕೆ ಕಾರಣ ಎಂಬ ಸಾಮಾನ್ಯ ಆರೋಪವಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಅಗ್ರ ಆರೋಗ್ಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಧ್ಯಯನ ಕೈಗೊಂಡಿದೆ. ಈ ಕೋವಿಡ್ ಲಸಿಕೆ ಹಾಗೂ ಹೃದಯಾಘಾತಗಳ ನಡುವೆ ಸಂಬಂಧವಿದೆಯೇ ಎಂದ ನಿಟ್ಟಿನಲ್ಲಿ ಐಸಿಎಂಆರ್ (ICMR Report) ಅಧ್ಯಯನ ಕೈಗೊಂಡಿದ್ದು, ಮುಂದಿನ ಎರಡು ವಾರದಲ್ಲಿ ವರದಿಯನ್ನು ಬಹಿರಂಗ ಮಾಡಲಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ICMR)ಯ ಪ್ರಧಾನ ನಿರ್ದೇಶಕರ ರಾಜೀವ್ ಬಾಹ್ಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮನೀ ಕಂಟ್ರೋಲ್ ಈ ಕುರಿತು ವರದಿ ಮಾಡಿದೆ.

ಸಂಶೋಧಕರು ಕೆಲವು ಪ್ರಾಥಮಿಕ ಸತ್ಯ ಸಂಗತಿಗಳೊಂದಿಗೆ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಯನ್ನು ಮೌಲ್ಯಮಾಪನವನ್ನು ಸಾರ್ವಜನಿಕಗೊಳಿಸುವ ಮೊದಲು ಪರಿಶೀಲನೆಗಾಗಿ ಕಾಯಲಾಗುತ್ತಿದೆ. ಸಂಶೋಧನಾ ಪ್ರಬಂಧವನ್ನು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (IJMR) ಕೂಡ ಅಗೀಕರಿಸಿದೆ. ಈಗ ಈ ವರದಿಯ ಸ್ವತಂತ್ರ ಮೌಲ್ಯಮಾಪನ ಕಾರ್ಯ ನಡೆದಿದೆ. ಈ ಕೆಲಸ ಮುಗಿದ ಕೂಡಲೇ ವರದಿಯನ್ನು ಬಹಿರಂಗ ಮಾಡುವ ಸಾಧ್ಯತೆ ಇದೆ.

ಎರಡನೇ ಅಧ್ಯಯನವು ವ್ಯಾಕ್ಸಿನೇಷನ್, ದೀರ್ಘ ಕೋವಿಡ್ ಸೋಂಕು, ರೋಗಿಯ ತೀವ್ರತೆ ಸೇರಿದಂತೆ ವಿವಿಧ ಕೋನಗಳಿಂದ ಹಠಾತ್ ಹೃದಯಾಘಾತದ ಸಾವುಗಳನ್ನು ನಿರ್ಣಯಿಸುವುದರ ಮೇಲೆ ಕೇಂದ್ರೀಕರಿಸಿದೆ. ಈ ಅಧ್ಯಯನಕ್ಕಾಗಿ ಐಸಿಎಂಆರ್, ವೈರಸ್ ಸೋಂಕಿಗೆ ಒಳಗಾಗಿ ಮತ್ತು ದೀರ್ಘ ಕಾಲ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಒಂದು ವರ್ಷದವರೆಗೆ ಫಾಲೋ ಮಾಡಿದೆ. 40 ಆಸ್ಪತ್ರೆಗಳ ಕ್ಲಿನಿಕಲ್ ರಿಜಿಸ್ಟ್ರಿಯಿಂದ ಅಧ್ಯಯನಕ್ಕಾಗಿ ವಿವರಗಳನ್ನು ಪಡೆದುಕೊಳ್ಳಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Coronavirus | ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಕೊರತೆ; ಕಾರ್ಬಿವ್ಯಾಕ್ಸ್‌ ಬೂಸ್ಟರ್‌ ಡೋಸ್‌ಗೆ ಜನ ಹಿಂದೇಟು

ಮೂರನೇ ಅಧ್ಯಯನವು ಹಠಾತ್ ಸಾವುಗಳ ಮೇಲೆ ಕೇಂದ್ರೀಕರಿಸಲಾಗಿದೆ. ಇದರಲ್ಲಿ ಅವರು ಹೃದಯಾಘಾತ ಅಥವಾ ಮೆದುಳಿನ ಸ್ಟ್ರೋಕ್‌ನಿಂದ ಹಠಾತ್ತನೆ ಸಾವನ್ನಪ್ಪಿದ ಗಮನಾರ್ಹ ಸಂಖ್ಯೆಯ ಜನರನ್ನು ಗುರುತಿಸಿದ್ದಾರೆ. ನಾಲ್ಕನೇ ಅಧ್ಯಯನವು ಹೃದಯ ಸ್ನಾಯುವಿನ ಊತಕ ಸಾವು (ಹೃದಯಾಘಾತ) ಅನುಭವಿಸಿದ ಜನರ ಮೇಲೆ ಕೇಂದ್ರೀಕರಿಸಿದೆ.

ದೇಶದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version