ನವ ದೆಹಲಿ: ಧೂಮಪಾನ ವ್ಯಸನದಿಂದ ಬಿಡುಗಡೆ ಹೊಂದಬೇಕು ಮತ್ತು ಉತ್ತಮ ಆರೋಗ್ಯವನ್ನು ಗಳಿಸಿಕೊಳ್ಳಬೇಕು ಎಂದು (Essential Medicines) ಬಯಸುವವರಿಗೆ ಇಲ್ಲಿದೆ ಸಿಹಿ ಸುದ್ದಿ!
ಕೇಂದ್ರ ಸರ್ಕಾರ ಧೂಮಪಾನದ ವ್ಯಸನಕ್ಕೆ ಸಿಲುಕಿರುವವರಿಗೆ ನೀಡುವ ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯನ್ನು ( Nicotine replacement therapy) ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಿದೆ. (NLEM) ಇದರ ಪರಿಣಾಮ ಈ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ದರಗಳು ಇಳಿಕೆಯಾಗಲಿದೆ. ಚಿಕಿತ್ಸೆಯ ವೆಚ್ಚ ಕಡಿಮೆಯಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆಯು 12 ವಾರಗಳ ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿಯನ್ನು ಅನುಮೋದಿಸಿದೆ. ಈ ವಿಧಾನದಲ್ಲಿ ಧೂಮಪಾನಿಗಳು ಹಂತ ಹಂತವಾಗಿ ಸಿಗರೇಟ್ ಸೇದುವ ವ್ಯಸನದಿಂದ ಮುಕ್ತವಾಗುತ್ತಾರೆ. ದಿನಕ್ಕೆ ಸರಾಸರಿ 10-13 ರೂ. ವೆಚ್ಚ ತಗಲುತ್ತದೆ.
ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಿರುವುದರಿಂದ ದೇಶಾದ್ಯಂತ ಈ ಥೆರಪಿ ಕೈಗೆಟಕುವ ದರದಲ್ಲಿ ಜನತೆಗೆ ಸಿಗಲಿದೆ. ಭಾರತದಲ್ಲಿ ಅತಿ ಹೆಚ್ಚು ತಂಬಾಕು ಬಳಕೆಯಾಗುತ್ತಿದೆ. ೯.೯ ಕೋಟಿ ಧೂಮಪಾನಿಗಳಿದ್ದಾರೆ. ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ 200 ಕೋಟಿ ರೂ. ಮೌಲ್ಯದ ಮಾರುಕಟ್ಟೆಯಾಗಿದೆ.