Site icon Vistara News

ಅಡುಗೆ ಅನಿಲ ಬೆಲೆ ಸಿಲಿಂಡರ್‌ಗೆ 91.50 ರೂ. ಇಳಿಕೆ, ಇಂದಿನಿಂದಲೇ ಜಾರಿ, ಯಾವುದಕ್ಕೆ ಅನ್ವಯ?

cylinder

ನವ ದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ೯೧.೫೦ ರೂ. ಇಳಿಸಿವೆ. ಇದು ಸೆಪ್ಟೆಂಬರ್‌ ೧ರಿಂದಲೇ ಜಾರಿಗೆ ಬರಲಿದೆ. ಈ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ದೊಡ್ಡದೊಂದು ಕೊಡುಗೆ ನೀಡಿದಂತಾಗಿದೆ.

ಇಂಡೇನ್‌ ಗ್ಯಾಸ್‌ ಕಮರ್ಷಿಯಲ್‌ ೧೯ ಕೆಜಿ ಸಿಲಿಂಡರ್‌ಗೆ ೧,೯೭೬ ರೂ.ನಿಂದ ೧೮೮೫ ರೂ.ಗೆ ಇಳಿದಿದೆ. ಅದೇ ರೀತಿ, ಕೋಲ್ಕೊತಾದಲ್ಲಿ ೨೦೯೫ ರೂ. ಇದ್ದಿದ್ದು ೧೯೯೫ ರೂ.ಗೆ ಇಳಿದಿದೆ. ಮುಂಬಯಿಯಲ್ಲಿ ಇದುವರೆಗೆ ೧೯೩೬ ರೂ. ಇತ್ತು. ಅದೀಗ ೧೮೪೪ ರೂ.ಗೆ ಇಳಿಯಲಿದೆ. ಚೆನ್ನೈಯಲ್ಲಿ ೧೯ ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರ ೨೧೪೧ ರೂ. ಇತ್ತು. ಈಗ ಅದು ೨೦೪೫ ರೂ.ಗೆ ಇಳಿಯಲಿದೆ.

ಈ ಇಳಿಕೆ ಮೂಲಕ ಕಮರ್ಷಿಯಲ್‌ ಸಿಲಿಂಡರ್‌ ಬಳಸುವ ಹೋಟೆಲ್‌, ಸಣ್ಣ ಸಣ್ಣ ಅಂಗಡಿಗಳು ಮತ್ತು ಟೀ ಸ್ಟಾಲ್‌ಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ, ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ತಿಂಗಳಿಗೆ ಎರಡು ಬಾರಿ ಅಡುಗೆ ಅನಿಲ ಸಿಲಿಂಡರ್‌ಗಳ ದರ ಪರಿಷ್ಕರಣೆ ಮಾಡಲಾಗುತ್ತಿದೆ. ತಿಂಗಳ ಆರಂಭದಲ್ಲಿ ಒಮ್ಮೆ ಪರಿಷ್ಕರಣೆಯಾದರೆ ತಿಂಗಳ ಮಧ್ಯ ಭಾಗದಲ್ಲಿ ಮತ್ತೊಂದು ಬಾರಿ ಪರಿಷ್ಕರಣೆ ಆಗುತ್ತದೆ.

ಅಂತಾರಾಷ್ಡ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಕಡಿಮೆ ಆಗುತ್ತಿದ್ದು, ಅದರ ಪರಿಣಾಮವಾಗಿ ಈ ಪರಿಷ್ಕರಣೆ ಆಗಿದೆ. ಮುಂದಿನ ದಿನಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ಗಳ ದರವೂ ಇಳಿಯಬಹುದು ಎಂಬ ಅಂದಾಜಿದೆ.

ಬೆಂಗಳೂರಿನಲ್ಲಿ ಎಷ್ಟು?
ಬೆಂಗಳೂರಿನಲ್ಲಿ ಪ್ರಸಕ್ತ ೧೯ ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ದರ ೨೧೦೦ ರೂ. ಇದೆ. ಈ ಪರಿಷ್ಕರಣೆಯ ಬಳಿಕ ಅದು ಸುಮಾರು ೯೫.೫ ರೂ.ನಷ್ಟು ಕಡಿಮೆಯಾಗಲಿದೆ.

ಇದನ್ನೂ ಓದಿ | Edible Oil Rate | ಗಣೇಶ ಚತುರ್ಥಿಗೂ ಮೊದಲೇ ಅಡುಗೆ ಎಣ್ಣೆ ದರ ಇಳಿಕೆ, ತಿನಿಸು ಮಾಡಲು ಬೇಕಿಲ್ಲ ದುಡ್ಡಿನ ಎಣಿಕೆ

Exit mobile version