Site icon Vistara News

Miss Universe 2023: ಸೆಮಿಫೈನಲ್‌ಗೆ ಭಾರತದ ಶ್ವೇತಾ; ಸಂಡೇ ಡಬಲ್‌ ಧಮಾಕಾ?

Shweta Sharda

Miss Universe 2023: Shweta Sharda from India makes it to the semi finals

ನವದೆಹಲಿ: ಒಂದೆಡೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ದೇಶಕ್ಕೆ ದೇಶವೇ ಕಾಯುತ್ತಿದೆ. ಮತ್ತೊಂದೆಡೆ, 2023ನೇ ಸಾಲಿನ ಭುವನ ಸುಂದರಿ (Miss Universe 2023) ಸ್ಪರ್ಧೆಯಲ್ಲಿ ಭಾರತದ ಬೆಡಗಿ ಶ್ವೇತಾ ಶಾರದಾ (Shweta Sharda) ಅವರು ಸೆಮಿಫೈನಲ್‌ ತಲುಪಿದ್ದಾರೆ. ಹಾಗಾಗಿ, ಭಾನುವಾರ ಭಾರತಕ್ಕೆ ಎರಡು ಸಿಹಿ ಸುದ್ದಿ ಸಿಕ್ಕರೂ ಅಚ್ಚರಿ ಇಲ್ಲ.

ಎಲ್‌ ಸಾಲ್ವೋಡಾರ್‌ನಲ್ಲಿ ನಡೆಯುತ್ತಿರುವ ಭುವನ ಸುಂದರಿ ಸ್ಪರ್ಧೆಯಲ್ಲಿ ಶ್ವೇತಾ ಶಾರದಾ ಅವರು ಸೆಮಿ ಫೈನಲ್‌ ತಲುಪಿದ್ದಾರೆ. ಭಾರತದ ಸಂಸ್ಕೃತಿ, ಪರಂಪರೆಯ ಜತೆಗೆ ಆಧುನಿಕ ಫ್ಯಾಷನ್‌ಅನ್ನು ಜಗತ್ತಿಗೆ ತಿಳಿಸುವುದು ಶ್ವೇತಾ ಶಾರದಾ ಅವರ ಉದ್ದೇಶವಾಗಿದೆ. ಸೆಮಿಫೈನಲ್‌ ತಲುಪಿದ ಟಾಪ್‌ 10 ಸುಂದರಿಯರಲ್ಲಿ ಪಾಕಿಸ್ತಾನದ ಎರಿಕಾ ರಾಬಿನ್‌ ಅವರು ಕೂಡ ಸ್ಥಾನ ಪಡೆದಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಭುವನ ಸುಂದರಿಯ ಘೋಷನೆಯಾಗಲಿದೆ. ಜಗತ್ತಿನ 90ಕ್ಕೂ ಅಧಿಕ ದೇಶಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಶ್ವೇತಾ ಶಾರದಾ ರ‍್ಯಾಂಪ್‌ ವಾಕ್

ಯಾರಿವರು ಶ್ವೇತಾ ಶಾರದಾ?

ಮೂಲತಃ ಚಂಡೀಗಡದವರಾದ ಶ್ವೇತಾ ಅವರ ತಾಯಿ ಸಿಂಗಲ್ ಪೇರೆಂಟ್. 16ನೇ ವಯಸ್ಸಿಗೆ ಮುಂಬೈಗೆ ಶಿಫ್ಟ್ ಆದ ನಂತರ, ಓಪನ್ ಯೂನಿವರ್ಸಿಟಿಯಲ್ಲಿ ಡಿಗ್ರಿ ಪಡೆದಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಝಲಕ್ ದಿಕ್ಲಾಜಾ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಜತೆಗೆ ಬಾಲಿವುಡ್‌ನ ಖ್ಯಾತನಾಮರೊಂದಿಗೆ ಕೊರಿಯೋಗ್ರಾಫರ್ ಆಗಿಯೂ ಹೆಸರು ಮಾಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ 2023 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವುದರೊಂದಿಗೆ ಮಿಸ್ ಬಾಡಿ ಬ್ಯೂಟಿಫುಲ್, ಮಿಸ್ ಟ್ಯಾಲೆಂಟೆಡ್, ಟಾಪ್ 5 ಮಿಸ್ ಫೋಟೋಜೆನಿಕ್, ಟಾಪ್ 6 ಮಿಸ್ ರ್‍ಯಾಂಪ್ ವಾಕ್ ಟೈಟಲ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ದಪ್ಪ ಇದ್ದರೂ ಭುವನ ಸುಂದರಿ ರೇಸ್‌ನಲ್ಲಿ ನೇಪಾಳ ಸುಂದರಿ ಕ್ಯಾಟ್‌ವಾಕ್‌; ಯಾರಿವರು ದೀಪಿಕಾ?

ಭಾನುವಾರವೇ (ನವೆಂಬರ್‌ 19) 2023ನೇ ಸಾಲಿನ ಭುವನ ಸುಂದರಿ ಯಾರು ಎಂಬುದನ್ನು ಘೋಷಿಸಲಾಗುತ್ತದೆ. ಭಾರತದಿಂದ ಶ್ವೇತಾ ಶಾರದಾ ಅವರು ಸ್ಪರ್ಧಿಸಿದ್ದಾರೆ. ಈ ಬಾರಿಯ ಸ್ಪರ್ಧೆಯಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ಇಬ್ಬರು ಮಹಿಳೆಯರು, ಇಬ್ಬರು ತಾಯಂದಿರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಅದರಲ್ಲೂ, ದಪ್ಪ ಇದ್ದರೂ ನೇಪಾಳದ ಜೇನ್‌ ದೀಪಿಕಾ ಗ್ಯಾರೆಟ್‌ ಅವರು ಸ್ಪರ್ಧೆಯಲ್ಲಿ ಆತ್ಮವಿಶ್ವಾಸದಿಂದ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಫ್ಯಾಷನ್‌ ದಿಗ್ಗಜರು, ಜನರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version