Site icon Vistara News

‘ಮೋದಿಯನ್ನು ಯಾರೂ ಹೆದರಿಸಲು ಸಾಧ್ಯವಿಲ್ಲ…ʼ ವ್ಲಾದಿಮಿರ್‌ ಪುಟಿನ್‌ ಹೀಗಂದಿದ್ದೇಕೆ?

Narendra Modi And Vladimir Putin

PM Narendra Modi Congratulates Putin On Reelection, Vows to Expand India-Russia Ties

ಹೊಸದಿಲ್ಲಿ: ಭಾರತ ಮತ್ತು ಭಾರತೀಯರ ಹಿತಾಸಕ್ತಿಗೆ ಧಕ್ಕೆ ತರಬಲ್ಲ ಯಾವುದೇ ಕ್ರಮ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಯಾರೂ ಹೆದರಿಸಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಹೇಳಿದ್ದಾರೆ.

ಮೋದಿಯವರನ್ನು ಯಾರೂ ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧ ನಿರ್ಧಾರ ತೆಗೆದುಕೊಳ್ಳುವಂತೆ ಬಲವಂತಪಡಿಸಬಹುದು, ಅಂಥ ಒತ್ತಡವನ್ನು ಅವರು ಅನುಭವಿಸಬಹುದು ಎಂದು ಊಹಿಸಲು ಸಾಧ್ಯವಿಲ್ಲ. ನಾನು ಸದಾ ಗಮನಿಸುತ್ತಿರುತ್ತೇನೆ, ಭಾರತೀಯ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಅವರ ಕಠಿಣ ನಿಲುವು ನನಗೆ ಆಶ್ಚರ್ಯಕರವಾಗಿದೆ. ಅವರು ಎಂದಿಗೂ ಬಾಹ್ಯ ಒತ್ತಡಗಳ ಬಗ್ಗೆ ತನ್ನೊಂದಿಗೆ ಮಾತನಾಡಿಯೇ ಇಲ್ಲ. ʼಸ್ನೇಹರಹಿತ ದೇಶಗಳʼ ಬಾಹ್ಯ ಒತ್ತಡದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರ ದೃಢವಾದ ನಾಯಕತ್ವ ಭಾರತಕ್ಕೆ ದೊರೆತಿದೆ ಎಂದು ಪುಟಿನ್‌ ಶ್ಲಾಘಿಸಿದ್ದಾರೆ.

ಮಾಸ್ಕೋದಲ್ಲಿ ನಡೆದ ʼರಷ್ಯಾ ಕಾಲಿಂಗ್ʼ ಹೂಡಿಕೆ ವೇದಿಕೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತ- ರಷ್ಯಾ (India- Russia) ಬಾಂಧವ್ಯವು ಎಲ್ಲಾ ರಂಗಗಳಲ್ಲಿ ಪ್ರಗತಿಯಲ್ಲಿದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಎಲ್ಲಾ ಪಥಗಳಲ್ಲಿ ಪ್ರಗತಿಪರವಾಗಿ ಅಭಿವೃದ್ಧಿ ಹೊಂದುತ್ತಿವೆ. ಇದರ ಮುಖ್ಯ ಭರವಸೆ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ನೀತಿಯಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಎರಡು ದಿನಗಳ ʼಮಾಸ್ಕೋ ಕಾಲಿಂಗ್‌ʼ ಇವೆಂಟ್‌ನಲ್ಲಿ ಚೀನಾ, ಭಾರತ, ಟರ್ಕಿ, ಗಲ್ಫ್ ದೇಶಗಳು, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಮೋದಿ ಹಾಗೂ ಪುಟಿನ್‌ ಇಬ್ಬರೂ ಉತ್ತಮ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದಾರೆ. ಉಕ್ರೇನ್‌ ಜೊತೆಗಿನ ಯುದ್ಧ ಸೇರಿದಂತೆ ಹಲವು ವಿಚಾರಗಳನ್ನು ಪರಸ್ಪರ ದೂರವಾಣಿಯಲ್ಲಿ ಮಾತನಾಡುತ್ತಾರೆ. ಫೆಬ್ರವರಿ 2022ರಲ್ಲಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ ನಂತರವೂ ಭಾರತದ ಜೊತೆಗೆ ನಿಕಟ ರಕ್ಷಣಾ ಪಾಲುದಾರಿಕೆ ಮುಂದುವರಿಸಿದ್ದಾರೆ. ರಷ್ಯಾದಿಂದ ಅಗ್ಗದ ಕಚ್ಚಾ ತೈಲವನ್ನು ಖರೀದಿಸುವುದು ಸೇರಿದಂತೆ ಎಲ್ಲಾ ವಿಷಯಗಳಲ್ಲಿ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಹಾಗೆಯೇ ನಿರ್ವಹಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.

ಭಾರತ ಮತ್ತು ರಷ್ಯಾ ಏಳು ದಶಕಗಳಿಗೂ ಹೆಚ್ಚು ಕಾಲದಿಂದ ಸ್ಥಿರ ಸಂಬಂಧವನ್ನು ಉಳಿಸಿಕೊಂಡಿವೆ. ಸೆಪ್ಟೆಂಬರ್‌ನಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಉಕ್ರೇನ್‌ನಲ್ಲಿನ ಬಿಕ್ಕಟ್ಟಿನಿಂದಾಗಿ ರಷ್ಯಾದ ಗಮನವು ಪಾಶ್ಚಿಮಾತ್ಯೇತರ ಪ್ರಪಂಚದ ಕಡೆಗೆ, ವಿಶೇಷವಾಗಿ ಏಷ್ಯಾದ ಕಡೆಗೆ ತಿರುಗುತ್ತಿದೆ ಎಂದು ಒತ್ತಿ ಹೇಳಿದ್ದರು. ಇತರ ಜಾಗತಿಕ ಸಂಬಂಧಗಳಿಗೆ ಹೋಲಿಸಿದರೆ ಭಾರತ-ರಷ್ಯಾ ಸಂಬಂಧಗಳ ಅಸಾಧಾರಣ ಮತ್ತು ಸ್ಥಿರ ಸ್ವರೂಪವನ್ನು ಜೈಶಂಕರ್ ಒತ್ತಿ ಹೇಳಿದ್ದರು. ಏಷ್ಯಾದ ಕಡೆಗೆ ತಿರುಗಿದಂತೆ ಭಾರತವೂ ರಷ್ಯಾದ ಲೆಕ್ಕಾಚಾರದ ಭಾಗವಾಗಲಿದೆ ಎಂದಿದ್ದರು.

ಇದನ್ನೂ ಓದಿ: Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ಹೃದಯಾಘಾತ; ಸ್ಥಿತಿ ಗಂಭೀರ?

Exit mobile version