ನವದೆಹಲಿ: ಮಾರ್ಚ್ 21, ಮಂಗಳವಾರ ಇರಾನಿಯನ್ ಅಥವಾ ಪರ್ಷಿಯನ್ ಹೊಸ ವರ್ಷ(Persian New Year) ಎಂದು ಆಚರಿಸಲಾಗುತ್ತದೆ. ಇದನ್ನು ನೌರುಜ್(Nowruz 2023) ಎಂದೂ ಕರೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗೂಗಲ್(Google), ವಿಶಿಷ್ಟ ಡೂಡಲ್(Doodle) ಮೂಲಕ ಪರ್ಷಿಯನ್ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ನೌರುಜ್ ಪರಿಕಲ್ಪನೆಯನ್ನು ಪ್ರತಿನಿಧಿಸುವ ಡೂಡಲ್ ಟುಲಿಪ್ಸ್, ಹೈಸಿಂತ್ಸ್, ಡ್ಯಾಫಡಿಲ್‌ಗಳು ಮತ್ತು ಬೀ ಆರ್ಕಿಡ್‌ಗಳಂಥ ವಸಂತ ಋತು ಕಾಲದ ಹೂವುಗಳನ್ನು ಒಳಗೊಂಡಿದೆ(Viral News).
ಪರ್ಷಿಯನ್ ಹೊಸ ವರ್ಷವನ್ನು ದಿನಗಳು ದೀರ್ಘವಾಗಲು ಪ್ರಾರಂಭವಾಗುವ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ವಿದ್ಯಮಾನವನ್ನು ವಸಂತ ವಿಷುವತ್ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಭೌಗೋಳಿಕವಾಗಿ, ಹಬ್ಬವು ಉತ್ತರ ಗೋಳಾರ್ಧದಲ್ಲಿ ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಮಾರ್ಚ್ 21ರ ಸುಮಾರಿಗೆ ಸಂಭವಿಸುತ್ತದೆ.
ಚಳಿಗಾಲವು ಅಳಿಯುತ್ತಿದ್ದಂತೆ, ಉತ್ತರ ಗೋಳಾರ್ಧವು ಕರಗಲು ಪ್ರಾರಂಭಿಸಿದಾಗ, ನೌರುಜ್ ಆಚರಿಸುವ ಸಮಯ ಸನ್ನಿಹಿತವಾಗುತ್ತದೆ. ಇಂದಿನ ಡೂಡಲ್ ವಸಂತಕಾಲದ ಆರಂಭವನ್ನು ಗುರುತಿಸುವ ಈ ಪುರಾತನ ರಜಾದಿನದ ಮಹತ್ವವನ್ನು ಸಾರುತ್ತದೆ. ಪುನರ್ಜನ್ಮದ ಋತುವನ್ನು ಆಚರಿಸಲು ಪ್ರತಿ ವರ್ಷ ಈ ದಿನದಂದು ಪ್ರಪಂಚದಾದ್ಯಂತ 300 ದಶಲಕ್ಷಕ್ಕೂ ಹೆಚ್ಚು ಜನರು ಸಂಭ್ರಮಿಸುತ್ತಾರೆಂದು ಗೂಗಲ್ ಬರೆದುಕೊಂಡಿದೆ. ಇದೇ ವೇಳೆ, ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ರಜಾದಿನಗಳ ಪಟ್ಟಿಯಲ್ಲಿ ನೌರುಜ್ ಕೂಡ ಸೇರ್ಪಡೆಯಾಗಿದೆ ಎಂಬ ಮಾಹಿತಿಯನ್ನು ಗೂಗಲ್ ಒದಗಿಸಿದೆ.
ಇದನ್ನೂ ಓದಿ: Ugadi 2023 : ಜಗದ ಆದಿ ಈ ಯುಗಾದಿ!
ಭಾರತದ ಪಾರ್ಸಿ ಸಮುದಾಯದಲ್ಲಿಯೂ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸಂತೋಷದಾಯಕ ಮತ್ತು ಪವಿತ್ರ ಸಂದರ್ಭವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಸಾಮಾನ್ಯ ಸಂಪ್ರದಾಯಗಳ ರೀತಿಯಲ್ಲಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಸ್ನೇಹಿತರು ಮತ್ತು ನೆರೆಹೊರೆಯವರನ್ನು ಭೇಟಿ ಮಾಡುತ್ತಾರೆ. ವಿಶೇಷ ಸಿಹಿತಿಂಡಿಗಳು, ಮೂಲಿಕೆ ಅಕ್ಕಿ ಮತ್ತು ಹುರಿದ ಮೀನುಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ತಯಾರಿಸಿ, ಸೇವಿಸುತ್ತಾರೆ