Site icon Vistara News

Nuclear Installations: ಭಾರತ-ಪಾಕಿಸ್ತಾನ ನಡುವೆ ಪರಮಾಣು ಸ್ಥಾವರಗಳ ಮಾಹಿತಿ ವಿನಿಮಯ

Nuclear Installations information exchanged between India and Pakistan

ನವದೆಹಲಿ: ಭಾರತ ಮತ್ತು ಪಾಕಿಸ್ತಾನ (India and Pakistan) ಪರಸ್ಪರ ತಮ್ಮ ಪರಮಾಣು ಸ್ಥಾವರಗಳ(Nuclear Installations) ಮಾಹಿತಿಯನ್ನು ವಿನಿಮಯ ಮಾಡಿಕೊಂಡಿವೆ. ಈ ಸಂಬಂಧ 1992ರಲ್ಲಿ ಉಭಯ ರಾಷ್ಟ್ರಗಳ ಒಪ್ಪಂದ ಮಾಡಿಕೊಂಡಿವೆ. ಒಂದೊಮ್ಮೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಉಭಯ ರಾಷ್ಟ್ರಗಳ ಈ ಪರಮಾಣು ಘಟಕಗಳ ಮೇಲೆ, ಒಪ್ಪಂದದ ಅನ್ವಯ ದಾಳಿ ಮಾಡುವಂತಿಲ್ಲ.

ಪರಮಾಣು ಘಟಕಗಳು ಮತ್ತು ಸೌಲಭ್ಯಗಳ ಮೇಲಿನ ದಾಳಿಯ ನಿಷೇಧದ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿನ ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಮಾಣು ಸೌಲಭ್ಯಗಳ ಪಟ್ಟಿಗಳನ್ನು ಏಕಕಾಲದಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ. ಆದರೆ, ಉಭಯ ರಾಷ್ಟ್ರಗಳ ತಮ್ಮ ಪರಮಾಣ ಸ್ಥಾವರಗಳ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಉಭಯ ರಾಷ್ಟ್ರಗಳ ಪರಮಾಣು ಸ್ಥಾವರಗಳ ಮೇಲೆ ದಾಳಿ ಮಾಡದಂತೆ ಭಾರತ ಮತ್ತು ಪಾಕಿಸ್ತಾನಗಳು ಒಪ್ಪಂದವನ್ನು ಮಾಡಿಕೊಂಡಿವೆ. 1988 ಡಿಸೆಂಬರ್ 31ರಂದು ಉಭಯ ರಾಷ್ಟ್ರಗಳು ಸಹಿ ಮಾಡಿದವು. ಆದರೆ, ಅದು 1991 ಜನವರಿ 27ರಂದು ಜಾರಿಗೆ ಬಂತು. ಈ ಒಪ್ಪಂದ ಅನ್ವಯ ಭಾರತ ಮತ್ತು ಪಾಕಿಸ್ತಾನಗಳು ಜನವರಿ 1ರಂದು ತಮ್ಮ ದೇಶಗಳಲ್ಲಿ ಪರಮಾಣ ಸ್ಥಾವರಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿವೆ. 1992ರ ಬಳಿಕ ಈ ರೀತಿಯಾಗಿ ಪರಸ್ಪರ ಮಾಹಿಯನ್ನು 32ನೇ ಬಾರಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾದ (LeT) 10 ಉಗ್ರರು 2008ರ ಮುಂಬೈ ದಾಳಿ ನಡೆಸಿದ್ದರು. ಆ ಬಳಿಕ, ಭಾರತ ಮತ್ತು ಪಾಕಿಸ್ತಾನವು ಯಾವುದೇ ಔಪಚಾರಿಕ ಅಥವಾ ನಿರಂತರ ಮಾತುಕತೆಗಳನ್ನು ನಡೆಸಿಲ್ಲ. ಮುಂಬೈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು.

ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆಯನ್ನು ಆರಂಭಿಸುವ ಪ್ರಯತ್ನವನ್ನು ರಾಜಕೀಯ ನಾಯಕತ್ವ ಶುರು ಮಾಡಿದ್ದವು. ಆದರೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ನಡೆಸಿದ ಸರಣಿ ದಾಳಿಗಳು ಈ ಮಾತುಕತೆಯ ಪ್ರಯತ್ನಗಳನ್ನು ಹಾಳುಗೆಡವಿದವು. 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಹಗೆತನ ಇನ್ನಷ್ಟು ಹೆಚ್ಚಾಯಿತು.

ಈ ಸುದ್ದಿಯನ್ನೂ ಓದಿ: Nuclear Weapon Test: ನೆರೆ ರಾಷ್ಟ್ರ ಚೀನಾದಿಂದ ಪರಮಾಣು ಪರೀಕ್ಷೆಗೆ ಸಿದ್ಧತೆ?

Exit mobile version