ನವದೆಹಲಿ: ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಒಂಬತ್ತು ಪರಮಾಣು ಸಶಸ್ತ್ರ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಸ್ತ್ರ (Nuclear Weapon)ಗಳನ್ನು ಆಧುನೀಕರಿಸುವುದನ್ನು ಮುಂದುವರಿಸಿವೆ ಎಂದು ಸ್ವೀಡನ್ ಚಿಂತಕರ ಚಾವಡಿ ಥಿಂಕ್-ಟ್ಯಾಂಕ್ (Swedish think-tank) ಸೋಮವಾರ ತಿಳಿಸಿದೆ. ಜತೆಗೆ ಭಾರತ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಂಖ್ಯೆಯ ಪರಮಾಣು ಶಸ್ತ್ರಾಸ್ತ್ರ ಹೊಂದಿದೆ ಎಂದು ವರದಿ ಹೇಳಿದೆ.
ಜಾಗತಿಕವಾಗಿ ಆವರಿಸಿರುವ ಯುದ್ಧದ ಭೀತಿಯ ನಡುವೆ, ಚೀನಾದ ಪರಮಾಣು ಶಸ್ತ್ರಾಸ್ತ್ರದ ಪ್ರಮಾಣ ಒಂದು ವರ್ಷದಲ್ಲಿ 90ರಷ್ಟು ಏರಿಕೆಯಾಗಿದೆ. 2023ರ ಜನವರಿಯಲ್ಲಿ ಚೀನಾದಲ್ಲಿ 410 ಸಿಡಿತಲೆ (Warheads) ಇದ್ದರೆ 2024ರ ಜನವರಿಯಲ್ಲಿ ಅದರ ಸಂಖ್ಯೆ 500ಕ್ಕೆ ಏರಿದೆ. ಜತೆಗೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಅಲ್ಲದೆ ಚೀನಾ ಕೆಲವು ಸಿಡಿತಲೆಗಳನ್ನು ಸರ್ವ ಸನ್ನದ್ಧ ರೀತಿಯಲ್ಲಿ ಇರಿಸಿಕೊಂಡಿದೆ ಎಂದೂ ಮೂಲಗಳು ತಿಳಿಸಿವೆ.
The number and types of nuclear weapons in development have increased as states deepen their reliance on nuclear deterrence ➡️ https://t.co/gcpKWFix37
— SIPRI (@SIPRIorg) June 17, 2024
Key takeaways in the thread below🧵 pic.twitter.com/KfGXZDaGuI
ಆಧುನೀಕರಣಕ್ಕೆ ಒತ್ತು
ಅಮೆರಿಕ, ರಷ್ಯಾ, ಇಂಗ್ಲೆಂಡ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ – ಈ ಒಂಬತ್ತು ಪರಮಾಣು ಸಶಸ್ತ್ರ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಆಧುನೀಕರಿಸುವುದನ್ನು ಮುಂದುವರಿಸಿವೆ ಎಂದು ಸ್ಟಾಕ್ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ವರದಿ ಮಾಡಿದೆ.
2024ರ ಜನವರಿಯಿಂದ ಜಾಗತಿಕವಾಗಿ 12,121 ಸಿಡಿತಲೆಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ ಸುಮಾರು 9,585ರಷ್ಟು ಸಂಭಾವ್ಯ ಬಳಕೆಗಾಗಿ ಮಿಲಿಟರಿ ದಾಸ್ತಾನುಗಳಲ್ಲಿವೆ. ಈ ಪೈಕಿ ಸುಮಾರು 3,904 ಸಿಡಿತಲೆಗಳನ್ನು ಕ್ಷಿಪಣಿಗಳು ಮತ್ತು ವಿಮಾನಗಳೊಂದಿಗೆ ಸಜ್ಜುಗೊಳಿಸಲಾಗಿದೆ ಎನ್ನುವ ಆಘಾತಕಾರಿ ಮಾಹಿತಿಯೂ ಬಹಿರಂಗಗೊಂಡಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಅನೇಕ ಸಿಡಿತಲೆಗಳನ್ನು ನಿಯೋಜಿಸುವ ಸಾಮರ್ಥ್ಯವನ್ನು ಈಗಾಗಲೇ ರಷ್ಯಾ, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ ಮತ್ತು ಚೀನಾ ಹೊಂದಿದ್ದು, ಇದನ್ನು ಅಭಿವೃದ್ಧಿ ಪಡಿಸಲು ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾಗಳು ಮುಂದಾಗಿವೆ. ಇದು ನಿಯೋಜಿತ ಸಿಡಿತಲೆಗಳುಗೆ ಮನ್ನಷ್ಟು ಶಕ್ತಿ ತುಂಬುತ್ತದೆ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಎಂದು ಥಿಂಕ್-ಟ್ಯಾಂಕ್ ಹೇಳಿದೆ. ಜಾಗತಿಕವಾಗಿ ಕಂಡು ಬಂದಿರುವ ಪರಮಾಣು ಶಸ್ತ್ರಾಸ್ತ್ರಗಳ ಪೈಕಿ ರಷ್ಯಾ ಮತ್ತು ಅಮೆರಿಕದಲ್ಲಿ ಸಿಂಹಪಾಲಿದೆ. ಅಂದೆ ಒಟ್ಟು ಶೇ. 90ರಷ್ಟು ಈ ಎರಡು ದೇಶಗಳಲ್ಲಿವೆ.
ಭಾರತ, ಪಾಕಿಸ್ತಾನದಲ್ಲಿ ಎಷ್ಟಿದೆ?
ಈ ವರ್ಷದ ಜನವರಿಯಲ್ಲಿ ಭಾರತದ ‘ಸಂಗ್ರಹಿತ’ ಪರಮಾಣು ಸಿಡಿತಲೆಗಳ ಸಂಖ್ಯೆ 172ರಷ್ಟಿದ್ದರೆ, ಪಾಕಿಸ್ತಾನದ ಸಂಖ್ಯೆ 170 ಎಂದು ವರದಿ ಹೇಳಿದೆ. “ಪಾಕಿಸ್ತಾನವು ಭಾರತದ ಮುಖ್ಯ ಕೇಂದ್ರಬಿಂದುವಾಗಿದ್ದರೂ, ಚೀನಾದಾದ್ಯಂತ ಗುರಿಗಳನ್ನು ತಲುಪುವ ಸಾಮರ್ಥ್ಯ ಸೇರಿದಂತೆ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳಿಗೆ ಒತ್ತು ನೀಡುತ್ತಿದೆ” ಎಂದು ಮೂಲಗಳು ತಿಳಿಸಿದೆ. ಇನ್ನು ರಷ್ಯಾ ಮತ್ತು ಅಮೆರಿಕಕ್ಕೆ ಹೋಲಿಸಿದರೆ ಚೀನಾದಲ್ಲಿ ಸಿಡಿತಲೆಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಚೀನಾ ತನ್ನ ಪರಮಾಣು ಶಸ್ತ್ರಾಗಾರವನ್ನು ಇತರ ದೇಶಗಳಿಗಿಂತ ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: Mission Divyastra: ʼದಿವ್ಯಾಸ್ತ್ರʼಕ್ಕೆ ಜೀವ ತುಂಬಿದ ʼದಿವ್ಯ ಪುತ್ರಿ! ಯಾರಿವರು?