Site icon Vistara News

coronavirus | 2 ವರ್ಷದಿಂದ 91 ರಾಷ್ಟ್ರಗಳಲ್ಲಿ ಬಿಎಫ್.7 ಇದೆ! ಈಗೇಕೆ ಇಷ್ಟೊಂದು ಭಯ?

Omicron In India

ನವದೆಹಲಿ: ಚೀನಾದಲ್ಲಿ ಕೊರೊನಾ (coronavirus) ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರುವ ಕೋವಿಡ್-19 ಉಪತಳಿ ಒಮಿಕ್ರಾನ್ ಬಿಎಫ್.7 ವೈರಸ್ ಎರಡು ವರ್ಷಗಳಿಂದ 91 ರಾಷ್ಟ್ರಗಳಲ್ಲಿ ಪತ್ತೆಯಾಗುತ್ತಿದೆ! ಅಂಥ ಅಪಾಯವನ್ನುಂಟು ಮಾಡದ ಈ ವೈರಸ್ ಇದ್ದಕ್ಕಿದ್ದಂತೆ ಚೀನಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೇಸ್‌ ಹೆಚ್ಚಳಕ್ಕೆ ಕಾಣಿಕೆ ನೀಡುತ್ತಿರುವುದು ಕುತೂಹಲಕಾರಿಯಾಗಿದೆ.

ಈ ಸಂಬಂಧ ಸ್ಕ್ರಿಪ್ಸ್ ರಿಸರ್ಚ್ ಡೇಟಾ ಬಿಡುಗಡೆ ಮಾಡಿದ್ದು, 2021ರ ಫೆಬ್ರವರಿಯಿಂದಲೂ 91 ರಾಷ್ಟ್ರಗಳಲ್ಲಿ ಬಿಎಫ್.7 ವೇರಿಯಂಟ್‌ ಪತ್ತೆಯಾಗುತ್ತಲೇ ಇದೆ. ಹಾಗೆಯೇ, ಬಿಎ.5 ಒಮಿಕ್ರಾನ್ 2022ರ ಮೇ ತಿಂಗಳಲ್ಲಿ ಸೇರ್ಪಡೆಯಾಗಿದೆ.

ತಜ್ಞರ ಪ್ರಕಾರ, ಬಿಎಫ್.7 ಕುರಿತು ಇದ್ದಕ್ಕಿದ್ದಂತೆ ಹೆಚ್ಚು ಚರ್ಚೆಯಾಗುತ್ತಿರುವುದು ಅರ್ಥವಿಲ್ಲದ್ದು. ಸ್ವೀಕ್ವೆನ್ಸಿಂಗ್ ಸ್ಯಾಂಪಲ್‌ಗಳ ಪ್ರಕಾರ, ಜಗತ್ತಿನಾದ್ಯಂತ ಅದರ ಅಸ್ತಿತ್ವತ್ವದ ಪ್ರಮಾಣ ಶೇ.0.5ರಷ್ಟಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಈ ವೈರಸ್ ಉಪತಳಿಯನ್ನು ಗುರುತಿಸಲಾಗಿದ್ದು, ಅಲ್ಲಿಂದ ಇಲ್ಲಿತನಕ 47,881 ಸ್ವೀಕ್ವೆನ್ಸಿಂಗ್ ಸ್ಯಾಂಪಲ್‌ಗಳಲ್ಲಿ ಮಾತ್ರವೇ ಕಂಡು ಬಂದಿದೆ.

22 ತಿಂಗಳಿಂದ ಅನೇಕ ದೇಶಗಳಲ್ಲಿ ಈ ಸೋಂಕು ಪತ್ತೆಯಾದರೂ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೇನೂ ಅದು ಕೊಡುಗೆ ನೀಡಿಲ್ಲ. ಅದೇ ವೇಳೆ, ಒಮಿಕ್ರಾನ್ ಉಪತಳಿಯಾದ ಎಕ್ಸ್‌ಬಿಬಿ, ಬಿಕ್ಯು.1.1 ಸೋಂಕಿನಿಂದ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ, ಬಿಎಫ್.7 ಸಿಕ್ಕಾಪಟ್ಟೆ ಡೇಂಜರಸ್ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಾರೆ ತಜ್ಞರು. ಹಾಗಿದ್ದೂ, ಚೀನಾದಲ್ಲಿ ದಿಢೀರ್‌ನೇ ಪ್ರಕರಣಗಳು ಹೆಚ್ಚಲು ಬೇರೆ ಕಾರಣಗಳಿರಬಹುದು ಎಂದು ಹೇಳಾಗುತ್ತಿದೆ. ಚೀನಾದಲ್ಲಿ ದಿಢೀರ್‌ನೇ ಕೋವಿಡ್‌ನ ನಿರ್ಬಂಧಗಳನ್ನು ತೆಗೆದು ಹಾಕಿದ್ದು ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಊಹೆ ಮಾಡುತ್ತಿದ್ದಾರೆ.

ಇದನ್ನೂ ಓದಿ | ಕೋವಿಡ್‌ ಸುದ್ದಿ ಸಮಗ್ರ | ಕೊರೊನಾ ಭೀತಿ, ದೇಶಾದ್ಯಂತ ಹೈ ಅಲರ್ಟ್, ಕರ್ನಾಟಕದಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯ

Exit mobile version