Site icon Vistara News

Kashmir | ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುಎಇ ಮಧ್ಯಸ್ಥಿಕೆ ವಹಿಸಲಿ: ಪಾಕ್ ಪ್ರಧಾನಿ

Shehbaz Sharif

ನವದೆಹಲಿ: ಪಾಕಿಸ್ತಾನ- ಭಾರತದ ನಡುವಿನ ಕಾಶ್ಮೀರ ಸಮಸ್ಯೆ (Kashmir) ಬಗೆಹರಿಸಲು ಯುಎಇ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಯುಎಇ (ದುಬೈ) ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರಿಗೆ, ಎರಡು ದೇಶಗಳನ್ನು ಮಾತುಕತೆ ಟೇಬಲ್‌ಗೆ ಕರೆತರುವಂತೆ ಮನವಿ ಮಾಡಿರುವುದಾಗಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ನಾನು ಯುಎಇ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಅವರು ಪಾಕಿಸ್ತಾನದ ಸಹೋದರ. ಹಾಗೆಯೇ ಭಾರತದೊಂದಿಗೂ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಯಶಸ್ವಿಯಾಗಲು ಅವರು ಪ್ರಮುಖ ಪಾತ್ರ ನಿರ್ವಹಣೆ ಮಾಡಬಹುದು ಎಂದು ನಾನು ಹೇಳಿದ್ದೇನೆ.

ನಾವು(ಭಾರತ-ಪಾಕಿಸ್ತಾನ) ಅಣ್ವಸ್ತ್ರ ರಾಷ್ಟ್ರಗಳಾಗಿದ್ದೇವೆ. ಒಂದೊಮ್ಮೆ ಯುದ್ಧ ಸಂಭವಿಸಿದರೆ, ಏನಾಗಿತ್ತು ಎಂದು ಹೇಳಲು ಯಾರೂ ಉಳಿದಿರುವುದೇ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು ಅವರು, ಭಾರತದ ಜತೆಗೆ ಯುದ್ಧ ಬದಲಿಗೆ ಮಾತುಕತೆ ಪಾಕಿಸ್ತಾನವು ಸಿದ್ಧವಾಗಿದೆ ಎಂದು ಹೇಳಿದ್ದರು. ಅಲ್-ಅರೇಬಿಯಾ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ, ಷರೀಫ್ ಅವರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಟ್ಟಿಗೆ ಕುಳಿತು ಕಾಶ್ಮೀರ ಸೇರಿದಂತೆ ಸಮಸ್ಯೆಗಳನ್ನು ಪರಿಹರಿಸಲು ಅವಕಾಶ ಕೋರಿದ್ದರು.

ಇದನ್ನೂ ಓದಿ | Shehbaz Sharif | ಮೋದಿ ಜತೆಗೆ ಮುಕ್ತ ಮಾತುಕತೆಗೆ ಸಿದ್ಧ, ಯುದ್ಧ ಮಾತ್ರ ಬೇಡವೇ ಬೇಡ ಎಂದ ಪಾಕ್‌ ಪ್ರಧಾನಿ

Exit mobile version