Site icon Vistara News

ಉಗ್ರ ಸಂಘಟನೆಗಳ ಜತೆ ನಂಟು ನಿಜ! ಸತ್ಯ ಒಪ್ಪಿಕೊಂಡ ಪಾಕಿಸ್ತಾನ

Pakistan condemns ram mandir and India gives befitting reply

ಇಸ್ಲಾಮಾಬಾದ್: ಪಾಕಿಸ್ತಾನದ ಸರ್ಕಾರ (Pakistan Government), ಗುಪ್ತಚರ ಸಂಸ್ಥೆ ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿವೆ (Terrorist Links) ಎಂದು ಭಾರತವು (India) ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಾ ಬಂದಿದೆ. ಭಾರತದ ಈ ಆರೋಪಕ್ಕೆ ಈಗ ಸಾಕ್ಷ್ಯ ಸಿಕ್ಕಿದೆ. ಉಗ್ರ ಸಂಘಟನೆಗಳೊಂದಿಗೆ ನಂಟಿರುವುದು ನಿಜ ಎಂದು ಸ್ವತಃ ಪಾಕಿಸ್ತಾನವೇ ಒಪ್ಪಿಕೊಂಡಿದೆ(Pakistan Admits). ಇಂಗ್ಲೆಂಡ್ ಮತ್ತು ಇತರ ದೇಶಗಳಲ್ಲಿ ಆಶ್ರಯ ಪಡೆದಿರುವ ಕೆಲವು ರಾಜಕೀಯ ಭಿನ್ನಮತೀಯರು ದೇಶದೊಳಗಿನ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ.

ವಿದೇಶಾಂಗ ಕಚೇರಿಯ ವಕ್ತಾರೆ ಮುಮ್ತಾಜ್ ಝೆಹ್ರಾ ಬಲೂಚ್ ಅವರು ಗುರುವಾರ ತಮ್ಮ ವಾರದ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಜೈಲಿನಲ್ಲಿರುವ ಪ್ರಧಾನಿ ಇಮ್ರಾನ್ ಖಾನ್ ಅವರ ಸಹಾಯಕನ ಮೇಲೆ ಆಸಿಡ್ ದಾಳಿ ಆರೋಪದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸುವಾಗ, ಈ ದೇಶದ ಕೆಲವು ರಾಜಕೀಯ ಪಕ್ಷಗಳು ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿವೆ ಎಂದು ತಿಳಿಸಿದರು.

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕ ಮತ್ತು ಪ್ರಧಾನಿಯ ಮಾಜಿ ವಿಶೇಷ ಸಹಾಯಕ ಮಿರ್ಜಾ ಶಹಜಾದ್ ಅಕ್ಬರ್ ಕಳೆದ ವಾರ ಲಂಡನ್‌ನಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಆ್ಯಸಿಡ್ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರರು, ಈ ಘಟನೆಯಲ್ಲಿ ಪಾಕಿಸ್ತಾನದ ಯಾವುದೇ ಸಂಸ್ಥೆಗಳು ಪಾಲ್ಗೊಂಡಿಲ್ಲ. ವಿದೇಶದಲ್ಲಿರುವ ನಮ್ಮ ಸ್ವಂತ ಪ್ರಜೆಗಳನ್ನು ಗುರಿಯಾಗಿಸುವುದು ನಮ್ಮ ನೀತಿಯಲ್ಲ. ಆದರೆ, ಅನೇಕ ರಾಜಕೀಯ ಭಿನ್ನಾಭಿಪ್ರಯಗಳು ಇದ್ದೇ ಇರುತ್ತವೆ ಎಂದು ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯ ಹೊಂದಿರುವವರು ಅವರು ಇಂಗ್ಲೆಂಡ್ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ರಾಜಕೀಯ ಆಶ್ರಯವನ್ನು ಪಡೆದುಕೊಂಡಿದ್ದಾರೆ.

ಹೀಗೆ ವಿದೇಶಗಳಲ್ಲಿ ಆಶ್ರಯ ಪಡೆದುಕೊಂಡವರ ಪೈಕಿ ಅನೇಕರು ಪಾಕಿಸ್ತಾನದೊಳಗೇ ಇರುವ ಉಗ್ರ ಸಂಘಟನೆಗಳ ಜತೆಗೆ ನಂಟು ಹೊಂದಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರೆ ತಿಳಿಸಿದರು. ಹಾಗೆಯೇ, ಈ ರೀತಿಯ ವ್ಯಕ್ತಿಗತವಾಗಿ ಯಾವುದೇ ದಾಳಿಯಲ್ಲಿ ಪಾಕಿಸ್ತಾನವು ಒಳಗೊಂಡಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Danish Kaneria: ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ; ಕಾರಣವೇನು?

Exit mobile version