Site icon Vistara News

Ram Mandir: ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಕಂಡು ಪಾಕಿಸ್ತಾನಕ್ಕೆ ಹೊಟ್ಟೆ ಉರಿ!

Pakistan condemns ram mandir and India gives befitting reply

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ನಿರ್ಮಾಣದಿಂದ ದೇಶದ ಎಲ್ಲ ವರ್ಗದ ನಾಗರಿಕರು ಸಂಭ್ರಮದಲ್ಲಿದ್ದಾರೆ. ಮುಸ್ಲಿಮರನ್ನೂ (Muslim Community) ಒಳಗೊಂಡಂತೆ ಎಲ್ಲ ಅಲ್ಪಸಂಖ್ಯಾತರು ಸಂಭ್ರಮಪಡುತ್ತಿದ್ದಾರೆ. ಆದರೆ, ನಮ್ಮ ಪಕ್ಷದ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ (Pakistan) ಮಾತ್ರ ಇದನ್ನು ಸಹಿಸಲಾಗುತ್ತಿಲ್ಲ. ನಮ್ಮ ದೇಶದಲ್ಲಿ ನಾವು ಕಟ್ಟಿರುವ ರಾಮ ಮಂದಿರ ಮತ್ತು ಪ್ರಾಣ ಪ್ರತಿಷ್ಠಾಪನೆಗೆ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದೆ. ಇದಕ್ಕೆ ಸರಿಯಾದ ತಿರುಗೇಟು ನೀಡಿರುವ ಭಾರತದ (India) ವಿದೇಶಾಂಗ ಸಚಿವಾಲಯವು, ನಾವು ಅವರಂತೆ (ಪಾಕಿಸ್ತಾನ) ಬನಾನಾ ರಿಪಬ್ಲಿಕ್ ಅಲ್ಲ; ಅಲ್ಲಿರುವುದು ರಾಜಿ ಮಾಡಿಕೊಳ್ಳುವ ನ್ಯಾಯಾಂಗ ಮತ್ತು ಅದು ಐಎಸ್ಐ ನಿರ್ದೇಶನಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.

ಪಾಕಿಸ್ತಾನ ಹೇಳಿದ್ದೇನು?

ಕೆಡವಲ್ಪಟ್ಟ ಮಸೀದಿಯ ಸ್ಥಳದಲ್ಲಿ ನಿರ್ಮಿಸಲಾದ ದೇವಾಲಯವು ಮುಂದಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವದ ಮುಖದ ಮೇಲೆ ಕಳಂಕವಾಗಿ ಉಳಿಯುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ‘ಹಿಂದುತ್ವ’ ಸಿದ್ಧಾಂತದ ಉಬ್ಬರವಿಳಿತವು ಧಾರ್ಮಿಕ ಸಾಮರಸ್ಯ ಮತ್ತು ಪ್ರಾದೇಶಿಕ ಶಾಂತಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಭಾರತದಲ್ಲಿ ಬೆಳೆಯುತ್ತಿರುವ ಇಸ್ಲಾಮೋಫೋಬಿಯಾ, ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ ಬಗ್ಗೆ ಸಮುದಾಯವು ಗಮನಹರಿಸಬೇಕು” ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮೂಲಕ ಭಾರತೀಯ ಮುಸ್ಲಿಮ್ ಸಮುದಾಯವನ್ನು ಎತ್ತಿ ಕಟ್ಟುವ ಪ್ರಯತ್ನವನ್ನು ಪಾಕಿಸ್ತಾನ ಮಾಡಿದೆ. ಅಲ್ಲದೇ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಪಾಕಿಸ್ತಾನ ಟೀಕಿಸಿದೆ.

ಭಾರತದ ತಿರುಗೇಟು

ಭಾರತೀಯ ಮುಸ್ಲಿಮ್ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತವು ತಿರುಗೇಟು ನೀಡಿದೆ. ಭಾರತದ ವಿದೇಶಾಂಗ ಸಚಿವಾಲಯವು, ನಾವು ಅವರಂತೆ (ಪಾಕಿಸ್ತಾನ) ಬನಾನಾ ರಿಪಬ್ಲಿಕ್ ಅಲ್ಲ; ಅಲ್ಲಿರುವುದು ರಾಜಿ ಮಾಡಿಕೊಳ್ಳುವ ನ್ಯಾಯಾಂಗ ಮತ್ತು ಅದು ಐಎಸ್ಐ ನಿರ್ದೇಶನಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದೆ.

ಈ ಪ್ರಕರಣವು ಹಲವು ದಶಕಗಳಿಂದ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿದೆ. ಇದು ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲಾ ನ್ಯಾಯಾಲಯಗಳ ಮೂಲಕ ವಿಚಾರಣೆಗೊಳಪಟ್ಟಿದೆ. ಒಂದೇ ಪೀಠದಿಂದ ಯಾವುದೇ ಪ್ರಮುಖ ತೀರ್ಪು ಬಂದಿಲ್ಲ, ಮತ್ತು ಅಲ್ಪಸಂಖ್ಯಾತ ನ್ಯಾಯಾಧೀಶರು ತೀರ್ಪಿನಲ್ಲಿ ಭಾಗಿಯಾಗಿದ್ದಾರೆ ಎಂದು ಭಾರತವು ಹೇಳಿದೆ. ಭಾರತೀಯ ನ್ಯಾಯಾಂಗ ವಸ್ತುನಿಷ್ಠೆತೆಯನ್ನು ಸಮರ್ಥಿಸಿಕೊಂಡಿದೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಮುಸ್ಲಿಮರನ್ನು ಪ್ರಚೋದಿಸುವ ಮೂಲಕ ಪಾಕಿಸ್ತಾನ ತೊಂದರೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಎಲ್ಲ ಧರ್ಮಗಳಿಗೂ ಜಾಗ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Ram Mandir: ಬಾಲ ರಾಮನ ವಿಗ್ರಹಕ್ಕೆ ಕೃಷ್ಣ ಶಿಲೆಯನ್ನೇ ಏಕೆ ಬಳಸಿದ್ದು?

Exit mobile version