Site icon Vistara News

Pakistan Hindu | ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತ ತಾಕೀತು

Arindam Bagchi

ನವದೆಹಲಿ: ಪಾಕಿಸ್ತಾನಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಭಾರತವು, ಅಲ್ಪಸಂಖ್ಯಾತರ ರಕ್ಷಣೆಯ ಜವಾಬ್ದಾರಿಯನ್ನು ಪಾಕಿಸ್ತಾನ ಸರ್ಕಾರವು ಹೊತ್ತುಕೊಳ್ಳಬೇಕೆಂದು ಹೇಳಿದೆ(Pakistan Hindu).

ಇತ್ತೀಚೆಗಷ್ಟೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಿಂಝೋರ್‌ ಎಂಬಲ್ಲಿ 42 ವರ್ಷದ ಹಿಂದು ಮಹಿಳೆ ದಿಯಾ ಭೀಲ್ ಎಂಬಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಶಿರಚ್ಚೇಧನ ಮಾಡಲಾಗಿತ್ತು. ಈ ಘಟನೆಯನ್ನು ಖಂಡಿಸಿರುವ ಭಾರತವು, ಅಲ್ಪ ಸಂಖ್ಯಾತರ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು ಎಂದು ಹೇಳಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪಾಕಿಸ್ತಾನದಲ್ಲಿರುವ ಹಿಂದು ಅಲ್ಪ ಸಂಖ್ಯಾತರ ಸುರಕ್ಷತೆಯ ಕುರಿತು ಗಂಭೀರ ಕ್ರಮಗಳನ್ನು ಪಾಕಿಸ್ತಾನವು ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಕ್ರೂರ ಘಟನೆಗೆ ಬಗ್ಗೆ ಮಾಹಿತಿಯಿದೆ. ಈ ಕುರಿತು ವಿವರವಾಗಿ ಹೇಳಲು ಹೋಗುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆ, ಭದ್ರತೆ ಮತ್ತು ಅವರ ಕಲ್ಯಾಣವನ್ನು ಕೈಗೊಳ್ಳುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್​ರೇಪ್​ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು

Exit mobile version