Site icon Vistara News

Pankaj Udhas: ಪಂಕಜ್‌ ಉದಾಸ್ ಅವರನ್ನು ಬಲಿ ಪಡೆದ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ ಬಗ್ಗೆ ನಿಮಗೆ ಗೊತ್ತಿರಲಿ

Ghazal Singer Pankaj Udhas is no more

ಪ್ರಸಿದ್ಧ ಗಜಲ್ ಗಾಯಕ ಪಂಕಜ್ ಉದಾಸ್ (Pankaj Udhas) ಅವರು ಹಲವು ತಿಂಗಳುಗಳ ಕಾಲ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ (pancreatic cancer) ಜೊತೆಗೆ ಹೋರಾಡಿ ಸೋಮವಾರ ನಿಧನರಾಗಿದ್ದಾರೆ. ಇದು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ ಬಗ್ಗೆ ನಮ್ಮಲ್ಲಿ ಅರಿವು ಮೂಡಿಸುವಂತಾಗಲಿ.

ಮೇದೋಜ್ಜೀರಕ ಗ್ರಂಥಿಯಲ್ಲಿನ ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆಯಿಂದಾಗಿ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಉಂಟಾಗುತ್ತದೆ. ಹೊಟ್ಟೆಯಲ್ಲಿರುವ ಈ ಗ್ರಂಥಿ ಜೀರ್ಣಕ್ರಿಯೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದು ಬೆನ್ನುಮೂಳೆ ಮತ್ತು ಹೊಟ್ಟೆಯ ನಡುವೆ ಇರುವ, 6 ಇಂಚು ಉದ್ದದ, ಸ್ಪಂಜಿನಂಥ, ಟ್ಯೂಬ್ ಆಕಾರದ ಅಂಗವಾಗಿದೆ. ಇದರ ಮುಖ್ಯ ಕಾರ್ಯ ಜೀರ್ಣಕಾರಿ ರಸವನ್ನು (ಕಿಣ್ವಗಳು ಎಂದು ಕರೆಯಲಾಗುತ್ತದೆ) ಮತ್ತು ಇನ್ಸುಲಿನ್ ಸೇರಿದಂತೆ ಹಾರ್ಮೋನ್‌ಗಳನ್ನು ತಯಾರಿಸುವುದು. ಇದು ರಕ್ತದ ಸಕ್ಕರೆ ಮಟ್ಟ ಕಾಪಾಡಲು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.

ಆರಂಭಿಕ ಹಂತದಲ್ಲಿದ್ದರೆ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಬಹುದು. ಇಲ್ಲಿದ್ದರೆ ಇದು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಏಕೆಂದರೆ ಇದರ ಚಿಕಿತ್ಸಾ ಆಯ್ಕೆಗಳು ಸೀಮಿತ. ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯು ಮುಖ್ಯ. ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಅತ್ಯಂತ ಆಕ್ರಮಣಕಾರಿ. ಇದು ಭಾರತದಲ್ಲಿ ಪ್ರತಿ ವರ್ಷ 4 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ.‌

ಲಕ್ಷಣಗಳು

ಕಾರಣಗಳು

ರೋಗನಿರ್ಣಯ ಮತ್ತು ಚಿಕಿತ್ಸೆ

ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ಟ್ಯೂಮರ್ ರೆಸೆಕ್ಷನ್ ಅಥವಾ ಪ್ಯಾಂಕ್ರಿಯಾಟಿಕೋಡ್ಯುಡೆನೆಕ್ಟಮಿ, ಕಿಮೊಥೆರಪಿ, ವಿಕಿರಣ ಚಿಕಿತ್ಸೆ, ಇಮ್ಯುನೊಥೆರಪಿ, ಅಥವಾ ಈ ವಿಧಾನಗಳ ಸಂಯೋಜನೆ. ಕ್ಯಾನ್ಸರ್ ಅನ್ನು ನಿಯಂತ್ರಿಸುವುದು, ರೋಗಲಕ್ಷಣಗಳನ್ನು ನಿವಾರಿಸುವುದು ಮತ್ತು ರೋಗಿಯ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಚಿಕಿತ್ಸೆಯ ಗುರಿ. ಇದನ್ನು ಪತ್ತೆಹಚ್ಚಲು ಅಲ್ಟ್ರಾಸೌಂಡ್, CT ಸ್ಕ್ಯಾನ್, MRI ಸ್ಕ್ಯಾನ್ ಮತ್ತು PET ಸ್ಕ್ಯಾನ್‌ನಂತಹ ಇಮೇಜಿಂಗ್ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಬಯಾಪ್ಸಿಐಲ್ಲಿ ಅಂಗಾಂಶದ ಸಣ್ಣ ಮಾದರಿಯನ್ನು ತೆಗೆದುಕೊಂಡು ಪರೀಕ್ಷಿಸಲಾಗುತ್ತದೆ.

ಮುನ್ನೆಚ್ಚರಿಕೆ ಹಾಗೂ ಜೀವನಶೈಲಿ ಬದಲಾವಣೆ

ಧೂಮಪಾನವನ್ನು ತ್ಯಜಿಸಿ ಅಥವಾ ಮಿತಿಗೊಳಿಸಿ: ಅತಿಯಾದ ಮದ್ಯಪಾನವು ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಮತ್ತು ಪ್ರಾಯಶಃ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ನಿಯಮಿತ ವ್ಯಾಯಾಮ, ಯೋಗ ಮತ್ತು ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ತೂಕವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಪ್ರಯತ್ನಿಸಿ.

ರೆಡ್‌ ಮೀಟ್‌, ಸಂಸ್ಕರಿಸಿದ ಮಾಂಸ, ಸಕ್ಕರೆ ಮತ್ತು ಕರಿದ ಆಹಾರಗಳ ಸೇವನೆಯನ್ನು ತಪ್ಪಿಸಿ. ಬದಲಾಗಿ ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ನೇರ ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳಬೇಕು.

ಇದನ್ನೂ ಓದಿ: Raja Marga Column : ಗಝಲ್ ಕೀ ಮಿಟಾಸ್ ಪಂಕಜ್ ಉಧಾಸ್ ; ಹಾಡು ನಿಲ್ಲಿಸಿದ ಗಝಲ್‌ ಸಾಮ್ರಾಟ

Exit mobile version