ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಫಸ್ಟ್ ಲೇಡಿ ಜಿಲ್ ಬೈಡೆನ್ ದಂಪತಿ ಪ್ರಧಾನಿ ನರೇಂದ್ರ ಮೋದಿಯವರಿಗೋಸ್ಕರ ಆಯೋಜಿಸಿದ್ದ ಔತಣಕೂಟದಲ್ಲಿ (PM Modi US visit) ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಮತ್ತು ಮುಖ್ಯಸ್ಥೆ ನೀತಾ ಅಂಬಾನಿ ಭಾಗವಹಿಸಿದ್ದಾರೆ. ಜೆರೋಧಾ ಸ್ಥಾಪಕ ನಿಖಿಲ್ ಕಾಮತ್, ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ, ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಳ್ಳಾ ಮೊದಲಾದ ಕಾರ್ಪೊರೇಟ್ ವಲಯದ ದಿಗ್ಗಜರು ಭಾಗವಹಿಸಿದ್ದರು. ಈ ಔತಣಕೂಟ ಐತಿಹಾಸಿಕ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.
#WATCH | Mukesh Ambani & Nita Ambani arrive at the White House for the State Dinner@narendramodi @JoeBiden @PMOIndia #ModiInUSA #IndiaUSRelations #PMModiUSVisit #ModiUSVisit2023 #NarendraModi #HistoricStateVisit2023 #IndiaUSAPartnership #USWelcomesModi #CNBCTV18Digital pic.twitter.com/w7hHtVdWxg
— CNBC-TV18 (@CNBCTV18News) June 23, 2023
ಜೋ ಬೈಡೆನ್ 400 ಅತಿಥಿಗಳನ್ನು ಔತಣಕೂಟಕ್ಕೆ ಆಹ್ವಾನಿಸಿದ್ದರು. ಅತಿಥಿಗಳ ಪಟ್ಟಿಯಲ್ಲಿ ಟಿಮ್ ಕುಕ್, ಇಂದ್ರಾ ನೂಯಿ, ಆಂಟನಿ ಬ್ಲಿಂಕೆನ್, ಶಂತನು ನಾರಾಯಣ್, ಎರಿಕ್ ಗಾರ್‌ಸಿಟಿ, ಕೆವಿನ್ ಮೆಕಾರ್ತಿ, ಗಿನಾ ರೈಮೊಂಡೊ, ಮಾರ್ಟಿನ್ ಲೂಥರ್ ಕಿಂಗ್ III ಮತ್ತಿತರರು ಭಾಗವಹಿಸಿದ್ದರು. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾಗವಹಿಸಿದ್ದರು.
ಅಮೆರಿಕದ ಶ್ವೇತಭವನದಲ್ಲಿ ಅಧ್ಯಕ್ಷರು ಬೇರೊಂದು ದೇಶದ ಪ್ರಧಾನಿ, ಅಧ್ಯಕ್ಷ ಅಥವಾ ರಾಜ ಮನೆತನದ ಪ್ರಮುಖರ ಗೌರವಾರ್ಥ ಏರ್ಪಡಿಸುವ ಔತಣಕೂಟಕ್ಕೆ ವಿಶೇಷ ಮಹತ್ವ ಇದೆ. ಆಪ್ತ ರಾಷ್ಟ್ರಕ್ಕೆ ಅಮೆರಿಕ ಇಂಥ ಆದ್ಯತೆ, ಮನ್ನಣೆಯ ಗೌರವವನ್ನು ನೀಡುತ್ತದೆ. ಅಮೆರಿಕ ಮತ್ತು ಭಾರತದ ಮೈತ್ರಿ ಜಾಗತಿಕ ಮಟ್ಟದಲ್ಲಿ ನಿರ್ಣಾಯಕವಾಗಿದೆ. ಬೈಡೆನ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದುವರೆಗೆ ಕೇವಲ ಇಬ್ಬರು ರಾಷ್ಟ್ರ ನಾಯಕರಿಗೆ ಮಾತ್ರ ಈ ವಿಶೇಷ ಆತಿಥ್ಯ ನೀಡಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸೂಕ್ ಯೋಲ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರೋನ್.
ಸುಂದರ್ ಪಿಚೈ-ಅಂಜಲಿ ಪಿಚೈ ದಂಪತಿ ಮುಕೇಶ್-ನೀತಾ ಅಂಬಾನಿ ಜತೆಗೆ ಕುಶಲೋಪರಿ ನಡೆಸಿ ಫೊಟೊಗೆ ಪೋಸು ಕೊಟ್ಟರು.