Site icon Vistara News

PM Narendra Modi: ಮೋದಿಗೆ ಟ್ವಿಟರ್‌ನಲ್ಲಿ 9 ಕೋಟಿ ಫಾಲೋವರ್ಸ್! ಟ್ರಂಪ್ ಹಿಂದಿಕ್ಕಿದ ಭಾರತದ ಪ್ರಧಾನಿ

Uttarkashi Tunnel rescue success makes us emotional says PM Narendra Modi

ನವದೆಹಲಿ: ಜಗತ್ತಿನ ನಂಬರ್ 1 ಜನಪ್ರಿಯ ನಾಯಕರೆನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಟ್ವಿಟರ್‌ನಲ್ಲೂ (Twitter) ಅದ್ವಿತೀಯ ಸಾಧನೆ ಮಾಡಿದ್ದಾರೆ. ಜಾಗತಿಕವಾಗಿ ಸಕ್ರಿಯ ರಾಜಕಾರಣಿಗಳಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯು ಈಗ 90 ಮಿಲಿಯನ್ ಅಂದರೆ, 9 ಕೋಟಿ ಫಾಲೋವರ್ಸ್ ಹೊಂದಿದೆ. ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (US Former President Donald Trump) ಅವರನ್ನು ಹಿಂದಿಕ್ಕಿರುವ ಭಾರತದ ಪ್ರಧಾನಿ ಮೋದಿ ಅವರು ಟಾಪ್ 10 ಪಟ್ಟಿಯಲ್ಲಿ (Top 10 List) 8ನೇ ಸ್ಥಾನಕ್ಕೆ ಏರಿಕೆಯಾಗಿದ್ದಾರೆ.

90.2 ಮಿಲಿಯನ್ ಫಾಲೋವರ್ಸ್ ಹೊಂದಿರುವ ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಅತಿ ಹೆಚ್ಚು ಅನುಸರಿಸುವ ಭಾರತೀಯರಾಗಿದ್ದಾರೆ. ಅವರ ಅನುಯಾಯಿಗಳ ಪಟ್ಟಿಯಲ್ಲಿ ಟ್ವಿಟರ್ ಬಾಸ್ ಎಲಾನ್ ಮಸ್ಕ್ ಸೇರಿದ್ದಾರೆ. ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೋದಿ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಕೇವಲ 195 ವ್ಯಕ್ತಿಗಳನ್ನು ಫಾಲೋ ಮಾಡುತ್ತಾರೆ. ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ 2,589 ಜನರನ್ನು ಅನುಸರಿಸುತ್ತಾರೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು 2009ರಲ್ಲಿ ಟ್ವಿಟರ್‌ಗೆ ಎಂಟ್ರಿ ಕೊಟ್ಟರು. ಒಂದೇ ವರ್ಷದಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಒಂದು ಲಕ್ಷಕ್ಕೇರಿತ್ತು 2020 ಜುಲೈನಲ್ಲಿ ಪ್ರಧಾನಿ ಮೋದಿ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ 6 ಕೋಟಿಗೆ ಏರಿಕೆಯಾಗಿತ್ತು.

ಜುಲೈ 9 ರಂದು ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ವಿಶ್ವದಲ್ಲೇ ಟ್ವಿಟರ್‌ನಲ್ಲಿ ಹೆಚ್ಚು ಅನುಸರಿಸುತ್ತಿರುವ ಟಾಪ್ 10 ವ್ಯಕ್ತಿಗಳಲ್ಲಿ ಪಿಎಂ ಮೋದಿ ಏಕೈಕ ಭಾರತೀಯರಾಗಿದ್ದಾರೆ. ಈ ಟಾಪ್ 10 ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೆ ಏರಿಕೆಯಾಗಿದ್ದಾರೆ. ಟ್ರಂಪ್ ಅವರು 8.6 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅಮೆರಿಕ ಸಿಂಗರ್ ಹಾಗೂ ನಟಿ ಲೇಡಿ ಗಾಗಾ ಅವರಿಗೆ ಟ್ವಿಟರ್‌ನಲ್ಲಿ 8.41 ಕೋಟಿ ಫಾಲೋವರ್ಸ್ ಇದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi Interview: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ಫ್ರಾನ್ಸ್‌ ಪತ್ರಿಕೆಗೆ ನರೇಂದ್ರ ಮೋದಿ ವಿಶೇಷ ಸಂದರ್ಶನ

ಈ ಟಾಪ್ 10 ಪಟ್ಟಿಯಲ್ಲಿ ಎಲಾನ್ ಮಸ್ಕ್ 14.7 ಕೋಟಿ ಫಾಲೋವರ್ಸ್‌ಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಾರಾಕ್ ಒಬಾಮ್ ಅವರಿದ್ದಾರೆ. ಅವರಿಗೆ 13.21 ಕೋಟಿ ಫಾಲೋವರ್ಸ್ ಇದ್ದಾರೆ. ನಂತರ ಸ್ಥಾನದಲ್ಲಿ ಸಿಂಗರ್ ಜಸ್ಟೀನ್ ಬೈಬೇರ್(1.1 ಕೋಟಿ), ದಂತಕತೆ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ (10.89 ಕೋಟಿ) ಇದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version