Site icon Vistara News

Modi In Karnataka: ನಂಜನಗೂಡು ಶ್ರೀಕಂಠೇಶ್ವರನ ದರ್ಶನ ಪಡೆದ ಮೋದಿ, ಇದೇ ವೇಳೆ ಮಾಡಿದ ಸಂಕಲ್ಪವೇನು?

Modi In Karnataka

Modi In Karnataka

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ (Modi In Karnataka) ಕಳೆದ ಮೂರು ದಿನಗಳಿಂದ ಸಾಲು ಸಾಲು ಸಮಾವೇಶ, ರ‍್ಯಾಲಿ, ರೋಡ್‌ ಶೋಗಳನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯುವ ಮೊದಲು ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದರು. ನಂಜನಗೂಡು ಹೊರವಲಯದಲ್ಲಿ ಬೃಹತ್‌ ಸಮಾವೇಶ ಕೈಗೊಂಡ ಮೋದಿ, ದೆಹಲಿಗೆ ತೆರಳುವ ಮುನ್ನ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿಯೇ ಅರ್ಧ ಗಂಟೆ ಕಳೆದರು.

ಪೂರ್ವ ನಿಗದಿಯಂತೆ ದೇವಾಲಯಕ್ಕೆ ತೆರಳಿದ ಮೋದಿ, ಮೊದಲಿಗೆ ಮಹಾ ಗಣಪತಿಗೆ ಪೂಜೆ ಸಲ್ಲಿಸಿದರು. ಶಕ್ತಿ ಗಣಪತಿಗೆ ಉದ್ದಂಡ ನಮಸ್ಕಾರ ಹಾಕಿದ ಬಳಿಕ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಾಗೆಯೇ, ಬಿಲ್ವಪತ್ರ ಹಿಡಿದು ಲೋಕಕಲ್ಯಾಣಕ್ಕಾಗಿ ಸೇವೆ ಮಾಡುವ ಸಂಕಲ್ಪ ತೊಟ್ಟರು. ಇದೇ ವೇಳೆ ಅರ್ಚಕರು ಮೋದಿ ಹಣೆಗೆ ವಿಭೂತಿ ಇಟ್ಟು, ಶಾಲು ಹೊದಿಸಿ, ಹೂವಿನ ಹಾರ ಹಾಕಿದರು. ಇದಾದ ಬಳಿಕ ವಿಶೇಷ ಪೂಜೆ ನೆರವೇರಿಸಿದರು.

ನಂಜನಗೂಡು ದೇವಾಲಯದಲ್ಲಿ ಮೋದಿ

ಸುಮಾರು ಅರ್ಧ ಗಂಟೆ ದೇವಾಲಯದಲ್ಲಿಯೇ ಕಳೆದ ಮೋದಿ, ವಿಶೇಷ ಪೂಜೆ ಜತೆಗೆ ಧ್ಯಾನ ಮಾಡಿದರು. ದೇವಾಲಯದ ಪ್ರಧಾನ ಅರ್ಚಕ ನೀಲಕಂಠ ದೀಕ್ಷಿತ್‌ ಅವರು ಪೂಜೆ ಮಾಡಿ, ಮೋದಿ ಅವರಿಗೆ ತಾಂಬೂಲ ಪ್ರಸಾದ ವಿತರಿಸಿದರು.

ವಿಶೇಷ ಪೂಜೆ ಮುಗಿಸಿ, ಸಂಕಲ್ಪ ತೊಟ್ಟು ದೇವಾಲಯದಿಂದ ಹೊರಬಂದ ಮೋದಿ ಎಲ್ಲ ಅರ್ಚಕರ ಜತೆ ಮಾತನಾಡಿದರು. ನೆರೆದಿದ್ದ ಜನರಿಗೆ ಕೈ ಮುಗಿದರು. ದೇವರ ದರ್ಶನದ ಬಳಿಕ ಮೋದಿ ಅವರು ಮೈಸೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ಹಾರಿದರು. ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಮೂರು ದಿನಗಳಿಂದ ರಾಜ್ಯದ ಹಲವೆಡೆ ಅಬ್ಬರದ ಪ್ರಚಾರ ಕೈಗೊಂಡರು. ಭಾನುವಾರ ಅವರು ಪ್ರಚಾರ ಮುಗಿಸಿ, ದೆಹಲಿಗೆ ತೆರಳಿದರು.

ಇದನ್ನೂ ಓದಿ: Modi in Karnataka : ಸುಡಾನ್‌ನಿಂದ ರಕ್ಷಿಸಲ್ಪಟ್ಟ ಹಕ್ಕಿಪಿಕ್ಕಿ ಸಮುದಾಯದ ಜನರಿಂದ ಮೋದಿಗೆ THANKS

Exit mobile version