Site icon Vistara News

Rahul Gandhi: ಕೊನೆಗೂ ಪ್ರಧಾನಿ ಮೋದಿಯನ್ನು ಮೆಚ್ಚಿಕೊಂಡ ರಾಹುಲ್ ಗಾಂಧಿ!

Rahul Gandhi at Stanford university

ವಾಷಿಂಗ್ಟನ್, ಅಮೆರಿಕ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅವರ ಸರ್ಕಾರದ ನೀತಿಗಳನ್ನು ನಿರ್ಭಿತವಾಗಿ ಟೀಕಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಇದೇ ಮೊದಲ ಬಾರಿಗೆ ಅವರನ್ನು ಹೊಗಳಿದ್ದಾರೆ! ಹೀಗೆ ಹೇಳಿದರೆ ಆಶ್ಚರ್ಯವಾಗಬಹುದು. ಆದರೂ, ಇದು ನಿಜ, ಅಮೆರಿಕದ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ಉಕ್ರೇನ್ (Ukraine) ಮತ್ತು ರಷ್ಯಾ (Russia) ಸಂಘರ್ಷ ಸಂಬಂಧ ಭಾರತ ಸರ್ಕಾರ ತೆಗೆದುಕೊಂಡಿರುವ ನಿಲುವಿಗೆ ತಮ್ಮ ಸಮ್ಮತಿಯನ್ನು ನೀಡಿದ್ದಾರೆ. ಇದೇ ವೇಳೆ, ಚೀನಾದ ಪ್ರಜಾಪ್ರಭುತ್ವವಲ್ಲದ ದೃಷ್ಟಿಕೋನವನ್ನು ಎದುರಿಸಲು ಪ್ರಜಾಪ್ರಭುತ್ವಪರವಾದ ಜಗತ್ತು ವಿಫಲವಾಗಿದೆ. ಹಾಗಾಗಿ, ಈ ನಿಟ್ಟಿನಲ್ಲಿ ಹೊಸದಾದ ವ್ಯವಸ್ಥೆಯನ್ನು ರೂಪಿಸಬೇಕಾದ ಅಗತ್ಯವಿದ್ದು, ಭಾರತ ಮತ್ತು ಅಮೆರಿಕಗಳೆರಡೂ ಒಟ್ಟಾಗಿ ಕೆಲಸ ಮಾಡಬಹುದಾಗಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.

ವಾಷಿಂಗ್ಟನ್‌ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಸಂಸತ್ತಿನಿಂದ ಅನರ್ಹಗೊಂಡಿದ್ದರಿಂದ, ಈ ಮೊದಲಿಗಿಂತಲೂ ಇನ್ನೂ ಹೆಚ್ಚು ರಾಜಕೀಯ ಅವಕಾಶ ಸೃಷ್ಟಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಭಾರತದ ಆಂತರಿಕ ರಾಜಕೀಯ ಸಂಘರ್ಷಕ್ಕಾಗಿ ಬೆಂಬಲ ಪಡೆಯಲು ತಾವು ಅಂತಾರಾಷ್ಟ್ರೀಯವಾಗಿ ಪ್ರಯತ್ನಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆಂತರಿಕ ವಿಚಾರಕ್ಕಾಗಿ ರಾಹುಲ್ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ರಾಹುಲ್ ಗಾಂಧಿ ಆಹ್ವಾನಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸುತ್ತದೆ.

ವಿಶ್ವವಿದ್ಯಾಲಯದ ಸಂವಾದದಲ್ಲಿ, ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ಕುರಿತು ಭಾರತದ ನಿಲುವಿನ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಪ್ರಶ್ನಿಸಿದಾಗ, ಎಲ್ಲರೂ ಹುಬ್ಬೇರಿಸುವಂತೆ ಉತ್ತರ ನೀಡಿದರು. ರಷ್ಯಾ-ಉಕ್ರೇನ್ ವಿಷಯದಲ್ಲಿ ಭಾರತ ಸರ್ಕಾರ ಕೈಗೊಂಡಿರುವ ನಿಲುವಿಗೆ ತಮ್ಮ ಸಹಮತ ವ್ಯಕ್ತಪಡಿಸಿದರು. ನಾವು ರಷ್ಯಾದೊಂದಿಗೆ ದೀರ್ಘ ಸಮಯದಿಂದ ಸಂಬಂಧವನ್ನು ಹೊಂದಿದ್ದೇವೆ. ಹಾಗೆಯೇ, ನಾವು ರಷ್ಯಾದ ಮೇಲೆ ಕೆಲವು ಅವಲಂಬನೆಗಳನ್ನು ಹೊಂದಿದ್ದೇವೆ. ಹಾಗಾಗಿ ನಾನು ಭಾರತ ಸರ್ಕಾರದಂತೆಯೇ ಒಂದೇ ರೀತಿಯ ನಿಲುವನ್ನು ಹೊಂದಿದ್ದೇನೆ. ಅಂತಿಮವಾಗಿ, ನಾವು ನಮ್ಮ ಹಿತಾಸಕ್ತಿಗಳನ್ನು ಸಹ ನೋಡಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ನಾವು ಕೆಲವು ರಾಷ್ಟ್ರಗಳೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಯ್ದುಕೊಳ್ಳಬಹುದು. ಮತ್ತೆ ಕೆಲವು ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಬಹುದು. ಅಂಥ ಸಮತೋಲನವೊಂದು ಇದೆ. ಆದರೆ, ಭಾರತವು ಕೆಲವು ರಾಷ್ಟ್ರಗಳೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಸಾಧಿಸಲು ಹೋಗುವುದಿಲ್ಲ. ಇದು ಭಾರತಕ್ಕೂ ಕಷ್ಟು ಎಂದು ರಾಹುಲ್ ಗಾಂಧಿ ಅವರು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನೂ ಓದಿ: ಪಟ್ಟಾಭಿಷೇಕವೆಂದು ಭಾವಿಸಿದ್ದಾರೆ ಪ್ರಧಾನಿ ಮೋದಿ: ಸಂಸತ್ ಭವನ ಲೋಕಾರ್ಪಣೆಗೆ ರಾಹುಲ್ ಗಾಂಧಿ ಟೀಕೆ

ರಾಹುಲ್ ಗಾಂಧಿ ಅವರು 6 ದಿನಗಳ ಕಾಲ ಅಮೆರಿಕದ ಪ್ರವಾಸದಲ್ಲಿದ್ದಾರೆ. ಸ್ಯಾನ್‌‌ಫ್ರಾನ್ಸಿಸ್ಕೋದಲ್ಲಿ ಎರಡು ದಿನಗಳನ್ನು ಕಳೆದ ಬಳಿಕ ಅವರು, ವಾಷಿಂಗ್ಟನ್ ಡಿಸಿಗೆ ಆಗಮಿಸಿದ್ದಾರೆ. ಇಲ್ಲಿನ ಥಿಂಕ್ ಟ್ಯಾಂಕ್ ಮತ್ತು ಭಾರತೀಯ ಸಮುದಾಯ ಹಾಗೂ ಮಾಧ್ಯಮಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ..

Exit mobile version