ಪಟಂಚೇರು: ತೆಲಂಗಾಣದ ಸಂಗಾರೆಡ್ಡಿ ಅಬಕಾರಿ ನ್ಯಾಯಾಲಯ ಆಯೋಜಿಸಿದ್ದ ಕೋಳಿಗಳ ಹರಾಜಿನಲ್ಲಿ ಹುಂಜವೊಂದು ಬರೊಬ್ಬರಿ 30,000 ರೂ.ಗೆ ಹರಾಜು ಆಗಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು. ಯಾಕೆಂದರೆ, ಈ ಅಂಕದ ಕೋಳಿಗಳಿಗೆ ಇರುವ ಬೇಡಿಕೆಯೇ ಅಂಥದ್ದು!
ರಂಗಾರೆಡ್ಡಿಯ ಜಿಲ್ಲೆಯ ಪಟಂಚೇರು ಮಂಡಲದ ಚಿನ್ನಕಂಜೇರ್ಲಾ ಗ್ರಾಮದ ಮಾವಿನ ತೋಪಿನಲ್ಲಿ ಜುಲೈ 7ರಂದು ಕೋಳಿ ಅಂಕ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಕೋಳಿಗಳು ಮತ್ತು ಜನರು ಭಾಗವಹಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಪೊಲೀಸರ ಮಾಹಿತಿ ಪಡೆದ ಕೆಲವರು ಕೋಳಿಗಳೊಂದಿಗೆ ಪರಾರಿಯಾಗಿದ್ದರು. ಅಂತಿಮವಾಗಿ ಒಟ್ಟು ೩೦ ಕೋಳಿಗಳು ಪೊಲೀಸರ ವಶವಾಗಿದ್ದವು.
ಪೊಲೀಸರು ತಾವು ವಶಪಡಿಸಿಕೊಂಡ ಹುಂಜಗಳನ್ನು ಸಂಗಾರೆಡ್ಡಿ ಅಬಕಾರಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಅಧಿಕಾರಿಗಳು ಬಳಿಕ ಇವುಗಳನ್ನು ಹರಾಜಿಗೆ ಹಾಕಿದ್ದಾರೆ. ಹರಾಜು ಮಾಡುವ ಸಮಯದಲ್ಲಿ 50 ಬಿಡ್ಡರ್‌ಗಳು ಭಾಗವಹಿಸಿದ್ದರು. ಹರಾಜಿನಲ್ಲಿ ಒಟ್ಟು 4.46 ಲಕ್ಷ ರೂ.ಗೆ ಭಾರಿ ಮೊತ್ತ ಸಂಗ್ರಹವಾಗಿದೆ. ಇಲ್ಲಿ ಹುಂಜಗಳ ಪೈಕಿ ಒಂದು ಹುಂಜ ಅತಿ ಹೆಚ್ಚು ಅಂದರೆ 30 ಸಾವಿರ ರೂ.ಗೆ ಹರಾಜು ಆಗಿದೆ.
ಇದನ್ನೂ ಓದಿ|Viral Video| ಈ ಹುಂಜ ಒಂದೇ ಸಮ ಕೂಗಿದ್ದೇಕೆ, ಉರುಳಿ ಬಿದ್ದಿದ್ದೇಕೆ?; ಕೋಳಿ ಕತೆಯಲ್ಲಿ ನೀತಿ ಹುಡುಕಿ