Site icon Vistara News

ISIS Terror| ಭಾರತದಲ್ಲಿ ದಾಳಿಗೆ ಪ್ಲ್ಯಾನ್‌ ಮಾಡಿದ್ದ ಉಗ್ರ ರಷ್ಯಾದಲ್ಲಿ ಸೆರೆ, ಆಡಳಿತ ಪಕ್ಷದ ನಾಯಕನ ಹತ್ಯೆಗೆ ಸ್ಕೆಚ್?

ISIS attacker

ನವ ದೆಹಲಿ: ಭಾರತಕ್ಕೆ ಬಂದು ಇಲ್ಲಿ ಆತ್ಮಹತ್ಯಾ ದಾಳಿ ಮಾಡಲು ಸ್ಕೆಚ್‌ ಹಾಕಿದ್ದ ಐಸಿಸ್‌ ಮೂಲದ ಉಗ್ರನೊಬ್ಬನನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌ (ಎಫ್‌ಎಸ್‌ಬಿ) ಈ ಸಂಬಂಧ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ರಷ್ಯಾದ ಪೊಲೀಸ್‌ ವ್ಯವಸ್ಥೆ ನೀಡಿರುವ ಸಂದೇಶದಲ್ಲಿ ಇನ್ನೊಂದು ಎಚ್ಚರಿಕೆಯ ಮಾಹಿತಿಯನ್ನೂ ನೀಡಲಾಗಿದೆ. ʻʻಭಯೋತ್ಪಾದಕ ಭಾರತದಲ್ಲಿ ಆತ್ಮಹತ್ಯಾ ದಾಳಿಗೆ ಸಿದ್ಧತೆ ನಡೆಸುತ್ತಿದ್ದ. ಅದರಲ್ಲೂ ಮುಖ್ಯವಾಗಿ ಭಾರತದ ಆಡಳಿತ ಪಕ್ಷದಲ್ಲಿರುವ ಪ್ರತಿನಿಧಿಗಳಲ್ಲಿ ಒಬ್ಬರ ಮೇಲೆ ದಾಳಿ ಮಾಡುವುದು ಅವನ ಗುರಿಯಾಗಿತ್ತುʼʼ ಎಂದು ಹೇಳಿದ್ದಾರೆ.

ಬಂಧಿತ ಉಗ್ರ ಐಸಿಸ್‌ ಸಂಘಟನೆಗೆ ಸೇರಿದವನಾಗಿದ್ದು, ಕೇಂದ್ರ ಏಷ್ಯಾ ಭಾಗದವನು ಎಂದು ಎಫ್‌ಎಸ್‌ಬಿ ಹೇಳಿದೆ. ಈ ಸಂಘಟನೆಯನ್ನು ಕೂಡಾ ರಷ್ಯಾ ನಿಷೇಧಿಸಿದ್ದು ಅದೇ ಕಾರಣಕ್ಕೆ ಉಗ್ರನನ್ನು ಬಂಧಿಸಿದೆ. ಬಂಧಿಸಿ ವಿಚಾರಣೆ ನಡೆಸಿದಾಗ ಆತನ ಕಾರಸ್ಥಾನದ ಅರಿವಾಗಿದೆ. ಆತ ಭಾರತದಲ್ಲಿ ಒಬ್ಬ ಜನಪ್ರತಿನಿಧಿಯ ಮೇಲೆ ಆತ್ಮಹತ್ಯಾ ದಾಳಿ ನಡೆಸಲು ಅವನು ಪ್ಲ್ಯಾನ್‌ ಮಾಡಿದ್ದ ಎಂದು ಸ್ಪಷ್ಟವಾಗಿ ತಿಳಿಸಿದೆ.

ಬಂಧಿತ ಉಗ್ರ ಇಸ್ಲಾಮಿಕ್‌ ಸ್ಟೇಟ್‌ನ ಮುಖ್ಯಸ್ಥನಿಗೆ ನಿಷ್ಠನಾಗಿರುವುದಾಗಿ ಹೇಳಿದ್ದಾನೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಪ್ರಸಕ್ತ ರಷ್ಯಾದಲ್ಲಿರುವ ಈ ವ್ಯಕ್ತಿಗೆ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಭಾರತಕ್ಕೆ ವಿಮಾನ ಮೂಲಕ ಪ್ರಯಾಣಿಸಲು ಸೂಚನೆ ನೀಡಲಾಗಿತ್ತು. ಅಲ್ಲಿ ಒಂದು ದೊಡ್ಡ ಕೃತ್ಯಕ್ಕೆ ಆತನನ್ನು ನಿಯೋಜಿಸಲಾಗಿತ್ತು ಎಂದು ಎಫ್‌ಎಸ್‌ಬಿ ಹೇಳಿದೆ.

ಇದನ್ನೂ ಓದಿ | Terror Alert | ಮುಂಬೈ ಮಾದರಿಯಲ್ಲಿ ಉಗ್ರ ದಾಳಿ ಶಂಕೆ; ಮಂಗಳೂರಲ್ಲಿ ಹೈ ಅಲರ್ಟ್‌!

Exit mobile version