Site icon Vistara News

Seema Haider Case: ಸೀಮಾಗೆ ಸಿನಿಮಾ ಆಫರ್, ಸಚಿನ್‌ಗೆ ಉದ್ಯೋಗದ ಭರವಸೆ!

Seema Haider and Sachin Meena

ನವದೆಹಲಿ: ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ (Pakistan) ಭಾರತಕ್ಕೆ (India) ಬಂದಿರುವ ಸೀಮಾ ಹೈದರ್ ‌ಕುರಿತು ದಿನಕ್ಕೊಂದು ಸುದ್ದಿಗಳು ಹೊರ ಬೀಳುತ್ತಿವೆ. ಭಾರತದ ಸಚಿನ್ ಮೀನಾ (Sachin Meena) ಹಾಗೂ ಸೀಮಾ ಹೈದರ್ (Seema Haider) ಇಬ್ಬರು ಪಬ್‌ಜಿ ಆನ್‌ಲೈನ್ ಗೇಮ್ ಆಡುವಾಗ ಪರಸ್ಪರ ಪರಿಚಯವಾಗಿದ್ದರು. ಬಳಿಕ ಅವರಿಬ್ಬರೂ ಒಬ್ಬರನ್ನೊಬ್ಬರನ್ನು ಪ್ರೀತಿಸಲು ಆರಂಭಿಸಿದರು. ಕೊನೆಗೆ, ಸೀಮಾ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದಾರೆ. ಸೀಮಾ ಇಲ್ಲಿಗೆ ಬಂದ ಮೇಲೆ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದಾರೆ. ಸಚಿನ್ ಹಾಗೂ ಸೀಮಾ ಅವರ ಈ ಪ್ರೇಮ್ ಕಹಾನಿಯು ಅವರ ನಸೀಬ್ ಕೂಡ ಬದಲಾಗುವಂತೆ ಮಾಡಿದೆ. ಸೀಮಾ ಮತ್ತು ಸಚಿನ್‌ಗೆ ಉದ್ಯೋಗ (Job offer) ಹಾಗೂ ಸಿನಿಮಾದ ಆಫರ್‌ಗಳು (Cinema Offer) ಬಂದಿವೆ. ಬಾಲಿವುಡ್ ನಿರ್ದೇಶಕರೊಬ್ಬರು ಸೀಮಾ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ(Seema Haider Case).

ಪಾಕಿಸ್ತಾನದಿಂದ ಸೀಮಾ ಹೈದರ್ ಅವರು ಭಾರತಕ್ಕೆ ಬಂದ ಬಳಿಕ ಸಚಿನ್ ಮೀನಾ ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬಿದ್ದಿದೆ. ಸೀಮಾ ಹೈದರ್ ಅವರ ಮಾವ ಈ ಕುರಿತು ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಈ ವಿಷಯ ಗೊತ್ತಾಗುತ್ತಿದ್ದಂತೆ ಸೀಮಾ ಹೈದರ್ ಹಾಗೂ ಆಕೆಯ ಬಾಯ್ ಫ್ರೆಂಡ್ ಸಚಿನ್‌ಗೆ ಗುಜರಾತ್‌ನಲ್ಲಿರುವ ಕಂಪನಿಯೊಂದು ಉದ್ಯೋಗದ ಆಫರ್ ನೀಡಿದೆ.

ಸಚಿನ್ ಅವರ ಮನೆ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್‌ನಲ್ಲಿ ಪತ್ರವೊಂದನ್ನು ಕಳುಹಿಸಲಾಗಿತ್ತು. ಸೀಮಾ ಹಾಗೂ ಸಚಿನ್ ಅವರಿಗೆ ವಾರ್ಷಿಕ 6 ಲಕ್ಷ ರೂ. ಪ್ಯಾಕೇಜ್ ಉದ್ಯೋಗ ನೀಡುವ ಭರವಸೆಯನ್ನು ಆ ಪತ್ರದಲ್ಲಿ ತಿಳಿಸಲಾಗಿತ್ತು. ಸಚಿನ್ ಮೀನಾ ಮತ್ತು ಸೀಮಾ ಹೈದರ್ ಅವರು ಯಾವಾಗ ಬೇಕಾದರೂ ಬಂದು ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ತಿಳಿಸಲಾಗಿದೆ.

ಗ್ರೇಟರ್ ನೋಯ್ಡಾದಲ್ಲಿರುವ ಸಚಿನ್ ಮನೆಗೆ ಸೋಮವಾರ ಈ ಪತ್ರ ಬಂದಿದೆ. ಪೊಲೀಸರ ಸಮ್ಮುಖದಲ್ಲಿ ಈ ಪತ್ರವನ್ನು ಓದಲಾಯಿತು. ಈ ಮೊದಲಿಗೆ ಇದು ಬೆದರಿಕೆಯ ಪತ್ರವಾಗಿರಬಹುದು ಎಂದು ಸಚಿನ್ ಮತ್ತು ಸೀಮಾ ಅವರು ಹೆದರಿಕೊಂಡಿದ್ದರು. ಆದರೆ, ಪೊಲೀಸ್ ಸಮ್ಮುಖದಲ್ಲಿ ಪತ್ರ ತೆರೆದು ಓದಿದಾಗ ಅದೊಂದು ಉದ್ಯೋಗ ಆಫರ್ ನೀಡುವ ಪತ್ರವಾಗಿತ್ತು.

ಈ ಸುದ್ದಿಯನ್ನೂ ಓದಿ: ಸೋದರ, ಚಿಕ್ಕಪ್ಪ ಇರುವುದು ಪಾಕ್ ಸೇನೆಯಲ್ಲಿ; ಸೀಮಾ ಹೈದರ್ ಬಂದಿದ್ದು ಪ್ರೀತಿಗಾಗೋ, ಗೂಢಚಾರಿಣಿಯೋ?

ಇಷ್ಟು ಮಾತ್ರವಲ್ಲದೇ, ಇನ್ನೂ ಅನೇಕರು ಉದ್ಯೋಗದ ಭರವಸೆಗಳನ್ನು ನೀಡಿದ್ದಾರೆ. ಭಾರತೀಯ ಕಿಸಾನ್ ಲೋಕ ಶಕ್ತಿಯ ರಾಷ್ಟ್ರೀಯ ಅಧ್ಯಕ್ಷ ಮಾಸ್ಟರ್ ಸ್ವರಾಜ್ ಸಿಂಗ್ ಅವರು ಅವರು ಸಚಿನ್ ಮೀನಾ ಅವರ ಮನೆಗೆ ಆಗಮಿಸಿ ಭರವಸೆಯನ್ನು ನೀಡಿದ್ದಾರೆ. ಈ ಮಧ್ಯೆ, ಸಿನಿಮಾದಲ್ಲಿ ಕೆಲಸ ಮಾಡಲು ಸೀಮಾ ಹೈದರ್ ಅವರಿಗೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಇಷ್ಟಾಗಿಯೂ ಸಚಿನ್-ಸೀಮಾ ಅವರಿಗೆ ದೊರೆಯುತ್ತಿರುವ ಆಫರ್‌ಗಳು ನೈಜವೋ ಅಥವಾ ಕಿಡಿಗೇಡಿಗಳ ದುಷ್ಕೃತ್ಯವೋ ಎಂಬುದನ್ನು ಪೊಲೀಸರು ಒರೆಗೆ ಹಚ್ಚಲು ನಿರ್ಧರಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version