Site icon Vistara News

Shingrix: 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸರ್ಪಸುತ್ತು ನಿವಾರಣೆಗೆ ಜಿಎಸ್‌ಕೆಯಿಂದ ಶಿಂಗ್ರಿಕ್ಸ್ ಲಸಿಕೆ ಬಿಡುಗಡೆ

Shingrix vaccine for Shingles

ಬೆಂಗಳೂರು, ಕರ್ನಾಟಕ: ಭಾರತದಲ್ಲಿ ಸರ್ಪಸುತ್ತು ತಡೆಗೆ ಗ್ಲಾಕ್ಸೋಸ್ಮಿತ್ ಕ್ಲೈನ್ ಫಾರ್ಮಾಸಿಟಿಕಲ್ಸ್ ಲಿಮಿಟೆಡ್ ಮಂಗಳವಾರ ಶಿಂಗ್ರಿಕ್ಸ್ (Shingrix) (Zoster Vaccine Recombinant, Adjuvanted) ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೊಂದು ವ್ಯಾಕ್ಸಿನ್ ಆಗಿದ್ದು, 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವಯಸ್ಕರಲ್ಲಿ ಹರ್ಪಿಟಿಕ್ ನಂತರದ ನರಶೂಲೆಗೂ ಬಳಸಬಹುದಾಗಿದೆ. ಶಿಂಗ್ರಿಕ್ಸ್ ಪ್ರಪಂಚದ ಮೊದಲ ನಾನ್-ಲೈವ್, ರೀಕಾಂಬಿನೆಂಟ್ ಸಬ್ ಯೂನಿಟ್ ಲಸಿಕೆಯಾಗಿದೆ. ಇದನ್ನು ಎರಡು ಡೋಸ್‌ಗಳ ರೂಪದಲ್ಲಿ ಇಂಟ್ರಾಮಸ್ಕುಲರ್ ಆಗಿ ನೀಡಲಾಗುತ್ತದೆ. ಚಿಕನ್ ಫಾಕ್ಸ್ ಗೆ ಕಾರಣವಾಗುವ ವೈರಸ್ ಆದ ವರಿಸೆಲ್ಲಾ ಜೋಸ್ಟರ್ ವೈರಸ್ (VZV)ನ ಪುನಃ ಸಕ್ರಿಯಗೊಳಿಸುವಿಕೆಯಿಂದ ಶಿಂಗಲ್ಸ್ ಉಂಟಾಗುತ್ತದೆ.

ಭಾರತದಲ್ಲಿ ಸೆರೋಪ್ರಿವಿಲೆನ್ಸ್ ಅಧ್ಯಯನದ ಪ್ರಕಾರ 40 ವರ್ಷದ ವೇಳೆಗೆ ಶೇ.90ಕ್ಕಿಂತ ಹೆಚ್ಚು ಜನರು ತಮ್ಮ ದೇಹದಲ್ಲಿ ಈ ವೈರಸ್ ಅನ್ನು ಹೊಂದಿರುತ್ತಾರೆ ಮತ್ತು ಸರ್ಪಸುತ್ತುಗಳಿಗೆ ಗುರಿಯಾಗುತ್ತಾರೆ. ಸರ್ಪಸುತ್ತು ನೋವಿನ ದದ್ದುಗಳಿಗೆ ಕಾರಣವಾಗುತ್ತದೆ. ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ದದ್ದು ನಿವಾರಣೆಯಾಗುತ್ತದೆಯಾದರೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ತಿಂಗಳು ಅಥವಾ ವರ್ಷಗಟ್ಟಲೇ ನೋವು ಇರುತ್ತದೆ. ಈ ನೋವನ್ನು ಪೋಸ್ಟ್ –ಹೆರ್ಪಿಟಿಕ್ ನ್ಯೂರಾಲ್ಜಿಯಾ(PHN) ಎಂದು ಕರೆಯಲಾಗುತ್ತದೆ.

ಗ್ಲಾಕ್ಸೋಸ್ಮಿತ್ ಕ್ಲೈನ್ ಫಾರ್ಮಾಸಿಟಕಲ್ಸ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಅಕ್ಷಿಕರ್ ಅವರು ಮಾತನಾಡಿ, “ಭಾರತದಲ್ಲಿನ 50 ವರ್ಷಕ್ಕಿಂತ ಮೇಲ್ಪಟ್ಟ 260 ಮಿಲಿಯನ್ ವಯಸ್ಕರನ್ನು ಸರ್ಪಸುತ್ತು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ರಕ್ಷಿಸಲು ಶಿಂಗ್ರಿಕ್ಸ್ ಅನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಜಿಎಸ್ ಕೆಗೆ ಸಂತೋಷವಾಗುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಚಿಕಿತ್ಸೆಯ ಆಯ್ಕೆಗಳು ಇಂತಹ ನೋವುಗಳಿಂದ ಸಂಪೂರ್ಣವಾದ ರೀತಿಯಲ್ಲಿ ಪರಿಹಾರವನ್ನು ನೀಡುವುದಿಲ್ಲ. ವ್ಯಾಕ್ಸಿನೇಷನ್ ಮಾತ್ರ ಪರಿಣಾಮಕಾರಿಯಾಗಿ ತಡೆಗಟ್ಟುವ ಒಂದು ಆಯ್ಕೆಯಾಗಿದೆ. ನಮ್ಮ ವಯಸ್ಕರ ವ್ಯಾಕ್ಸಿನೇಷನ್ ಪೋರ್ಟ್ ಫೋಲಿಯೋಗೆ ಶಿಂಗ್ರಿಕ್ಸ್ ಅನ್ನು ಸೇರ್ಪಡೆ ಮಾಡಲು ಮತ್ತು ಅದನ್ನು ದೇಶಾದ್ಯಂತ ಲಭ್ಯವಾಗುವಂತೆ ಮಾಡಲು ನಮಗೆ ಸಂತಸವಾಗುತ್ತಿದೆ’’ ಎಂದರು.

ಇದನ್ನೂ ಓದಿ: Nasal Vaccine | ಭಾರತದ ಹೆಮ್ಮೆಯ ನೇಸಲ್ ವ್ಯಾಕ್ಸಿನ್, ಪರಿಣಾಮ ಅದ್ಭುತ

50 ವರ್ಷಕ್ಕಿಂತ ಹೆಚ್ಚಿನ ವಯಸ್ಕರು ಮತ್ತು ಮಧುಮೇಹ, ಹೃದ್ರೋಗ ಹಾಗೂ ಮೂತ್ರಪಿಂಡದ ಕಾಯಿಲೆಗಳಂತಹ ದೀರ್ಘಾವಧಿ ಸಮಸ್ಯೆಗಳಿಂದ ಬಳಲುತ್ತಿರುವವರು ದುರ್ಬಲಗೊಂಡ ರೋಗನಿರೋಧಕ ಶಕ್ತಿಯಿಂದಾಗಿ ಸರ್ಪಸುತ್ತು ವೃದ್ಧಿಯಾಗುವ ಅಪಾಯವನ್ನು ಹೊಂದಿರುತ್ತಾರೆ. ಪೋಸ್ಟ್-ಹೆರ್ಪಿಟೆಕ್ ನರಶೂಲೆಯ ಬೆಳವಣಿಗೆಯ ಅಪಾಯವು ಶೇ.30 ರಷ್ಟು ಹೆಚ್ಚಾಗಿರುತ್ತದೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಲ್ಲಿ ನೋವು ಹೆಚ್ಚು ದುರ್ಬಲವಾಗಿರುತ್ತದೆ. ಈ ನೋವು ಮಾನಸಿಕ ಅಡೆತಡೆಗಳನ್ನು ಉಂಟು ಮಾಡುವುದಲ್ಲದೇ ಆರೈಕೆ ಮಾಡುವವರ ಮೇಲೆ ಅವಲಂಬನೆಯನ್ನೂ ಹೆಚ್ಚು ಮಾಡುತ್ತದೆ. ಸರ್ಪಸುತ್ತು ಸಮಸ್ಯೆ ವಯಸ್ಸಾದವರಲ್ಲಿ ದೃಷ್ಟಿ ನಷ್ಟ ಮತ್ತು ಶ್ರವಣ ದೋಷದಂತಹ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಶಿಂಗ್ರಿಕ್ಸ್ ಒಂದು ನಾನ್-ಲೈವ್ ಲಸಿಕೆಯಾಗಿರುವುದರಿಂದ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಇಮ್ಯುನೋಕಾಂಪ್ರಮೈಸ್ಡ್ ಮತ್ತು ಇಮ್ಯುನೋಸಪ್ರೆಸ್ಡ್ ಮತ್ತು ಸರ್ಪಸುತ್ತು ಕಾಯಿಲೆಯಿಂದ ಹೆಚ್ಚಾಗಿ ಬಳಲುತ್ತಿರುವವರಿಗೆ ಇದನ್ನು ನೀಡಬಹುದಾಗಿದೆ.

Exit mobile version