ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ವಿರುದ್ಧ, ಲಂಡನ್‌ನ ಒಂದು ದಂಪತಿಯ ಪರವಾಗಿ ಅಲ್ಲಿನ ಕೋರ್ಟ್ (UK court) ನೀಡಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka High court) ಅಮಾನ್ಯ ಮಾಡಿದೆ.
ಈ ದಂಪತಿಗೆ 30,000 ಪೌಂಡ್ (31.74 ಲಕ್ಷ ರೂ.) ಪರಿಹಾರವನ್ನು ksrtc ನೀಡಬೇಕು ಎಂದು ಲಂಡನ್‌ನ ಕೋರ್ಟ್ ಆದೇಶಿಸಿತ್ತು. ಈ ಪ್ರಕರಣದಲ್ಲಿ ಅಲ್ಲಿನ ಕೋರ್ಟ್ ವಾಸ್ತವ ಸಾಕ್ಷ್ಯಗಳನ್ನು ಪರಿಗಣಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣದ ವಿವರ ಹೀಗಿದೆ:
ಬ್ರಿಟಿಷ್ ದಂಪತಿ ನಿಜೆಲ್ ಮತ್ತು ಕರೋಲ್ ಹರಡಿನ್ 2002ರಲ್ಲಿ ಕರ್ನಾಟಕದಲ್ಲಿ ಒಂದು ಅಪಘಾತಕ್ಕೆ ಒಳಗಾಗಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರು, ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿತ್ತು. ಅವರು ಪ್ರಯಾಣಿಸುತ್ತಿದ್ದ ಕಾರು ಬ್ರಿಟನ್ ಮೂಲಕ ಟ್ರಾವೆಲ್ ಕಂಪನಿಯದಾಗಿತ್ತು. ದಂಪತಿ ಬ್ರಿಟನ್‌ನ ಕೋರ್ಟ್‌ಗೆ ಹೋಗಿದ್ದರು. ಅದು ನೀಡಿದ ತೀರ್ಪನ್ನು ಕೆಎಸ್‌ಆರ್‌ಟಿಸಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಈ ಹಿಂದಿನ ವುಲನ್ ಮಿಲ್ಸ್ ವರ್ಸಸ್ ಸ್ಟ್ಯಾಂಡರ್ಡ್ ವೂಲ್ ನಡುವಿನ ಅಂತಾರಾಷ್ಟ್ರೀಯ ವ್ಯಾಜ್ಯ ಪ್ರಕರಣವನ್ನು ಪೂರ್ವನಿದರ್ಶನವಾಗಿ ಉಲ್ಲೇಖಿಸಿದ ಹೈಕೋರ್ಟ್, ʼʼಯಾವುದೇ ವಿದೇಶಿ ತೀರ್ಪು ಭಾರತದಲ್ಲಿ ಅನ್ವಯಿಸಬೇಕಿದ್ದರೆ ಇಲ್ಲಿನ ಸಾಕ್ಷ್ಯಗಳನ್ನು ಪರಿಗಣಿಸಬೇಕು. ವಾದಿಗಳ ಪರವಾಗಿ ಬರುವ ತೀರ್ಪಿಗೆ ವಾದಿಗಳ ಪರವಾದ ಸಾಕ್ಷ್ಯ ಅಥವಾ ಸಾಕ್ಷ್ಯವನ್ನು ಪರಿಗಣಿಸಿದ ಸುಳಿವಾದರೂ ಇರಬೇಕುʼʼ ಎಂದು ಹೇಳಿದೆ.
“ಇದು (ಬ್ರಿಟನ್‌ನ ಕೋರ್ಟ್ ತೀರ್ಪು) ಯಾವುದೇ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ದಾಖಲೆ ಕಾಣಿಸುವುದಿಲ್ಲʼʼ ಎಂದು ಹೈಕೋರ್ಟ್ ಹೇಳಿದ್ದು, ಇದರಿಂದಾಗಿ ಆ ತೀರ್ಪನ್ನು ಇಲ್ಲಿ ಅನ್ವಯಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: KSRTC Recruitment : 4000 ಹೊಸ ಬಸ್ ಖರೀದಿ, 13000 ಚಾಲಕರು, ಕಂಡಕ್ಟರ್‌ಗಳ ನೇಮಕಕ್ಕೆ ನಿರ್ಧಾರ