Site icon Vistara News

Union Budget 2024: ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ನ್ಯೂಸ್‌! ಮೊಬೈಲ್‌ ಫೋನ್‌, ಚಾರ್ಜರ್‌ ಬೆಲೆ ಅಗ್ಗ

Union Budget 2024

ಹೊಸದಿಲ್ಲಿ: ಈ ಬಾರಿಯ ಕೇಂದ್ರ ಬಜೆಟ್‌(Union Budget 2024)ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗುಡ್​ ನ್ಯೂಸ್ ನೀಡಲಾಗಿದೆ. ಮೊಬೈಲ್ ಫೋನ್‌(Mobile Phones)ಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಅಲ್ಲದೇ ಮೊಬೈಲ್, ಚಾರ್ಜರ್​ ಬೆಲೆ ಮತ್ತಷ್ಟು ಅಗ್ಗ ಆಗಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌(Nirmala Seetharaman) ತಮ್ಮ ಬಜೆಟ್‌ ಭಾಷಣ(Budget Speech)ದಲ್ಲಿ ಹೇಳಿದ್ದಾರೆ. ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15ಕ್ಕೆ ಇಳಿಸಲಾಗುವುದು. ಸರ್ಕಾರದ ಈ ಕ್ರಮದಿಂದಾಗಿ ಮೊಬೈಲ್ ಫೋನ್ ಮತ್ತು ಮೊಬೈಲ್ ಚಾರ್ಜರ್‌ಗಳ ಬೆಲೆ ಕಡಿಮೆಯಾಗಲಿದೆ ಎಂದು ಘೋಷಿಸಿದ್ದಾರೆ.

ಮುಂದಿನ ದಿನಗಳಲ್ಲಿ ಟೆಕ್ ಮಾಡುಕಟ್ಟೆಯಲ್ಲಿ ಕೆಲವು ಅಭಿವೃದ್ಧಿ ಕಾಣಲಿದ್ದು, ಮೊಬೈಲ್​, ಚಾರ್ಜರ್ ಬೆಲೆ ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಕೇಂದ್ರದ ಈ ಬಾರಿಯ ಬಜೆಟ್​ನಲ್ಲಿ ಮೊಬೈಲ್‌ ಫೋನ್‌ ಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗುವುದು. ಮೊಬೈಲ್‌ ಫೋನ್, ಮೊಬೈಲ್‌ ಚಾರ್ಜರ್​ ಬೆಲೆ ಇಳಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದರು.

ಇನ್ನು ಮೊಬೈಲ್, ಚಾರ್ಜರ್ ಬೆಲೆ ಇಳಿಕೆ ಮಾಡುತ್ತಿದ್ದಂತೆ, 6 ವರ್ಷಗಳಲ್ಲಿ ಮೊಬೈಲ್​ ಉತ್ಪಾದನೆ 3 ಪಟ್ಟು ಅಧಿಕವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಅಷ್ಟೇ ಅಲ್ಲದೇ ಮೊಬೈಲ್ ಬಿಡಿ ಭಾಗಗಳ ತೆರಿಗೆ ಕಡಿತ ಮಾಡಲಾಗುವುದು ಎಂದು ತಿಳಿಸಿದರು. ಜೊತೆಗೆ ಸೋಲಾರ್ ಸೆಲ್, ಸೋಲಾರ್ ಪ್ಯಾನೆಲ್‌ಗಳ ಬೆಲೆಯೂ ಇಳಿಕೆಯಾಗಲಿದೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಮೊಬೈಲ್ ಉದ್ಯಮವು ಪ್ರಬುದ್ಧವಾಗಿದೆ ಎಂದು ಹೇಳಿದರು. ಮೊಬೈಲ್ ಫೋನ್, PCBA ಮತ್ತು ಚಾರ್ಜರ್‌ನಲ್ಲಿ 15%ಕ್ಕೆ BCD ಕಡಿತವು ಭಾರತೀಯ ಮೊಬೈಲ್ ಫೋನ್ ಉತ್ಪಾದನಾ ಪರಿಸರ ವ್ಯವಸ್ಥೆಯ ದೇಶೀಯ ಉತ್ಪಾದನಾ ಸಾಮರ್ಥ್ಯದಲ್ಲಿ ವಿಶ್ವಾಸವನ್ನು ಹೊರಹಾಕುತ್ತದೆ. ಇದು M-SIPS, SPECS ಮತ್ತು PLI ಯೋಜನೆಗಳು BCD ಯಂತಹ ಪ್ರಮುಖ ಭಾಗಗಳಲ್ಲಿ ಅನೇಕ ಹಣಕಾಸಿನ ಮಧ್ಯಸ್ಥಿಕೆಗಳ ಮೂಲಕ ಲಾಭ ಪಡೆದಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹೇಗಿದೆ?

ಗುರುವಾರ ಬಿಡುಗಡೆಯಾದ ವರದಿಯ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ (Q2) ಸಾಧಾರಣ 1 ಶೇಕಡಾ ಬೆಳವಣಿಗೆಯನ್ನು ಕಂಡಿತು, ಒಟ್ಟು 36.4 ಮಿಲಿಯನ್ ಯುನಿಟ್‌ಗಳನ್ನು ರವಾನಿಸಲಾಗಿದೆ. Xiaomi ಆರು ತ್ರೈಮಾಸಿಕಗಳ ನಂತರ ಅಗ್ರ ಸ್ಥಾನವನ್ನು ಪಡೆದುಕೊಂಡಿತು, 6.7 ಮಿಲಿಯನ್ ಯುನಿಟ್‌ಗಳ ಮಾರಾಟದೊಂದಿಗೆ ಮಾರುಕಟ್ಟೆ ಶೇ.18ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.

ಇನ್ನು ವಿವೋ ಮತ್ತು ಓಪ್ಪೋ ಮಾರಾಟ ಪ್ರಮಾಣ ನೋಡುವುದಾದರೆ Xiaomi ಮೊಬೈಲ್‌ ಫೋನ್‌ ನಂತರ ಅಗ್ರ ಸ್ಥಾನಗಳನ್ನು ಪಡೆದುಕೊಂಡಿವೆ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕ್ಯಾನಲಿಸ್ ಪ್ರಕಾರ, ಕೈಗೆಟುಕುವ ದರದಲ್ಲಿ 5G ಮೊಬೈಲ್‌ಗಳನ್ನು ಗ್ರಾಹಕರಿಗೆ ನೀಡುತ್ತಿರುವ ವೀವೋ 6.7 ಮಿಲಿಯನ್ ಯುನಿಟ್‌ಗಳ ಮಾರಾಟಟವಾಗಿದೆ. ಸ್ಯಾಮ್‌ಸಂಗ್ 6.1 ಮಿಲಿಯನ್ ಯುನಿಟ್‌ಗಳನ್ನು ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ. Realme ಮತ್ತು OPPO (OnePlus ಹೊರತುಪಡಿಸಿ) ಕ್ರಮವಾಗಿ 4.3 ಮಿಲಿಯನ್ ಮತ್ತು 4.2 ಮಿಲಿಯನ್ ಯೂನಿಟ್‌ಗಳ ಮಾರಾಟದೊಂದಿಗೆ ಐದನೇ ಸ್ಥಾನ ಗಿಟ್ಟಿಸಿಕೊಂಡಿವೆ

ಇದನ್ನೂ ಓದಿ:Union Budget 2024: 7 ಬಜೆಟ್‍ಗಳಲ್ಲಿ 7 ಬಣ್ಣದ ಸೀರೆ ಧರಿಸಿ ಮಿಂಚಿದ ನಿರ್ಮಲಾ ಸೀತಾರಾಮನ್!

Exit mobile version