Site icon Vistara News

ಕಸದ ಗಾಡಿಯಲ್ಲಿ ಮೋದಿ, ಯೋಗಿ ಫೋಟೊ ಸಾಗಿಸಿದ ಪೌರ ಕಾರ್ಮಿಕ ವಜಾ!

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಪೌರ ಕಾರ್ಮಿಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೊಗಳನ್ನು ಕಸದ ಗಾಡಿಯಲ್ಲಿಟ್ಟುಕೊಂಡು ತಳ್ಳುತ್ತಿರುವ ದೃಶ್ಯ ಭಾರಿ ಸುದ್ದಿ ಮಾಡಿದೆ. ಈ ಕುರಿತಾದ ವಿಡಿಯೊ ವೈರಲ್ ಆದ ಬಳಿಕ, ಪೌರ ಕಾರ್ಮಿಕನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಪ್ರಧಾನಿ ಮೋದಿ, ಸಿಎಂ ಯೋಗಿ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳನ್ನು ವ್ಯಕ್ತಿಯೊಬ್ಬ ಕಸದ ಗಾಡಿಯಲ್ಲಿ ಇಟ್ಟು ತಳ್ಳುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್‌ ಮಾಡಲಾಗಿತ್ತು.

ವ್ಯಕ್ತಿಗಳಿಬ್ಬರು ಬಂದು ಕಸದ ಗಾಡಿಯಿಂದ ಫೋಟೊಗಳನ್ನು ಹೊರತೆಗೆದಿದ್ದಾರೆ. ಇವರು ಯಾರು ಗೊತ್ತಾ ಎಂದು ಪೌರ ಕಾರ್ಮಿಕನನ್ನು ಪ್ರಶ್ನೆ ಮಾಡಿದ್ದಾರೆ. “”ಕೆಲವು ಫೋಟೊಗಳು ಸಿಕ್ಕವು. ಅವುಗಳನ್ನು ನಾನು ಈ ಗಾಡಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದೇನೆʼʼ ಎಂದು ಪೌರ ಕಾರ್ಮಿಕ ಉತ್ತರಿಸಿದ್ದಾನೆ. ಬಳಿಕ ವಿಡಿಯೊ ಮಾಡಿದ ವ್ಯಕ್ತಿಗಳೇ ಕಸದ ಗಾಡಿಯಲ್ಲಿದ್ದ ಫೋಟೊಗಳನ್ನು ಹೊರತೆಗೆದು ಹತ್ತಿರದ ಟ್ಯಾಪ್ ಬಳಸಿ ತೊಳೆದಿದ್ದಾರೆ.

ಕಸದ ಗಾಡಿಯಲ್ಲಿ ಈ ರೀತಿ ಗೌರವಾನ್ವಿತ ಪ್ರಧಾನಿ ಮತ್ತು ಸಿಎಂ ಫೋಟೊಗಳನ್ನು ಸಾಗಿಸಿದ ಆರೋಪದಲ್ಲಿ ಗುತ್ತಿಗೆ ಸ್ವೀಪರ್‌ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಮಥುರಾ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸತ್ಯೇಂದ್ರ ತಿವಾರಿ ತಿಳಿಸಿದ್ದಾರೆ.‌

ಇದನ್ನೂ ಓದಿ| Viral Post | ಬೇ** ಅಧಿಕಾರಿಗಳಾ ಬೇಗ ರಸ್ತೆ ಸರಿ ಮಾಡ್ರೋ: ಮಲ್ಲೇಶ್ವರದ ಜನಾಕ್ರೋಶದ ಪೋಸ್ಟರ್‌ ವೈರಲ್‌

Exit mobile version