Site icon Vistara News

ಜಗತ್ತಿನ ಶಕ್ತಿಶಾಲಿ ಸೇನೆ; ನಂ.1 ಸ್ಥಾನದಲ್ಲಿ ಅಮೆರಿಕ! ಭಾರತ, ಪಾಕಿಸ್ತಾನಕ್ಕೆ ಯಾವ ರ‍್ಯಾಂಕ್?

US Military is most powerful in the world and Check details

ನವದೆಹಲಿ: ಜಗತ್ತಿನ ಶಕ್ತಿಶಾಲಿ ಸೇನೆ ಯಾರದ್ದು(Most Powerful Military) ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ ಗ್ಲೋಬಲ್ ಫೈರ್ ಪವರ್ (Global Firepower) ಬಿಡುಗಡೆ ಮಾಡಿರುವ 2024ರ ಸಾಲಿನ ಪಟ್ಟಿಯ ಪ್ರಕಾರ, ಅಮೆರಿಕ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಯನ್ನು ಹೊಂದಿದೆ(US Military). ನಂತರ ಸ್ಥಾನದಲ್ಲಿ ರಷ್ಯಾ (Russia) ಹಾಗೂ ಚೀನಾ (China) ರಾಷ್ಟ್ರಗಳ ಸೇನೆಗಳಿವೆ. ಭಾರತೀಯ ಸೇನೆಯು (Indian Miliary) ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ನೆರೆ ಹಾಗೂ ಶತ್ರು ರಾಷ್ಟ್ರ ಪಾಕಿಸ್ತಾನ (Pakistan Military) 9ನೇ ಸ್ಥಾನದಲ್ಲಿದೆ. ಎಲ್ಲ ರಾಷ್ಟ್ರಗಳ ಸೇನಾ ಸಾಮರ್ಥ್ಯಗಳ ಮೇಲೆ ನಿಗಾ ಇಡುವ ಗ್ಲೋಬಲ್ ಫೈರ್‌ಪವರ್ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

145 ದೇಶಗಳ ಸೇನಾ ಬಲವನ್ನು ವಿಮರ್ಶಿಸಿ, 2024ರ ಗ್ಲೋಬಲ್ ಫೈರ್‌ಪವರ್‌ನ ಸೇನಾ ಸಾಮರ್ಥ್ಯದ ಶ್ರೇಯಾಂಕವನ್ನು ಸಿದ್ಧಪಡಿಸಲಾಗಿದೆ. ಸೈನ್ಯದ ಸಂಖ್ಯೆ, ಮಿಲಿಟರಿ ಉಪಕರಣಗಳು, ಆರ್ಥಿಕ ಸ್ಥಿರತೆ, ಭೌಗೋಳಿಕ ಸ್ಥಳ ಮತ್ತು ಲಭ್ಯವಿರುವ ಸಂಪನ್ಮೂಲಗಳಂತಹ 60 ಕ್ಕೂ ಹೆಚ್ಚು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಅಂಶಗಳು ಒಟ್ಟಾಗಿ ಪವರ್‌ಇಂಡೆಕ್ಸ್ ಸ್ಕೋರ್ ಅನ್ನು ನಿರ್ಧರಿಸುತ್ತವೆ.

“ನಮ್ಮ ವಿಶಿಷ್ಟವಾದ, ಆಂತರಿಕ ಸೂತ್ರವು, ಚಿಕ್ಕದಾದ ಮತ್ತು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳನ್ನು ದೊಡ್ಡ, ಕಡಿಮೆ-ಅಭಿವೃದ್ಧಿ ಹೊಂದಿದ ಶಕ್ತಿಗಳೊಂದಿಗೆ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ, ಬೋನಸ್ ಮತ್ತು ಪೆನಾಲ್ಟಿಗಳ ರೂಪದಲ್ಲಿ ವಿಶೇಷ ಮಾರ್ಪಾಡುಗಳೊಂದಿಗೆ ಪಟ್ಟಿಯನ್ನು ರೂಪಿಸಲಾಗುತ್ತದೆ ಎಂದು ಗ್ಲೋಬಲ್ ಫೈರ್‌ಪವರ್ ಹೇಳಿದೆ.

ಶಕ್ತಿ ಶಾಲಿ ಟಾಪ್ 10 ರಾಷ್ಟ್ರಗಳು ಯಾವವು?
1.ಅಮೆರಿಕ 2.ರಷ್ಯಾ 3.ಚೀನಾ 4.ಭಾರತ 5.ದಕ್ಷಿಣ ಕೊರಿಯಾ 6.ಬ್ರಿಟನ್ 7.ಜಪಾನ್ 8.ಟರ್ಕಿ 9.ಪಾಕಿಸ್ತಾನ 10 ಇಟಲಿ.

ಅತಿ ದುರ್ಬಲ ಸೇನೆಯನ್ನು ಹೊಂದಿದ ರಾಷ್ಟ್ರಗಳು

ಗ್ಲೋಬಲ್ ಫೈರ್ ಪವರ್, ಜಗತ್ತಿನ ಶಕ್ತಿಶಾಲಿ ಸೇನೆಗಳನ್ನು ಪಟ್ಟಿ ಮಾಡಿದ ರೀತಿಯಲ್ಲಿ ಅತಿ ದುರ್ಬಲ ಸೇನೆಗಳನ್ನು ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ನಮ್ಮ ನೆರೆಯ ಭೂತಾನ್ ದೇಶವು ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮೊಲ್ಡೊವಾ ಹಾಗೂ ಸೂರಿನಾಮ್ ರಾಷ್ಟ್ರಗಳಿವೆ. ಸೇನಾ ಸಾಮರ್ಥ್ಯವನ್ನು ಅಳೆಯುವುದು ಅತ್ಯಂತ ಸಂಕೀರ್ಣ ಮತ್ತು ಬಹುಮುಖಿ ಸಂಗತಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಜಗತ್ತಿನ ಟಾಪ್ 10 ದುರ್ಬಲ ಸೇನೆಗಳು
1.ಭೂತಾನ್ 2. ಮೊಲ್ಡೊವಾ 3.ಸುರಿನಾಮ್ 4.ಸೊಮಾಲಿಯಾ 5.ಬೆನಿನ್ 6.ಲೈಬೀರಿಯಾ 7.ಬೆಲೀಜ್ 8.ಸಿಯೆರಾ ಲಿಯೋನ್ 9.ಮಧ್ಯ ಆಫ್ರಿಕಾ ಗಣರಾಜ್ಯ 10. ಐಸ್‌ಲ್ಯಾಂಡ್.

ಈ ಸುದ್ದಿಯನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 15 ಪಿಎಎಫ್​ಎಫ್​ ಉಗ್ರರನ್ನು ಕೊಂದ ಭಾರತೀಯ ಸೇನೆ

Exit mobile version