Site icon Vistara News

US President Biden : ಪ್ರಧಾನಿ ಮೋದಿಗೆ ಜೂನ್‌ 22ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಔತಣಕೂಟ

US President Biden and modi

ನವ ದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಶ್ವೇತಭವನದಲ್ಲಿ 2023ರ ಜೂನ್‌ 23ರಂದು ಔತಣಕೂಟವನ್ನು ಆಯೋಜಿಸಿದ್ದಾರೆ. (US President Biden) ಉಭಯ ದೇಶಗಳ ನಡುವಣ ಉನ್ನತ ಮಟ್ಟದ ರಾಜತಾಂತ್ರಿಕ ಭೇಟಿ ಇದಾಗಲಿದೆ. ಜತೆಗೆ ಪ್ರಧಾನಿಯಾಗಿ ಮೋದಿಯವರ ಮೊದಲ ಅಧಿಕೃತ ಅಮೆರಿಕ ಭೇಟಿಯಾಗಿರಲಿದೆ. (official state visit)

ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅಮೆರಿಕಕ್ಕೆ ಐದಾರು ಬಾರಿ ಭೇಟಿ ನೀಡಿದ್ದಾರೆ. ಆದರೆ ಅವುಗಳು ಕಾರ್ಯನಿಮಿತ್ತ ನಡೆಸಿದ ಔಪಚಾರಿಕ ಭೇಟಿಯಾಗಿತ್ತು. (formal visits) ಆದರೆ state visit ಎಂದರೆ ಅದು ಎಲ್ಲಕ್ಕಿಂತ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಭೇಟಿಯಾಗಿದೆ. ಉಭಯ ದೇಶಗಳ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಈ ಹಿಂದೆ 2009ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಡಾ. ಮನಮೋಹನ್‌ ಸಿಂಗ್‌ ಅವರಿಗೆ ಶ್ವೇತಭವನದಲ್ಲಿ ಔತಣಕೂಟ ಆಯೋಜಿಸಿದ್ದರು. ಅದು ಭಾರತೀಯ ಪ್ರಧಾನಿಯ ಅಧಿಕೃತ ಪ್ರವಾಸ ಆಗಿತ್ತು. ಬೈಡೆನ್‌ ಅವರು 2022ರ ಡಿಸೆಂಬರ್‌ನಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್ ಅವರಿಗೆ ಔತಣಕೂಟ ಏರ್ಪಡಿಸಿದ್ದರು. ಅದು state visit ಆಗಿತ್ತು.

ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳುವುದರಿಂದ ಉಭಯ ದೇಶಗಳ ಬಾಂಧವ್ಯ ಮತ್ತಷ್ಟು ಆಪ್ತವಾಗುವ ನಿರೀಕ್ಷೆ ಇದೆ. ಇಂಡೋ-ಪೆಸಿಫಿಕ್‌ ವಲಯದಲ್ಲಿ ಭದ್ರತೆಗೆ ಪುಷ್ಟಿ ಸಿಗುವ ಸಾಧ್ಯತೆ ಇದೆ. ತಂತ್ರಜ್ಞಾನ ಪಾಲುದಾರಿಕೆ ವೃದ್ಧಿಸುವ ಸಾಧ್ಯತೆ ಇದೆ. ಬೈಡೆನ್‌ ಅವರು ಶೈಕ್ಷಣಿಕ ಕಾರ್ಯಕ್ರಮಗಳು, ವ್ಯೂಹಾತ್ಮಕ ಪಾಲುದಾರಿಕೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: Biden to visit India : ಭಾರತಕ್ಕೆ ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಪ್ರವಾಸ

Exit mobile version