Site icon Vistara News

US Sanctions: ಅಮೆರಿಕದಿಂದ ಭಾರತದ ವಜ್ರ ವ್ಯಾಪಾರಿಗಳ ₹215 ಕೋಟಿ ಫ್ರೀಜ್!‌ ಕಾರಣವೇನು?

diamond

ವಾಷಿಂಗ್ಟನ್:‌ ರಷ್ಯಾದ ಜೊತೆಗೆ ಲಿಂಕ್‌ (link with Russia) ಹೊಂದಿವೆ ಎಂಬ ಕಾರಣಕ್ಕಾಗಿ ಭಾರತೀಯ ವಜ್ರ (Indian diamond) ಸಂಸ್ಥೆಗಳಿಗೆ ಪಾವತಿಸಬೇಕಾದ $26 ದಶಲಕ್ಷ (215 ಕೋಟಿ ರೂ.) ನಗದನ್ನು ಅಮೆರಿಕದ ಜೋ ಬೈಡೆನ್ (US President Joe Biden) ಆಡಳಿತ ಫ್ರೀಜ್ (US Sanctions) ಮಾಡಿದೆ.

ಫ್ರೀಜ್ ಮಾಡಿರುವ ಕನಿಷ್ಠ ಎರಡು ಭಾರತೀಯ ವಜ್ರ ಸಂಸ್ಥೆಗಳಿಗೆ ಸೇರಿದ $26 ಮಿಲಿಯನ್ ಡಾಲರ್‌ ಬಿಡುಗಡೆ ಮಾಡುವಂತೆ ಭಾರತವು ಯುನೈಟೆಡ್ ಸ್ಟೇಟ್ಸ್ ಅನ್ನು ಕೇಳಿದೆ. ರಷ್ಯಾದ ವಜ್ರ ವ್ಯಾಪಾರ ಸಂಸ್ಥೆ ಅಲ್ರೋಸಾ ಜೊತೆಗಿನ ಹೊಂದಿರುವ ವ್ಯಾಪಾರ ಸಂಬಂಧದಿಂದಾಗಿ ಈ ನಿಷೇಧ (US Sanctions) ವಿಧಿಸಲಾಗಿದೆ. ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಈ ನಿರ್ಬಂಧಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಅದು ಈ ವರ್ಷದ ಆರಂಭದಲ್ಲಿ ಹಣಪಾವತಿ ಸ್ಥಗಿತಗೊಳಿಸಿದೆ. ಕಳೆದ ವರ್ಷ ಉಕ್ರೇನ್‌ನ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ನಂತರ, ರಷ್ಯಾದ ಘಟಕಗಳ ಮೇಲೆ ಅನೇಕ ಪಾಶ್ಚಿಮಾತ್ಯ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದರೆ ಭಾರತೀಯ ವ್ಯವಹಾರದ ವಿರುದ್ಧ ನಡೆದಿರುವ ಮೊದಲ ದಂಡನಾತ್ಮಕ ಕ್ರಮ ಇದಾಗಿದೆ.

ಈ ದಂಡನೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ಭಾರತೀಯ ವಜ್ರ ವ್ಯಾಪಾರಿ ಸಂಸ್ಥೆಗಳು ಅನುಭವಿಸಿವೆ. ರಷ್ಯಾದ ಗಣಿಗಾರರು ಮತ್ತು ಘಟಕಗಳೊಂದಿಗಿನ ಸಂಪರ್ಕಗಳ ಹಿನ್ನೆಲೆಯಲ್ಲಿ ಇವರ ಪಾವತಿಗಳು ಸ್ಥಗಿತಗೊಂಡಿವೆ. ಪರಿಣಾಮವಾಗಿ, ಕಚ್ಚಾ ವಜ್ರ ಮಾರಾಟಗಾರರಿಗೆ ಉದ್ದೇಶಿತ ಪಾವತಿಗಳನ್ನು ಕೊಡಲು ಸಾಧ್ಯವಾಗಿಲ್ಲ. ಪೂರೈಕೆದಾರರ ನಾಸ್ಟ್ರೋ ಖಾತೆಗಳನ್ನು ನಿರ್ವಹಿಸುವ ಬ್ಯಾಂಕ್‌ಗಳಿಗೆ US ಅಧಿಕಾರಿಗಳು ನೀಡಿರುವ ಸೂಚನೆಯಂತೆ ತಡೆಹಿಡಿಯಲಾಗಿದೆ.

ವಜ್ರದ ವ್ಯಾಪಾರಿ ಸಮುದಾಯವು ತನ್ನ ನಿಕಟ ಸಂಪರ್ಕ ಜಾಲಕ್ಕೆ ಹೆಸರುವಾಸಿ. ಈಗ ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಫ್ರೀಝ್‌ನಿಂದ ಉಂಟಾದ ಹಾನಿಯನ್ನು ತಗ್ಗಿಸಲು ತನ್ನ ಪ್ರಭಾವ ಬಳಸುತ್ತಿದೆ. ರತ್ನ ಮತ್ತು ಆಭರಣ ರಫ್ತು ಉತ್ತೇಜನಾ ಮಂಡಳಿಯ (ಜಿಜೆಇಪಿಸಿ) ಅಧ್ಯಕ್ಷರಾದ ವಿಪುಲ್‌ಭಾಯ್ ಶಾ ಅವರು ವಾಣಿಜ್ಯ ಸಚಿವಾಲಯ ಮತ್ತು ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಈ ವಿಷಯವನ್ನು ಎತ್ತಿದ್ದಾರೆ. ವಜ್ರ ರಫ್ತಿನಿಂದ ರಷ್ಯಾ ಗಮನಾರ್ಹ ಆದಾಯವನ್ನು ಗಳಿಸುತ್ತದೆ. ಜಗತ್ತಿನಾದ್ಯಂತ ವಜ್ರ ವ್ಯಾಪಾರಿಗಳು ರಷ್ಯಾದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.

ಇದನ್ನೂ ಓದಿ: Kohinoor Diamond | ಕೊಹಿನೂರ್​ ವಜ್ರ ವಾಪಸ್​ ತರಲು ಕೇಂದ್ರ ಸರ್ಕಾರದಿಂದ ನಿರಂತರ ಪ್ರಯತ್ನ

Exit mobile version