Site icon Vistara News

Viral News: ದರೋಡೆ, ಪಿಕ್‌ಪಾಕೆಟಿಂಗ್‌, ಕಳ್ಳತನವೇ ಸಬ್ಜೆಕ್ಟ್‌.. ಕ್ರಿಮಿನಲ್‌ಗಳಿಗಾಗಿಯೇ ಇಲ್ಲಿವೆ ಶಾಲೆಗಳು; ಫೀಸ್‌ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

Viral News

ಭೋಪಾಲ್‌: ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂದು ತಂದೆ ತಾಯಿಗಳು ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಇರೋದ್ರಲ್ಲೇ ಅತ್ಯುತ್ತಮ ಶಾಲೆ ಹುಡುಕಿ ಅಲ್ಲಿಗೆ ಸೇರಿಸ್ತಾರೆ(Viral News). ಮಕ್ಕಳು ಎಲ್ಲಿ ಅಡ್ಡ ದಾರಿ ಹಿಡಿತಾರೋ ಎಂಬ ಆತಂಕದಲ್ಲೇ ಅದೆಷ್ಟೇ ಖರ್ಚಾದ್ರೂ ನಮ್ಮ ಮಕ್ಕಳು ಅತ್ಯುತ್ತಮ ಶಾಲಾ ಕಾಲೇಜು(School)ಗಳಲ್ಲೇ ಓದಬೇಕೆನ್ನುವುದು ಎಲ್ಲಾ ಪೋಷಕರ ಕನಸು. ಆದರೆ ಇಲ್ಲೊಂದು ಕಡೆ ಮಕ್ಕಳಿಗೆ ಕಳ್ಳತನ, ಸುಲಿಗೆ, ರಾಬರಿ ಹೀಗೆ ಅಪರಾಧಗಳನ್ನೇ ಕಲಿಸಲೆಂದು ಶಾಲೆಗಳಿವೆ(Schools for Robbery). ಹೌದು ಇದನ್ನು ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ. ಸುಲಭಕ್ಕೆ ನಂಬಲು ಸಾಧ್ಯವಾಗದಿದ್ದರೂ ಇಂತಹ ಶಾಲೆಗಳು ಇರುವುದು ನಿಜ. ಈ ಶಾಲೆಗಳು ಇರುವುದು ಮಧ್ಯಪ್ರದೇಶದ ಮೂರು ಕುಗ್ರಾಮಗಳಲ್ಲಿ. ಇಲ್ಲಿ ಕ್ರಿಮಿನಲ್‌ಗಳೇ ಕ್ರಿಮಿನಲ್‌ಗಳಿಗಾಗಿ ನಡೆಸುತ್ತಿರುವ ಶಾಲೆಗಳಿವೆ. ಇನ್ನು ಈ ಶಾಲೆಯ ಫೀಸ್‌ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಸುಮಾರು 117 ಕಿ.ಮೀ ದೂರದಲ್ಲಿರುವ ಕಾದಿಯಾ, ಗುಲ್ಖೇದಿ ಮತ್ತು ಹುಲ್ಖೇದಿ ಎಂಬ ಗ್ರಾಮಗಳಲ್ಲಿ ಕಳ್ಳತನ, ರಾಬರಿ ಮತ್ತು ಡಕಾಯಿತಿ ತರಬೇತಿ ನೀಡಲಾಗುತ್ತಿದೆ. ಪೊಲೀಸರಿಗೆ ಈ ಬಗ್ಗೆ ಸಂಪೂರ್ಣವಾಗಿ ಅರಿವಿದ್ದರೂ, ನಿರ್ಭೀತಿಯಿಂದ ಈ ಶಾಲೆಗಳು ಖುಲ್ಲಾಂ ಖುಲ್ಲಾ ನಡೆಯುತ್ತಿದೆ. ಪೋಷಕರು ದೂರದೂರುಗಳಿಂದ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ.

ಯಾವ ರೀತಿಯ ತರಬೇತಿ?

12 ಅಥವಾ 13 ವರ್ಷ ವಯಸ್ಸಿನ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಅವರ ಪೋಷಕರು ಈ ಗ್ರಾಮಗಳಿಗೆ ಕಳುಹಿಸುತ್ತಾರೆ. ಪೋಷಕರು, ಗ್ಯಾಂಗ್ ನಾಯಕರನ್ನು ಭೇಟಿಯಾದ ನಂತರ, ತಮ್ಮ ಮಗುವಿಗೆ ಯಾರು ಅತ್ಯುತ್ತಮ “ಶಿಕ್ಷಣ” ನೀಡಬಹುದು ಎಂದು ನಿರ್ಧರಿಸುತ್ತಾರೆ. ಈ ಕಠೋರ ಪಠ್ಯಕ್ರಮದಲ್ಲಿ ದಾಖಲಾಗಲು, ಕುಟುಂಬಗಳು ₹ 2 ಲಕ್ಷದಿಂದ ₹ 3 ಲಕ್ಷದವರೆಗಿನ ಶುಲ್ಕವನ್ನು ಪಾವತಿಸುತ್ತವೆ. ಇಲ್ಲಿ ಮಕ್ಕಳಿಗೆ ಜೇಬುಗಳ್ಳತನ, ಜನಸಂದಣಿ ಇರುವ ಸ್ಥಳಗಳಲ್ಲಿ ಬ್ಯಾಗ್ ಕಸಿದುಕೊಳ್ಳುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು, ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು ಮುಂತಾದ ವಿವಿಧ ಅಪರಾಧ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಗ್ಯಾಂಗ್‌ನಲ್ಲಿ ಒಂದು ವರ್ಷ ಪೂರ್ಣಗೊಂಡ ನಂತರ, ಮಗುವಿನ ಪೋಷಕರು ಗ್ಯಾಂಗ್ ಲೀಡರ್‌ನಿಂದ ವಾರ್ಷಿಕ ₹ 3ಲಕ್ಷ ದಿಂದ ₹ 5 ಲಕ್ಷ ಹಣವನ್ನು ಪಡೆಯುತ್ತಾರೆ.

ಇತ್ತೀಚೆಗಷ್ಟೇ ಈ ಗ್ಯಾಂಗ್‌ ಅತಿದೊಡ್ಡ ಮೊತ್ತದ ಕಳ್ಳತನದ ಮೂಲದ ಭಾರೀ ಸುದ್ದಿಯಾಗಿತ್ತು. ಆಗಸ್ಟ್ 8 ರಂದು ಜೈಪುರದ ಹಯಾತ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಡೆಸ್ಟಿನೇಶನ್ ವೆಡ್ಡಿಂಗ್ ವೇಳೆ ಅಪ್ರಾಪ್ತ ಕಳ್ಳನೊಬ್ಬ ₹ 1.5 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹ 1 ಲಕ್ಷ ನಗದು ಹೊಂದಿರುವ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದ.

ಕಳ್ಳತನ ಮಾಡಿದ ನಂತರ ಆತನ ಗ್ಯಾಂಗ್ ರಾಜ್‌ಗಢ್ ಜಿಲ್ಲೆಯ ಕಡಿಯಾ ಗ್ರಾಮಕ್ಕೆ ಪರಾರಿಯಾಗಿದೆ. ಅನುಮಾನವನ್ನು ಬಾರದಂತೆ ಕದ್ದ ಆಭರಣಗಳನ್ನು ತಕ್ಷಣ ಮಾರಾಟ ಮಾಡಿದ್ದಾರೆ. ನಂತರ ಧಾರ್ಮಿಕ ಯಾತ್ರೆಯಾದ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ತರಬೇತಿ ಬಳಿಕ ಮಕ್ಕಳ ಹರಾಜು

ಬೋಡಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮ್‌ಕುಮಾರ್ ಭಗತ್ ಈ ಬಗ್ಗೆ ಮಾಹಿತಿ ನೀಡಿದ್ದು, “ಈ ಅಪರಾಧಿಗಳು ಬ್ಯಾಗ್ ಎಗರಿಸುವುದು, ಬ್ಯಾಂಕ್ ಕಳ್ಳತನದಲ್ಲಿ ಹೆಚ್ಚು ತರಬೇತಿ ಪಡೆದಿದ್ದಾರೆ.ಸಾಮಾನ್ಯವಾಗಿ 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಬಳಸಿಕೊಳ್ಳುತ್ತವೆ. ಈ ಗ್ರಾಮಗಳಲ್ಲಿ ಮಕ್ಕಳಿಗೆ ಕಳ್ಳತನ ತರಬೇತಿ ನೀಡಿ ಬಳಿಕ ಅವರನ್ನು ಪ್ರೊಫೆಶನಲ್‌ ಕಳ್ಳರನ್ನಾಗಿ ತಯಾರು ಮಾಡಲಾಗುತ್ತಿದೆ ಎಂದರು.

ಈ ಗ್ರಾಮಗಳ 300 ಕ್ಕೂ ಹೆಚ್ಚು ಮಕ್ಕಳು ವಿವಿಧ ರಾಜ್ಯಗಳಲ್ಲಿ ಮದುವೆ ಸಮಾರಂಭಗಳಲ್ಲಿ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ. ಈ ಗ್ಯಾಂಗ್‌ಗಳು ಹೆಚ್ಚು ಸಂಘಟಿತವಾಗಿವೆ, ತಮ್ಮ ಅಪರಾಧ ಕೃತ್ಯಕ್ಕಾಗಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿವೆ. ಹಳ್ಳಿಯೊಳಗಿನ ಶ್ರೀಮಂತ ವ್ಯಕ್ತಿಗಳು ಹರಾಜು ಪ್ರಕ್ರಿಯೆಗಳ ಮೂಲಕ 1-2 ವರ್ಷಗಳವರೆಗೆ ಬಡ ಮಕ್ಕಳನ್ನು ಬಾಡಿಗೆಗೆ ಪಡೆಯುತ್ತಾರೆ, ಈ ಹರಾಜು ₹ 20 ಲಕ್ಷದವರೆಗೆ ತಲುಪುತ್ತದೆ. ಒಮ್ಮೆ ತರಬೇತಿ ಪಡೆದ ನಂತರ, ಈ ಮಕ್ಕಳು ಹೂಡಿಕೆಗಿಂತ ಐದರಿಂದ ಆರು ಪಟ್ಟು ಗಳಿಸುತ್ತಾರೆ, ನಂತರ ಅವರನ್ನು ಗ್ಯಾಂಗ್‌ಗಳಿಂದ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Sharia Law: “ಅಮೆರಿಕನ್ನರ ಮೇಲೂ ಷರಿಯಾ ಕಾನೂನು ಹೇರಲಾಗುತ್ತದೆ…”; ಸಂಚಲನ ಮೂಡಿಸಿದ ವೈರಲ್‌ ವಿಡಿಯೋ

Exit mobile version