ಪಾಟ್ನಾ, ಬಿಹಾರ: ಮಕ್ಕಳಿಗೆ ಬುದ್ಧಿ ಹೇಳಬೇಕಾದ ಶಿಕ್ಷಕ/ಶಿಕ್ಷಕಿಯರೇ ಮಕ್ಕಳ ರೀತಿ ಜಗಳಮಾಡಿಕೊಂಡರೆ ಹೇಗೆ? ಹೌದು, ಬಿಹಾರದ ಪಾಟ್ನಾ (Patna) ಜಿಲ್ಲೆಯ ಕೌರಿಯಾ ಪಂಚಾಯ್ತಿಯ ಬಿಹ್ತಾ ಮಿಡ್ಲ್ ಸ್ಕೂಲ್‌ನಲ್ಲಿ (Bihta middle school) ಪ್ರಿನ್ಸಿಪಾಲ್ (Principal) ಮತ್ತು ಶಿಕ್ಷಕಿಯೊಬ್ಬರು (Teacher) ಮಕ್ಕಳ ರೀತಿಯಲ್ಲಿ ಮಣ್ಣಲ್ಲಿ ಹೊರಳಾಡಿ, ಜಗಳ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ(Viral Video).
ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ಹೊಡೆದಾಡಿಕೊಳ್ಳುವುದನ್ನು ಮಕ್ಕಳು ಸುತ್ತುವರಿದು ನೋಡಿದ್ದಾರೆ. ಜಗಳವು ಮೊದಲಿಗೆ ಕ್ಲಾಸ್‌ರೋಮ್‌ನಲ್ಲಿ ಆರಂಭವಾಗಿ, ಕೊನೆಗೆ ಬೀದಿಗೆ ಬಂದು ಇಬ್ಬರು ಕೆಳಗೆ ಬಿದ್ದು ಹೊಡೆದಾಡಿಕೊಂಡಿದ್ದಾರೆ. ಈ ಜಗಳವನ್ನು ಚಿತ್ರಿಕರಿಸಿದ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಷೇರ್ ಮಾಡಿದ್ದಾರೆ. ಈ ವಿಡಿಯೋ ಫುಲ್ ವೈರಲ್ ಆಗಿದೆ.
ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ಹೊಡೆದಾಡಿಕೊಂಡಿರುವ ವಿಡಿಯೋ ಟ್ವೀಟ್
#Patna #Bihta #koriya #Panchayat की #शिक्षिका से #परीक्षा ना लेना #सरकार इन्हें आता है #जूतम_पैजार #NitishKumar #Teacher #fight #MiddleSchool pic.twitter.com/ZTI0mbF5YX
— JOURNALIST SARVESH (@sarveshmediaman) May 25, 2023
ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ನಡುವೆ ಜಗಳಕ್ಕೆ ವೈಯಕ್ತಿಕ ಕಾರಣ ಎಂದು ಹೇಳಲಾಗುತ್ತಿದೆ. ಅಂದ ಹಾಗೆ, ಜಗಳ ಮಾಡಿಕೊಂಡ ಪ್ರಿನ್ಸಿಪಾಲ್ ಹೆಸರು ಕಾಂತಿ ಕುಮಾರಿ ಹಾಗೂ ಶಿಕ್ಷಕಿ ಅನಿತಾ ಕುಮಾರಿ. ಮೊದಲಿಗೆ ಕ್ಲಾಸ್‌ರೂಮ್‌ನಲ್ಲಿ ಜಗಳ ಶುರುವಾಗಿದೆ. ಬಳಿಕ ಇಬ್ಬರು ಪೈಕಿ ಒಬ್ಬರು ತರಗತಿಯಿಂದ ಹೊರ ಬಂದಿದ್ದಾರೆ. ಆಗ ಮತ್ತೊಬ್ಬರು ಅಷ್ಟಕ್ಕೆ ಸುಮ್ಮನಾಗಿಲ್ಲ. ಆಕೆಯನ್ನು ಹಿಂಬಾಲಿಸಿ, ಹೊರಗಿನ ಗದ್ಧೆಯಲ್ಲಿ ಮತ್ತೆ ಜಗಳ ಶುರು ಮಾಡಿದ್ದಾರೆ. ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video : ಇದು ಹುಡುಗಿಯಲ್ಲ ಸ್ವಾಮಿ! ಈ ಬೈಕ್‌ನಲ್ಲಿರುವವರು ತುಂಬಾನೇ ವಿಶೇಷ, ಯಾರಿವರು?
ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಘಟನೆ ನಡೆದಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಈ ಜಗಳ ನಡೆದಿದ್ದು, ಪ್ರಿನ್ಸಿಪಾಲ್ ಮತ್ತು ಸಹ ಶಿಕ್ಷಕಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆಂದು ಹೇಳಿದ್ದಾರೆ.
ಇನ್ನಷ್ಟು ಕುತೂಹಲಕರ ವೈರಲ್ ನ್ಯೂಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.