Site icon Vistara News

Virtual Tour: ದೆಹಲಿಯ PM ಸಂಗ್ರಹಾಲಯದಲ್ಲಿದೆ ಕನ್ನಡದ ʼನಮಸ್ತೆʼ

Narendra Modi

ನವದೆಹಲಿ: ಭಾರತ ದೇಶ ಇಂದು ವಿಶ್ವಮಟ್ಟದಲ್ಲಿ ಛಾಪು ಮೂಡಿಸಲು ಕಳೆದ 75 ವರ್ಷದಲ್ಲಿ (Azadi ka Amrut Mahotsav) ದೇಶವನ್ನಾಳಿದ ಎಲ್ಲ ಪ್ರಧಾನಮಂತ್ರಿಗಳ (Prime Minister) ಕೊಡುಗೆ ಇದೆ. ಪ್ರಧಾನ ಮಂತ್ರಿಗಳ ಜೀವನ, ಸಾಧನೆ ಮೂಲಕ ದೇಶದ ಚರಿತ್ರೆಯನ್ನು ಹೇಳುವ ಪ್ರಧಾನ ಮಂತ್ರಿ ಸಂಗ್ರಹಾಲಯ (PM Sangrahalay) ನವದೆಹಲಿಯಲ್ಲಿ ತಲೆಯೆತ್ತಿ ನಿಂತಿದೆ.

ವಿಶಿಷ್ಠ ಶೈಲಿಯಲ್ಲಿ ನಿರ್ಮಿಸಲಾಗಿರುವ ಪಿಎಂ ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಉದ್ಘಾಟಿಸಿದರು. ಸಂಗ್ರಹಾಲಯವನ್ನು ಆಧುನಿಕ ತಂತ್ರಜ್ಞಾನ ಬಳಸಿ ಸಂಪೂರ್ಣ ಡಿಜಿಟಲೀಕರಿಸಲಾಗಿದೆ. ಸಂಗ್ರಾಹಲಯದ ವೀಕ್ಷಣೆ ಮಾತ್ರವಲ್ಲ, ಒಳಪ್ರವೇಶಕ್ಕೆ ಟಿಕೆಟ್‌ ಖರೀದಿಯನ್ನೂ ಡಿಜಿಟಲ್‌ ಮಾಡಲಾಗಿದೆ. ಸಂಗ್ರಹಾಲಯ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಸ್ವತಃ ಡಿಜಿಟಲ್‌ ಪಾವತಿ ಮೂಲಕ ಟಿಕೆಟ್‌ ಖರೀದಿಸಿ ಒಳಪ್ರವೇಶಿಸಿದರು. ಇಡೀ ವಿಶ್ವವೇ ಭಾರತದ ಕಡೆಗೆ ಆಶಾಭಾವನೆಯಿಂದ ಇಂದು ನೋಡುತ್ತಿದೆ. ಇಂದತಹ ಸಮಯದಲ್ಲಿ ಪಿಎಂ ಸಂಗ್ರಹಾಲಯ ನಮಗೆ ಪ್ರೇರಣೆ ನೀಡುತ್ತದೆ ಎಂದು ಮೋದಿ ಹೇಳಿದರು. ಹಾಗಾದರೆ ಸಂಗ್ರಹಾಲಯದಲ್ಲಿ ಏನೆಲ್ಲ ವಿಶೇಷತೆಗಳಿವೆ ನೋಡೋಣ ಬನ್ನಿ.

ಭಾರತದ ಇತಿಹಾಸ: ಭಾರತದ ಇತಿಹಾಸವನ್ನು ವಿವಿಧ ದೃಷ್ಟಿಕೋನದಲ್ಲಿ ನೋಡಬಹುದು. ಸ್ವಾತಂತ್ರ್ಯ ಹೋರಾಟ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಚಳವಳಿಗಳು, ಭಾಷಾ ವೈಭವ, ಹೀಗೆ…. ಇದೀಘ ಉದ್ಘಾಟನೆಯಾಗಿರುವ ಪಿಎಂ ಸಂಗ್ರಹಾಲಯದಲ್ಲಿ ಭಾರತದ ಇತಿಹಸವನ್ನು ಪ್ರಧಾನ ಮಂತ್ರಿಗಳ ಜೀವನ ಹಾಗೂ ಸಾಧನೆ ಮೂಲಕ ಪರಿಚಯಿಸಲಾಗಿದೆ. ಉದಾಹರಣೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಾಂಗ್ಲಾ ವಿಮೋಚನೆ ಯುದ್ಧ ನಡೆಯಿತು. ಭಾರತದ ಸೈನಿಕರು ವೀರಾವೇಶದಿಂದ ಹೋರಾಟ ನಡೆಸಿ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶ ಎಂಬ ಹೊಸ ದೇಶ ಉದಯಿಸುವಂತೆ ಮಾಡಿದರು. ಇದು ಇಂದಿರಾಗಾಂಧಿಯವರ ದಿಟ್ಟ ನಿರ್ಧಾರದಿಂದ ಸಾಧ್ಯವಾಯಿತು. ಇದೇ ರೀತಿ ಎಲ್ಲ ಪ್ರಧಾನಮಂತ್ರಿಯವರ ಸಮಯದಲ್ಲಿ ನಡೆದ ಕಾರ್ಯಗಳನ್ನು ವಿವರಿಸಲಾಗಿದೆ.

ಹೆಚ್ಚಿನ ಓದಿಗಾಗಿ: ಇದು ಮನುಷ್ಯರನ್ನು ಓದೋ ‌ಹ್ಯೂಮನ್‌ ಲೈಬ್ರರಿ!

ಧರ್ಮಚಕ್ರ: ಭಾರತದ ತ್ರಿವರ್ಣ ಧ್ವಜದ ಥೀಮ್‌ ಇಟ್ಟುಕೊಂಡೇ ಇಡೀ ಡಿಜಿಟಲ್‌ ಸಂಗ್ರಹಲಾಯವನ್ನು ರೂಪಿಸಲಾಗಿದೆ. ಸಂಗ್ರಹಾಲಯದ ಹೊರಾಂಗಣದಲ್ಲೂ ತ್ರಿವರ್ಣ ಲೈಟಿಂಗ್‌ ಗಮನ ಸೆಳೆಯುತ್ತದೆ. ಜತೆಗೆ ಒಳಭಾಗದಲ್ಲೂ ತ್ರಿವರ್ಣದ ಥೀಮ್‌ ಬಳಸಲಾಗಿದೆ. ಅರಳುತ್ತಿರುವ ಹೂವಿನ ಆಕಾರದ ಕೈಗಳ ಮೇಲ್ಛಾವಣಿಯನ್ನು ಅಶೋಕ ಚಕ್ರದಿಂದ ಅಲಂಕರಿಸಲಾಗಿದೆ. ದೇಶದ ಪ್ರಧಾನಿಗಳಷ್ಟೆ ಅಲ್ಲದೆ ದೇಶದ ಜನರ ಕೈಯಲ್ಲಿ ಧರ್ಮಚಕ್ರವಿದೆ. ಈ ದೇಶವನ್ನು ಎಲ್ಲರೂ ಸೇರಿ ಮುನ್ನಡೆಸುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತದೆ.

ಡಿಜಿಟಲ್‌ ಟಿಕೆಟ್‌ ಖರೀದಿಸಿ ಮ್ಯೂಸಿಯಂ ಪ್ರವೇಶಿಸಿದ ಪ್ರಧಾನಿ ಮೋದಿ

ಉಜ್ವಲ ಭಾರತ: ಭಾರತದ ಇತಿಹಾಸವನ್ನು ಎಲ್ಲ ಪ್ರಧಾನಿಗಳ ಕೈಯಿಂದಲೂ ನಿರ್ಮಿಸಲಾಗಿದೆ. ಪ್ರತಿ ಪ್ರಧಾನಿಯೂ ತಮ್ಮ ಅವಧಿಯಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಒಂದು ಹೆಜ್ಜೆ ಮುಂದೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಈ ಅಂಶವನ್ನು ಸಾಂಕೇತಿಕವಾಗಿ ಹಾಗೂ ಪ್ರಬಲವಾಗಿ ರೂಪಿಸಲಾಗಿದೆ. ಸಂಗ್ರಹಾಲಯದ ನಡುವಿನ ಅಂಗಳದಲ್ಲಿ ಎರಡು ಕೈಗಳನ್ನು ನಿರ್ಮಿಸಲಾಗಿದೆ. ಎರಡೂ ಕೈಗಳು ಅರಳುತ್ತಿರುವ ಹೂವಿನಂತೆ ಬೆರಳನ್ನು ಚಾಚಿವೆ. ಈ ಮೂಲಕ, ಪ್ರತಿ ಪ್ರಧಾನಿಯೂ ದೇಶವು ಅರಳುವಲ್ಲಿ ಸಹಕಾರ ನೀಡಿದ್ದಾರೆ ಎಂದು ಸೂಚಿಸಲಾಗಿದೆ.

ಲೀಡರ್‌ ಕಾರಿಡಾರ್‌: ಸಂಗ್ರಹಾಲಯದ ಒಳಪ್ರವೇಶಿಸುವ ಮಾರ್ಗದ ಎರಡೂ ಬದಿಯ ಗೋಡೆಗಳಲ್ಲಿ ಎಲ್ಲ ಪ್ರಧಾನಿಗಳ ಬೃಹತ್‌ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಪ್ರತಿ ಪ್ರಧಾನಿ ಬಳಿ ತೆರಳುತ್ತಿದ್ದಂತೆಯೇ ಅದರ ಆಕಾರ ಹಾಗೂ ವೈಭವಯುತ ಡಿಸ್‌ಪ್ಲೇ ಕಾರಣಕ್ಕೆ ಗಮನ ಸೆಳೆಯುತ್ತದೆ ಹಾಗೂ ದೇಶದ ಇತಿಹಾಸದ ಕುರಿತು ಗೌರವ ಮೂಡುವಂತೆ ಮಾಡಲಾಗಿದೆ.

ಕನ್ನಡದಲ್ಲೂ ಇದೆ ನಮಸ್ತೆ: ಸಂಗ್ರಹಾಲಯವನ್ನು ಭಾರತದ ಸನ್ನಿವೇಶದಲ್ಲಿ ನಿರ್ಮಿಸಲಾಗಿದೆಯಾದರೂ ವಸುಧೈವ ಕುಟುಂಬಕಂ ಎಂಬ ತತ್ವವನ್ನೂ ಅಳವಡಿಸಲಾಗಿದೆ. ಸಂಗ್ರಹಾಲಯದ ಪ್ರಾರಂಭದಲ್ಲೇ ಸ್ವಾಗತಕಾರರ ಕಕ್ಷೆ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಇಂಗ್ಲಿಷ್‌ನಲ್ಲಿ Hello ಎನ್ನುವುದೂ ಸೇರಿ ಭಾರತದ ಎಲ್ಲ ಭಾಷೆಗಳಲ್ಲೂ ಸ್ವಾಗತ ಕೋರಲಾಗಿದೆ. ಕನ್ನಡದಲ್ಲಿ “ನಮಸ್ತೆ” ಎಂದು ಮೇಲ್ಭಾಗದಲ್ಲೆ ಮುದ್ರಣ ಮಾಡಲಾಗಿದೆ. ಒಂದು ಅಂಗಳದ ಮೇಲ್ಛಾವಣಿಯಲ್ಲಿ ವಿಶ್ವದ ಗೋಳವನ್ನೆ ಅಳವಡಿಸಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ ಕೂಡ, ಆ ನೋ ಭದ್ರಾಃ ಕೃತವೋ ಯಂತು ವಿಶ್ವತಃ (ಒಳ್ಳೆಯ ಆಲೋಚನೆಗಳು ಎಲ್ಲೆಡೆಯಿಂದ ಬರಲಿ) ಎಂಬ ಘೋಷವಾಕ್ಯವನ್ನು ನಾವು ನಂಬುತ್ತೇವೆ ಎಂದಿದ್ದಾರೆ.

ಉಪಯೋಗಿಸಿದ ವಸ್ತುಗಳು: ಸಂಗ್ರಹಾಲಯದಲ್ಲಿ ಎಲ್ಲ ಪ್ರಧಾನಮಂತ್ರಿಗಳ ಜೀವನ ಸಾಧನೆ ಜತೆಗೆ ಅವರು ಬಳಸಿದ ಕೆಲ ವಸ್ತುಗಳನ್ನೂ ಇರಿಸಲಾಗಿದೆ. ಉದಾಹರಣೆಗೆ ಈ ನಾಯಕರು ಅತ್ಯಂತ ಇಷ್ಟಪಟ್ಟು ಓದುತ್ತಿದ್ದ ಪುಸ್ತಕಗಳು, ಪೆನ್ನುಗಳನ್ನು ಸುರಕ್ಷಿತವಾದ ಗಾಜಿನ ಪೆಟ್ಟಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜತೆಗೆ ಆ ಪ್ರಧಾನಿಗಳ ಕುರಿತು ಪ್ರಕಟವಾಗಿರುವ ಕೆಲ ಪುಸ್ತಕಗಳು, ಅವರು ರಚಿಸಿದ ಕೃತಿಗಳನ್ನೂ ಪ್ರದರ್ಶಿಸಲಾಗಿದೆ.

Exit mobile version