Site icon Vistara News

ವಿಸ್ತಾರ Explainer: G20 Summit 2023: ಏನು, ಯಾಕೆ, ಎಲ್ಲಿ? ಸುಲಭವಾಗಿ ಅರ್ಥವಾಗುವ ವಿವರ ಇಲ್ಲಿದೆ!

G20 Summit 2023

ದಿಲ್ಲಿಯಲ್ಲಿ ಸೆಪ್ಟೆಂಬರ್‌ 9 ಮತ್ತು 10ರಂದು G20 ದೇಶಗಳ ಮಹಾ ಶೃಂಗಸಭೆ ನಡೆಯತ್ತದೆ. ಏನಿದು G20 ಅಂದರೆ? ಇದರಲ್ಲಿ ಯಾರ್ಯಾರೆಲ್ಲಾ ಇದ್ದಾರೆ? ಇದು ಸಭೆ ಸೇರುವ ಉದ್ದೇಶವೇನು? ವಿವರವಾದ ಒಂದು ನೋಟ ಇಲ್ಲಿದೆ. ಇದನ್ನು ನೀವು ಮಕ್ಕಳಿಗೂ ಸುಲಭವಾಗಿ ವಿವರಿಸಲು ಉಪಯೋಗಿಸಬಹುದು.

ಯಾವಾಗ ಸ್ಥಾಪನೆಯಾಯಿತು?

1990ರ ದಶಕದ ಕೊನೆಯಲ್ಲಿ ಏಷ್ಯಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಆಗ ಹಲವು ದೇಶಗಳು ಸೇರಿಕೊಂಡು, ಯಾವ ದೇಶವೂ ಆರ್ಥಿಕವಾಗಿ ಮುಳುಗಿಹೋಗದಂತೆ ಪರಸ್ಪರ ವ್ಯಾಪಾರ ಸಹಾಯದ ಮೂಲಕ ಬದುಕುವುದು ಹೇಗೆ ಎಂದು ಚರ್ಚಿಸಿದವು. ಹಾಗೆ 1999ರಲ್ಲಿ ಸ್ಥಾಪನೆಯಾದುದು G20 ಸಂಘಟನೆ. ಇದು 20 ದೇಶಗಳ ಒಂದು ಒಕ್ಕೂಟ.

ಆರಂಭದಲ್ಲಿ ಇದು G20 ದೇಶಗಳ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷರುಗಳ ಸಭೆಯಾಗಿ ಕಾರ್ಯನಿರ್ವಹಿಸಿತು. ಜಾಗತಿಕ ಆರ್ಥಿಕತೆಯನ್ನು ಸ್ಥಿರವಾಗಿಟ್ಟುಕೊಳ್ಳುವುದು ಇದರ ಪ್ರಾಥಮಿಕ ಗುರಿ. ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವುದು, ವಿಶ್ವಾದ್ಯಂತ ಆರ್ಥಿಕ ಸ್ಥಿರತೆ ಹೊಂದುವುದು, ದೇಶಗಳ ಬೆಳವಣಿಗೆಯನ್ನು ಉತ್ತೇಜಿಸುವುದು ಕೂಡ ಗುರಿಗಳಾಗಿವೆ. ಈ ನಡುವೆ, ಬೆಳೆಯುತ್ತಿರುವ ಸಂಕೀರ್ಣ ಜಾಗತಿಕ ಸಂಗತಿಗಳು, ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಚರ್ಚಿಸಲು ಕೂಡ G20 ಶೃಂಗಸಭೆಯು ವಿಶ್ವದ ಪ್ರಮುಖರಿಗೆ ನಿರ್ಣಾಯಕ ವೇದಿಕೆಯಾಗಿ ನೆರವಾಗಿದೆ. 2008ರಲ್ಲಿ ಉಂಟಾದ ಇನ್ನೊಂದು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, G20 ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು.

G20ಯಲ್ಲಿರುವ ದೇಶಗಳು ಯಾವುವು?

ಇದು ಇಪ್ಪತ್ತು ಪ್ರಮುಖ ಆರ್ಥಿಕ ದೇಶಗಳ ಅಂತಾರಾಷ್ಟ್ರೀಯ ಸಭೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಎರಡೂ ಬಗೆಯ ದೇಶಗಳು ಇಲ್ಲಿವೆ. ಭಾರತ, ಆಸ್ಟ್ರೇಲಿಯಾ, ಅರ್ಜೆಂಟೀನಾ, ಬ್ರೆಜಿಲ್,
ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟ ಇದರಲ್ಲಿವೆ.

G20 ಶೃಂಗಸಭೆ

G20 ನಾಯಕರು ವರ್ಷಕ್ಕೊಮ್ಮೆ G20 ಶೃಂಗಸಭೆ ಎಂದು ಕರೆಯಲ್ಪಡುವ ಸಮಾರಂಭದಲ್ಲಿ ಸಭೆ ಸೇರುತ್ತಾರೆ. ಶೃಂಗಸಭೆಯಲ್ಲಿ ಚರ್ಚೆಯಾಗುವ ವಿಚಾರಗಳು ಈ ಕೆಳಗಿನಂತಿರುತ್ತವೆ:

G20 Summit

ಭಾರತದ G20 ಅಧ್ಯಕ್ಷತೆ

G20 ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಈಗ ಭಾರತ ಹೊಂದಿದೆ. ಹಿಂದಿನ ಅಧ್ಯಕ್ಷ ಸ್ಥಾನವನ್ನು ಇಂಡೊನೇಷ್ಯಾ ಹೊಂದಿತ್ತು. ಈಗ ಭಾರತ ಒಂದು ವರ್ಷದ ಅವಧಿಗೆ G20 ಅಧ್ಯಕ್ಷ. G20 ಪದ್ಧತಿಗೆ ಅನುಸಾರವಾಗಿ ಅಧ್ಯಕ್ಷ ಸ್ಥಾನ ವರ್ಷಕ್ಕೊಮ್ಮೆ ಬದಲಾಗುತ್ತದೆ. ಅಧ್ಯಕ್ಷತೆ ವಹಿಸಿರುವ ರಾಷ್ಟ್ರದಲ್ಲಿ ಆಯಾ ವರ್ಷದ ಶೃಂಗಸಭೆ ನಡೆಯುವುದು ರೂಢಿ. ನಿರಂತರತೆ ಕಾಪಾಡಿಕೊಳ್ಳಲು ಭಾರತ ತನ್ನ ಹಿಂದಿನ ಮತ್ತು ಭವಿಷ್ಯದ ಅಧ್ಯಕ್ಷರೊಂದಿಗೆ ಸಂಪರ್ಕ ಕಾಯ್ದುಕೊಳ್ಳುತ್ತದೆ.

18ನೇ G20 ಶೃಂಗಸಭೆ

ಭಾರತದ ರಾಜಧಾನಿ ದೆಹಲಿಯಲ್ಲಿ 18ನೇ G20 ಶೃಂಗಸಭೆ ಸೆಪ್ಟೆಂಬರ್ 9 ಮತ್ತು 10 ನಡೆಯುತ್ತಿದೆ. ಇದಕ್ಕೆ ಜಾಗತಿಕ ನಾಯಕರು ಆಗಮಿಸಲಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿದೆ.

G20 Summit

ಈ ಸಲ ನಡೆಯಲಿರುವ ಚರ್ಚೆಗಳು

ಈ ಸಲದ G20 ಶೃಂಗಸಭೆಯ ಕಾರ್ಯಸೂಚಿ ಅನೇಕ ವಿಷಯಗಳನ್ನು ಒಳಗೊಂಡಿದೆ. ಅವು ಹೀಗಿವೆ:

G20 ಶೃಂಗಸಭೆಯ ಲೋಗೋ

G20 ಶೃಂಗಸಭೆಯ ಈ ಬಾರಿಯ ಲೋಗೋವನ್ನು ಭಾರತವು ವಿನ್ಯಾಸಗೊಳಿಸಿದೆ. ಇದಕ್ಕೆ ಸ್ಫೂರ್ತಿ ನಮ್ಮ ರಾಷ್ಟ್ರಧ್ವಜದ ಬಣ್ಣಗಳಿಂದ ಬಂದಿದೆ. ಕೇಸರಿ, ಹಸಿರು, ಬಿಳಿ ಮತ್ತು ನೀಲಿ ಬಣ್ಣಗಳು ಹಾಗೂ ಏಳು ದಳಗಳನ್ನು ಹೊಂದಿರುವ ಕಮಲವನ್ನು ಇದು ಒಳಗೊಂಡಿದೆ. ಕಮಲವು ಭರವಸೆ, ಜ್ಞಾನ ಮತ್ತು ಸಮೃದ್ಧಿಯ ಸಾಂಪ್ರದಾಯಿಕ ಸಂಕೇತವಾಗಿದೆ. ಪ್ರಸ್ತುತ ಸವಾಲಿನ ಕಾಲಘಟ್ಟದಲ್ಲಿ ಭಾರತದ ಭೂಸ್ನೇಹಿ ತಾತ್ವಿಕತೆಯನ್ನು, ಏಕತೆ ಮತ್ತು ಒಳಗೊಳ್ಳುವಿಕೆಯನ್ನು ಈ ಲೋಗೋ ವಿಶೇಷವಾಗಿ ಸೂಚಿಸುತ್ತದೆ.

ಇದನ್ನೂ ಓದಿ: G20 Summit 2023: ದಿಲ್ಲಿಗೆ ಬರಲಿರುವ ಜಾಗತಿಕ ನಾಯಕರಿಗೆ ಊಹೆಗೂ ಮೀರಿದ ಭದ್ರತಾ ವ್ಯವಸ್ಥೆ!

Exit mobile version