Site icon Vistara News

ವಿಸ್ತಾರ Explainer | ದೇಶೀಯವಾಗಿ ಲಿಥಿಯಂ ಹುಡುಕಾಟ, ಮಂಡ್ಯದಲ್ಲೇ ಇದೆ ನಿಕ್ಷೇಪ!

India finds lithium for the first time in J and K

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಒಂದು ಪ್ರಮುಖ ಬೆಳವಣಿಗೆಯಲ್ಲಿ ಭಾರತ ತನ್ನ ಪ್ರಥಮ ಲಿಥಿಯಂ ನಿಕ್ಷೇಪವನ್ನು ಕರ್ನಾಟಕದ ಮಂಡ್ಯ ಜಿಲ್ಲೆಯ ಮರಳಗಾಲ ಹಾಗೂ ಅಲ್ಲಾಪಟ್ಟಣ ಪ್ರಾಂತ್ಯದಲ್ಲಿ ಅಗ್ನಿಯುಕ್ತ ಬಂಡೆಗಳಲ್ಲಿ ಪತ್ತೆ ಹಚ್ಚಿದೆ. ಪ್ರಸ್ತುತ ಈ ನಿಕ್ಷೇಪ ಅತ್ಯಂತ ಸಣ್ಣ ಪ್ರಮಾಣದ್ದಾಗಿದೆ. ಇಲ್ಲಿ ಕೇವಲ 1,600 ಟನ್‌ಗಳಷ್ಟು ಮಾತ್ರ ಲಿಥಿಯಂ ಲಭ್ಯವಿದೆ. ಆದರೆ ದೇಶಿಯವಾಗಿ ಈ ಲೋಹದ ಗಣಿಗಾರಿಕೆ ನಡೆಸುವ ಭಾರತದ ಉದ್ದೇಶಕ್ಕೆ ಇದು ಆರಂಭಿಕ ಯಶಸ್ಸಾಗಿ ಪರಿಣಮಿಸಿದೆ. ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎಎಂಡಿ) ಆಯೋಜಿಸಿದ ಪೂರ್ವಭಾವಿ ಸಮೀಕ್ಷೆಗಳು ಈ ಪ್ರದೇಶದಲ್ಲಿ ಲಿಥಿಯಂ ಸಂಪನ್ಮೂಲಗಳನ್ನು ಖಚಿತ ಪಡಿಸಿವೆ.

ಲಿಥಿಯಂ ಎಂಬುದು ಅಪಾರ ಪ್ರಮಾಣದಲ್ಲಿ ಬಳಕೆಯಾಗುವ ಒಂದು ರಾಸಾಯನಿಕ ಸಂಯುಕ್ತವಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಲಿಥಿಯಂ ಒಂದು ಅತ್ಯಂತ ಹಗುರವಾದ ಲೋಹ ಮತ್ತು ಅತ್ಯಂತ ಹಗುರವಾದ ಘನ ಸಂಯುಕ್ತವಾಗಿದೆ.

ಇದು ಅತ್ಯಂತ ಪ್ರತಿಕ್ರಿಯಾತ್ಮಕ ಮತ್ತು ದಹನಕಾರಿ ಆಗಿರುವುದರಿಂದ ಲಿಥಿಯಂ ಅನ್ನು ಖನಿಜ ತೈಲದಲ್ಲಿ ಸಂಗ್ರಹಿಸಿ ನೀಡಬೇಕಾಗುತ್ತದೆ. ಇದು ಮೇಲ್ನೋಟಕ್ಕೆ ಮೃದುವಾದ, ಬೆಳ್ಳಗಿನ ಲೋಹದಂತೆ ಕಂಡುಬರುತ್ತದೆ. ಇದೊಂದು ಆಲ್ಕಲಿ ಲೋಹ ಮಾತ್ರವಲ್ಲದೇ ಅಪರೂಪದ ಲೋಹವೂ ಹೌದು.

ಆಲ್ಕಲಿ ಲೋಹಗಳು ಸಾಮಾನ್ಯವಾಗಿ ರಾಸಾಯನಿಕ ಸಂಯುಕ್ತಗಳಾದ ಲಿಥಿಯಂ, ಸೋಡಿಯಂ, ಪೊಟ್ಯಾಸಿಯಂ, ರುಬಿಡಿಯಂ, ಕ್ಯಾಸಿಯಂ, ಹಾಗೂ ಫ್ರಾನ್ಸಿಯಂಗಳನ್ನು ಒಳಗೊಂಡಿದೆ. ಜಲಜನಕದ ಜೊತೆ ಸೇರಿ ಇವುಗಳು ಆವರ್ತ ಕೋಷ್ಟಕದ S ಬ್ಲಾಕ್ ನಲ್ಲಿರುವ ಮೊದಲ ಗುಂಪನ್ನು ನಿರ್ಮಿಸುತ್ತವೆ.

ಈ ಲೋಹಗಳು ಕಾರ್ಯತಂತ್ರದ ಗುಣವುಳ್ಳವಾಗಿದ್ದು ಇವುಗಳನ್ನು ನ್ಯೂಕ್ಲಿಯರ್ ಹಾಗೂ ಇತರ ಹೈಟೆಕ್ ಉದ್ಯಮಗಳಾದ ಎಲೆಕ್ಟ್ರಾನಿಕ್ಸ್, ಟೆಲಿ ಕಮ್ಯುನಿಕೇಷನ್, ಇನ್ಫಾರ್ಮೇಶನ್ ಟೆಕ್ನಾಲಜಿ, ಬಾಹ್ಯಾಕಾಶ, ರಕ್ಷಣೆ ಇತ್ಯಾದಿಗಳಲ್ಲಿ ಬಳಕೆಯಾಗುತ್ತದೆ. ಇದನ್ನು ಸ್ವೀಡನ್ನಿನ ರಾಸಾಯನಿಕ ತಜ್ಞ ಜೊಹಾನ್ ಆಗಸ್ಟ್ ಆರ್ಫ್ವೆಡ್ಸನ್ ಖನಿಜ ಪೆಟಾಲೈಟ್‌ನಲ್ಲಿ 1817ರಲ್ಲಿ ಪತ್ತೆ ಹಚ್ಚಿದರು. ಲೀಥಿಯಂ ಬ್ರೈನ್ ಡೆಪಾಸಿಟ್ ಹಾಗೂ ಖನಿಜ ಚಿಲುಮೆಗಳ ಉಪ್ಪಿನಲ್ಲಿ, ಪ್ರಗ್ಮಾಟೈಟ್ ಅದಿರುಗಳಲ್ಲಿ ಲಭ್ಯವಿರುತ್ತದೆ.

ಗಣಿಗಾರಿಕೆಯ ಭೌಗೋಳಿಕ ಪ್ರದೇಶಗಳು
ಎರಡನೇ ಮಹಾಯುದ್ಧ ಅಂತ್ಯಗೊಂಡ ಬಳಿಕ ಲೀಥಿಯಂ ಉತ್ಪಾದನೆ ಅಪಾರ ಪ್ರಮಾಣದಲ್ಲಿ ಹೆಚ್ಚಳ ಕಂಡಿತು. ಲಿಥಿಯಂನ ಪ್ರಮುಖ ಮೂಲಗಳು ಉಪ್ಪುನೀರು ಮತ್ತು ಅದಿರುಗಳಾಗಿವೆ. ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ವರದಿಯ ಪ್ರಕಾರ, 2019ರ ಬಳಿಕ ಜಗತ್ತಿನಲ್ಲಿ ಅತಿಹೆಚ್ಚು ಲಿಥಿಯಂ ಉತ್ಪಾದಿಸುವ ರಾಷ್ಟ್ರಗಳು ಆಸ್ಟ್ರೇಲಿಯಾ, ಚಿಲಿ, ಬೋಲಿವಿಯ ಹಾಗೂ ಅರ್ಜೆಂಟಿನಾ. ಆಗಿವೆ. ಈ ರಾಷ್ಟ್ರಗಳ ಒಟ್ಟಾಗಿ ಈ ಪಂದ್ಯವನ್ನು ಲಿಥಿಯಂ ತ್ರಿಕೋನ ಎಂದು ಕರೆಯುವಂತೆ ಮಾಡಿವೆ.

ಈ ಲಿಥಿಯಂ ತ್ರಿಕೋನ ತನ್ನಲ್ಲಿ ಅತ್ಯುತ್ಕೃಷ್ಟ ದರ್ಜೆಯ ಉಪ್ಪು ಫ್ಲಾಟ್‌ಗಳನ್ನು ಹೊಂದಿದೆ. ಇದರಲ್ಲಿ ಬೊಲಿವಿಯಾದ ಸಲಾರ್ ಡಿ ಉಯುನಿ, ಚಿಲಿಯ ಸಲಾರ್ ಡಿ ಅಟಕಾಮಾ, ಹಾಗೂ ಅರ್ಜೆಂಟೀನಾದ ಸಲಾರ್ ಡಿ ಅರಿಜ಼ಾರೋಗಳು ಸೇರಿವೆ. ಈ ಲಿಥಿಯಂ ತ್ರಿಕೋನ ಜಗತ್ತಿನ 75%ಕ್ಕೂ ಹೆಚ್ಚಿನ ಲಿಥಿಯಂ ನಿಕ್ಷೇಪವನ್ನು ಹೊಂದಿವೆ. ಭಾರತ ಪ್ರಸ್ತುತ ತನ್ನ ಲಿಥಿಯಂ ಅವಶ್ಯಕತೆಗಳನ್ನು ಆಮದಿನ ಮೂಲಕ ಪೂರೈಸಿಕೊಳ್ಳುತ್ತದೆ.

ಲಿಥಿಯಂ ಹೊರತೆಗೆಯುವಿಕೆ
ಲಿಥಿಯಂ ಅನ್ನು ಬೇರೆ ಬೇರೆ ವಿಧಾನಗಳ ಮೂಲಕ ಹೊರತೆಗೆಯಬಹುದು. ಅದು ಲಿಥಿಯಂ ನಿಕ್ಷೇಪ ಯಾವ ರೀತಿಯಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಬೃಹತ್ ಉಪ್ಪಿನ ಕೊಳಗಳನ್ನು ಬಿಸಿಲಲ್ಲಿ ಆರಿಸಿ ಅಥವಾ ಗಟ್ಟಿಯಾದ ಬಂಡೆಗಳ ಮೂಲಕ ಅದಿರನ್ನು ಪಡೆಯುವ ಮೂಲಕ ಗಳಿಸಲಾಗುತ್ತದೆ. ಭಾರತದಲ್ಲಿ ಪ್ರಸ್ತುತ ಯಾವುದೇ ಲಿಥಿಯಂ ಗಣಿಗಳಿಲ್ಲ.

ಭಾರತದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಲ್ಲಿನ ಗಣಿಗಾರಿಕೆಯ ಜೊತೆಗೆ ಲಿಥಿಯಂ ಅನ್ನು ರಾಜಸ್ಥಾನದ ಸಂಭಾರ್ ಮತ್ತು ಪಚ್‌ಪದ್ರಾ ಉಪ್ಪಿನ ಮೂಲಕ, ಗುಜರಾತಿನ ರಣ್ ಆಫ್ ಕಛ್ ಮೂಲಕ ಸಂಗ್ರಹಿಸಲು ಸಾಧ್ಯವಿದೆ. ಕರ್ನಾಟಕವನ್ನು ಹೊರತುಪಡಿಸಿ, ರಾಜಸ್ಥಾನ್, ಬಿಹಾರ್, ಹಾಗೂ ಆಂಧ್ರಪ್ರದೇಶದ ಮೈಕಾ ಬೆಲ್ಟ್ ಮತ್ತು ಒಡಿಶಾ ಹಾಗೂ ಛತ್ತೀಸ್‌ಗಢದ ಪೆಗ್ಮಾಟೈಟ್ ಬೆಲ್ಟ್ ಸಹ ಇತರ ಭೂಪ್ರದೇಶಗಳಾಗಿವೆ.

ಲಿಥಿಯಮ್ಮಿನ ಕಾರ್ಯತಂತ್ರದ ಮಹತ್ವ
ಲಿಥಿಯಂ ಮತ್ತು ಅದರ ಸಂಯುಕ್ತಗಳು ವಿವಿಧ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತವೆ. ಉಷ್ಣ ತಡೆಯುವ ಗಾಜು ಹಾಗೂ ಸಿರಾಮಿಕ್, ಲಿಥಿಯಂ ಗ್ರೀಸ್ ಲ್ಯೂಬ್ರಿಕೆಂಟ್, ಕಬ್ಬಿಣದ ಫ್ಲಕ್ಸ್ ಅಡಿಟಿವ್, ಸ್ಟೀಲ್ ಮತ್ತು ಅಲ್ಯುಮಿನಿಯಂ ಉತ್ಪಾದನೆ, ಲಿಥಿಯಂ ಬ್ಯಾಟರಿಗಳು ಹಾಗೂ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಲಿಥಿಯಂ ಬಳಕೆಯಾಗುತ್ತದೆ.

ಲಿಥಿಯಂ ಲೋಹದ ಪ್ರಮುಖ ಕೈಗಾರಿಕಾ ಬಳಕೆ ಎಂದರೆ ಲೋಹಶಾಸ್ತ್ರವಾಗಿದೆ. ಇಲ್ಲಿ ಸಕ್ರಿಯ ಸಂಯುಕ್ತ ಕಲ್ಮಶಗಳನ್ನು ತೆಗೆದು ಹಾಕಲು ಬಳಕೆಯಾಗುತ್ತದೆ. ಇದನ್ನು ಕಬ್ಬಿಣ, ನಿಕ್ಕೆಲ್, ತಾಮ್ರ, ಹಾಗೂ ಜಿ಼ಂಕ್ ಮತ್ತು ಅವುಗಳ ಮಿಶ್ರಲೋಹಗಳ ಪರಿಷ್ಕರಣೆಯಲ್ಲಿ ಬಳಸಲಾಗುತ್ತದೆ.

ಲಿಥಿಯಂ ಲೋಹವನ್ನು ಉಪಯುಕ್ತ ಮಿಶ್ರಲೋಹಗಳ ನಿರ್ಮಾಣದಲ್ಲಿ ಬಳಸಲಾಗುತ್ತದೆ. ಮೋಟಾರ್ ಇಂಜಿನ್‌ಗಳ ಲೋಹದ ಬೇರಿಂಗಿಗೆ ಬಿಳಿಯ ಲೋಹವಾದ ಲೆಡ್ ಆಗಿ, ಅಲ್ಯುಮಿನಿಯಮ್ ಜೊತೆ ವಿಮಾನದ ಬಿಡಿಭಾಗಗಳ ನಿರ್ಮಾಣದಲ್ಲಿ, ಹಾಗೂ ಮೆಗ್ನೀಸಿಯಂ ಜೊತೆ ಆರ್ಮರ್ ಪ್ಲೇಟ್‌ಗಳ ನಿರ್ಮಾಣದಲ್ಲಿ ಲಿಥಿಯಂ ಬಳಕೆಯಾಗುತ್ತದೆ. ಇದನ್ನು ಥರ್ಮೋನ್ಯೂಕ್ಲಿಯರ್‌ ಪ್ರತಿಕ್ರಿಯೆಯಲ್ಲೂ ಬಳಸಲಾಗುತ್ತದೆ. ಲಿಥಿಯಂ (Li-7) ಹೈಡ್ರಾಕ್ಸೈಡ್ ಪ್ರೆಷರೈಸ್ಡ್ ವಾಟರ್ ರಿಯಾಕ್ಟರ್ (ಪಿಡಬ್ಲ್ಯುಆರ್) ಕೆಮಿಸ್ಟ್ರಿಯನ್ನು ನಿಯಂತ್ರಿಸಲು ಅತ್ಯಂತ ಅವಶ್ಯಕವಾಗಿದೆ. ಮಾಲ್ಟನ್ ಸಾಲ್ಟ್ ರಿಯಾಕ್ಟರ್‌ಗಳಲ್ಲಿ ಇದು ಫ್ಲೋರೈಡ್ ಕೂಲೆಂಟಿನ ಪ್ರಮುಖ ಅಂಶವಾಗಿದೆ. ಇದರ ಕನಿಷ್ಠ ತೂಕ, ಹಾಗೂ ಹೆಚ್ಚಿನ ಋಣಾತ್ಮಕ ಎಲೆಕ್ಟ್ರೋಮ್ಯಾಗ್ನೆಟಿಕ್ ಸಾಮರ್ಥ್ಯದಿಂದ ಲಿಥಿಯಂ ಲೋಹ ಇಲೆಕ್ಟ್ರಿಕ್ ವಾಹನಗಳಲ್ಲಿ, ಮೊಬೈಲ್ ಫೋನ್‌ಗಳಲ್ಲಿ ಹಾಗೂ ಲ್ಯಾಪ್‌ಟಾಪ್ ಗಳಲ್ಲಿ ಬಳಸುವ, ಮರುಪೂರಣ ಸಾಧ್ಯವಿಲ್ಲದ ಹಲವು ಪ್ರಾಥಮಿಕ ಬ್ಯಾಟರಿಗಳಲ್ಲಿ ಆ್ಯನೋಡ್ (ಋಣ ಇಲೆಕ್ಟ್ರಾಡ್) ಆಗಿ ಕಾರ್ಯ ನಿರ್ವಹಿಸುತ್ತದೆ.

ಹವಾಮಾನ ಬದಲಾವಣೆಯನ್ನು ಕಡಿಮೆಗೊಳಿಸುವ ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಯು ಲಿಥಿಯಂ ಲೋಹದ ಕಾರ್ಯತಂತ್ರದ ಮಹತ್ವವನ್ನು ಹೆಚ್ಚಿಸಿದೆ. ಅತ್ಯಂತ ಸಾಮರ್ಥ್ಯ ಹೊಂದಿರುವ, ರಿಚಾರ್ಜ್ ಮಾಡಬಲ್ಲ ಲಿಥಿಯಂ ಬ್ಯಾಟರಿಗಳು ಎಲೆಕ್ಟ್ರಿಕ್ ವಾಹನಗಳಲ್ಲಿ ಅತ್ಯಂತ ಪ್ರಮುಖವಾಗಿವೆ.

ಈಗಾಗಲೇ ಪರೀಕ್ಷಿಸಿ, ಪ್ರಯೋಗಿಸಿ, ಯಶಸ್ವಿಯಾಗಿರುವ ಲಿ-ಅಯಾನ್ ಬ್ಯಾಟರಿ ತಂತ್ರಜ್ಞಾನಕ್ಕೆ 2021 ಒಂದು ಪ್ರಮುಖ ವರ್ಷವಾಗಿದೆ. 2016-17 ಹಾಗೂ 2019-20ರ ಮಧ್ಯದಲ್ಲಿ 165 ಕೋಟಿಗೂ ಹೆಚ್ಚು ಲಿಥಿಯಂ ಬ್ಯಾಟರಿಗಳನ್ನು ಭಾರತ ಆಮದು ಮಾಡಿಕೊಂಡಿದೆ. ಇದರ ಆಮದು ಮೊತ್ತ 3.3 ಬಿಲಿಯನ್ ಡಾಲರ್‌ಗೂ ಹೆಚ್ಚಾಗಿತ್ತು. ಭಾರತ ಆಮದು ಮಾಡಿಕೊಳ್ಳುತ್ತಿರುವ ಬಹುತೇಕ ಲಿಥಿಯಂ ಅಯಾನ್ ವಿದ್ಯುತ್ ಸಂಗ್ರಹ ಉತ್ಪನ್ನಗಳ ಮೂಲ ಚೀನಾ ಆಗಿದ್ದು, ಆದ್ದರಿಂದ ಭಾರತ ಲಿಥಿಯಂ ಪೂರೈಕೆಯನ್ನು ಸದೃಢವಾಗಿಸುವುದು ಚೀನಾ ವಿರುದ್ಧದ ಆರ್ಥಿಕ ಹೋರಾಟದಲ್ಲಿ ಮಹತ್ವದ್ದಾಗಿದೆ.

ಸರ್ಕಾರ ಕೈಗೊಂಡಿರುವ ಕ್ರಮಗಳು
ಭಾರತ ಲಿಥಿಯಂ ವ್ಯಾಲ್ಯೂ ಸರಪಳಿಗೆ ತಡವಾಗಿ ಪ್ರವೇಶ ಪಡೆದಿದೆ. ಜಾಗತಿಕ ಲಿಥಿಯಂ ವ್ಯಾಲ್ಯೂ ಸರಪಳಿಗೆ ಸೇರುವುದರ ಜೊತೆಗೆ, ಭಾರತ ಸ್ವದೇಶೀ ಲಿಥಿಯಂ ಹುಡುಕಾಟಕ್ಕೂ ಈಗ ಹೆಚ್ಚಿನ ಒತ್ತು ನೀಡುತ್ತಿದೆ. ಅಣು ಶಕ್ತಿ ಇಲಾಖೆಯ (ಡಿಎಇ) ಘಟಕವಾಗಿರುವ ಪರಮಾಣು ಖನಿಜಗಳ ನಿರ್ದೇಶನಾಲಯದ ಪರಿಶೋಧನೆ ಮತ್ತು ಸಂಶೋಧನೆ (ಎಎಂಡಿ) ಭಾರತದ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ, ಭೂ ಮೇಲ್ಮೈಯಲ್ಲಿ ಲಿಥಿಯಂಗಾಗಿ ಶೋಧ ನಡೆಸುತ್ತಿದೆ. ರಾಜಸ್ಥಾನ ಮತ್ತು ಗುಜರಾತಿನ ಉಪ್ಪಿನ ಕೊಳಗಳಿಂದ, ಒಡಿಶಾ ಮತ್ತು ಛತ್ತೀಸ್‌ಗಢದ ಮೈಕಾ ಬೆಲ್ಟಿನಿಂದ ಲಿಥಿಯಂ ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ನೂತನ ಕಂಪನಿಯಾದ ಖಾಂಜಿ ಬಿದೇಶ್ ಇಂಡಿಯಾ ಲಿಮಿಟೆಡ್ ಅನ್ನು ಮೂರು ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ನಾಲ್ಕೋ, ಹಿಂದೂಸ್ತಾನ್ ಕಾಪರ್, ಹಾಗೂ ಮಿನರಲ್ ಎಕ್ಸ್‌ಪ್ಲೋರೇಷನ್ ಲಿಮಿಟೆಡ್ ಗಳು 2019ರಲ್ಲಿ ಸ್ಥಾಪಿಸಿವೆ. ಇದರ ಪ್ರಮುಖ ಗುರಿಯೆಂದರೆ ವಿದೇಶಗಳಿಂದ ಲಿಥಿಯಂ ಹಾಗೂ ಕೋಬಾಲ್ಟ್ ಸಂಗ್ರಹಿಸುವುದಾಗಿದೆ. ಕಂಪನಿ ಈಗಾಗಲೇ ಚಿಲಿ ಮತ್ತು ಬೊಲಿವಿಯಾಗಳಲ್ಲಿ ಹುಡುಕಾಟ ನಡೆಸುತ್ತಿದೆ ಎನ್ನಲಾಗಿದೆ.

2020ರಲ್ಲಿ ಖಂಜಿ ಬಿದೇಶ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಒಂದು ಅರ್ಜೆಂಟೀನಾ ಸಂಸ್ಥೆಯೊಡನೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ದಕ್ಷಿಣ ಅಮೆರಿಕಾದ ದೇಶದಲ್ಲಿ ಲಿಥಿಯಂ ಹುಡುಕಾಟದ ಜಂಟಿ ಸಹಯೋಗಿಯಾಗಿದೆ. ಅರ್ಜೆಂಟೀನಾ ಜಗತ್ತಿನ ಮೂರನೆಯ ಅತಿದೊಡ್ಡ ಲಿಥಿಯಂ ನಿಕ್ಷೇಪವನ್ನು ಹೊಂದಿದೆ.

ಇದನ್ನೂ ಓದಿ | ವಿಸ್ತಾರ Explainer | ಏನಿದು ಸಿ-295 ಸರಕು ಸಾಗಣೆ ವಿಮಾನ? ದೇಶದ ರಕ್ಷಣಾ ವ್ಯವಸ್ಥೆಗೆ ಹೇಗೆ ಬಲ?

Exit mobile version