Site icon Vistara News

Shehbaz Sharif | ಪಾಕಿಸ್ತಾನ ಪಾಠ ಕಲಿತಿದೆ, ನಮಗೆ ಭಾರತದ ಜತೆ ಯುದ್ಧ ಬೇಡ: ಪಾಕ್‌ ಪಿಎಂ

Shehbaz Sharif

ಕರಾಚಿ: ಭಾರತದ ಜತೆಗೆ ಮೂರು ಯುದ್ಧಗಳ ಬಳಿಕ ಪಾಕಿಸ್ತಾನ ಪಾಠ ಕಲಿತಿದೆ. ನಮಗೆ ಯುದ್ಧ ಬೇಕಾಗಿಲ್ಲ, ಶಾಂತಿ ಬೇಕು ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ.

ಆಜ್‌ ಅರಬಿಯಾ ಟಿವಿಗೆ ನೀಡಿದ ಒಂದು ಸಂದರ್ಶನದಲ್ಲಿ ಅವರು ಇದನ್ನು ಹೇಳಿದ್ದಾರೆ. ʼʼಪಾಕಿಸ್ತಾನಕ್ಕೆ ಶಾಂತಿ ಬೇಕು. ಆದರೆ ಕಾಶ್ಮೀರದಲ್ಲಿ ನಡೆಯುತ್ತಿರುವುದನ್ನು ನಿಲ್ಲಿಸಬೇಕುʼʼ ಎಂದೂ ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಕಾಶ್ಮೀರದಲ್ಲಿ ನಡೆಯುತ್ತಿದೆ ಎನ್ನಲಾದ ಮಾನವ ಹಕ್ಕು ಉಲ್ಲಂಘನೆಗಳನ್ನು ಕಡೆಗಣಿಸಲಾಗದು ಎಂದಿದ್ದಾರೆ.

ಇದನ್ನೂ ಓದಿ | Shehbaz Sharif | ನಾವೀಗ ಭಿಕ್ಷಾ ಪಾತ್ರೆ ಹಿಡಿದು ನಿಂತಿದ್ದೇವೆ, ಆರ್ಥಿಕ ಬಿಕ್ಕಟ್ಟು ಒಪ್ಪಿಕೊಂಡ ಪಾಕ್‌ ಪ್ರಧಾನಿ

ನಮ್ಮಲ್ಲಿ ಎಂಜಿನಿಯರ್ಸ್‌, ಡಾಕ್ಟರ್ಸ್‌, ಕುಶಲ ಉದ್ಯೋಗಿಗಳಿದ್ದಾರೆ. ಈ ಪ್ರತಿಭೆಗಳನ್ನು ಒಳಿತಿಗಾಗಿ ಬಳಸುವ ಉದ್ದೇಶ ನಮ್ಮದು. ಈ ಮೂಲಕ ಎರಡೂ ದೇಶಗಳು ಬೆಳೆಯಬಹುದು. ಶಾಂತಿಯುತವಾಗಿ ಬೆಳೆಯುವುದು ಅಥವಾ ಕಾದಾಡುತ್ತಾ ಸಮಯ ವ್ಯರ್ಥ ಮಾಡುವುದು- ಇವೆರಡರಲ್ಲಿ ಆಯ್ಕೆ ನಮ್ಮದೇ ಆಗಿದೆ. ನಾವು ಭಾರತದ ಜತೆಗೆ ಮೂರು ಯುದ್ಧ ಮಾಡಿದ್ದೇವೆ. ಅವು ನಮಗೆ ಯಾತನೆ, ಬಡತನ, ನಿರುದ್ಯೋಗಗಳನ್ನಷ್ಟೇ ನೀಡಿವೆ. ನಾವು ಪಾಠ ಕಲಿತಿದ್ದೇವೆ. ಸಮಸ್ಯೆಗಳನ್ನು ಮೂಲದಲ್ಲಿ ಪರಿಹರಿಸಿಕೊಂಡು ಶಾಂತಿಯಲ್ಲಿ ಬಾಳಲು ಇಚ್ಛಿಸುತ್ತೇವೆ ಎಂದಿದ್ದಾರೆ.

ಬಾಂಬುಗಳು ಹಾಗೂ ಶಸ್ತ್ರಾಸ್ತ್ರಗಳ ಮೇಲೆ ಹಣ ವ್ಯರ್ಥ ಮಾಡಲು ಪಾಕಿಸ್ತಾನ ಇಚ್ಛಿಸುವುದಿಲ್ಲ. ನಾವಿಬ್ಬರೂ ಪರಮಾಣು ಅಸ್ತ್ರ ಹೊಂದಿದ ದೇಶಗಳು. ಒಂದು ವೇಳೆ ಯುದ್ಧ ಶುರುವಾದರೆ, ಏನಾಯಿತೆಂದು ಹೇಳಲು ಉಳಿಯುವವರಾದರೂ ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | SCO Summit | ಪಾಕಿಸ್ತಾನ ಪ್ರಧಾನಿಗೆ ಹೆಡ್‌ಫೋನ್ ಪೇಚು, ವಿಡಿಯೋ ವೈರಲ್

Exit mobile version