ಪಶ್ಚಿಮ ಬಂಗಾಳ: ಚುನಾವಣೆ ಮುಗಿದರೂ ಪಶ್ಚಿಮ ಬಂಗಾಳ(West Bengal)ದಲ್ಲಿ ಹಿಂಸಾಚಾರ(Violence) ಮಾತ್ರ ನಿಲ್ಲುತ್ತಲೇ ಇಲ್ಲ. ನಿನ್ನೆ ತಡೆ ರಾತ್ರಿಯೂ ಭೀಕರ ಘಟನೆಯೊಂದು ನಡೆದಿದ್ದು, ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ. ತೃಣಮೂಲ ಕಾಂಗ್ರೆಸ್ (TMC) ಗೂಂಡಾಗಳು ಬಿಜೆಪಿ ಕಾರ್ಯಕರ್ತನನ್ನು ಬರ್ಬರವಾಗಿ ಕೊಲೆಗೈದು ಆತನ ರುಂಡವನ್ನು ದೇಹದಿಂದ ಬೇರ್ಪಡಿಸಿ ವಿಕೃತಿ ಮೆರೆದಿದ್ದಾರೆ.
ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಚಂದಾಪುರದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ದುರ್ದೈವಿಯನನು ಹಫೀಜ್ ಶೇಖ್ ಎಂದು ಗುರುತಿಸಲಾಗಿದೆ. ಹಫೀಜ್ ಶೇಖ್ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದ. ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಂಗಡಿಯೊಂದ ಬಳಿ ಇದ್ದ ಹಫೀಜ್ ಮೇಲೆ ಬೈಕ್‌ನಲ್ಲಿ ಬಂದಿದ್ದ ಸುಮಾರು 10 ಜನ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿ ಕೊಂದಿದ್ದರು. ಬಳಿಕ ಆತನ ರುಂಡವನ್ನು ದೇಹದಿಂದ ಕತ್ತರಿಸಿ ಎಸೆದು ವೀಕೃತಿ ಮೆರೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ದೇಹ ಒಂದು ಕಡೆ ರುಂಡ ರಸ್ತೆ ಬದಿಯಲ್ಲಿ ಬಿದ್ದಿತ್ತು.
ಇನ್ನು ಘಟನೆ ಬಗ್ಗೆ ಹಫೀಜ್‌ನ ಸಹೋದರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹಫೀಜ್ ಕ್ಯಾರಮ್ ಆಡುತ್ತಿದ್ದಾಗ ಅಲ್ಲಿಗೆ ಬಂದಿದ್ದ ತೃಣಮೂಲಕ ಕಾಂಗ್ರೆಸ್‌ನ ಕಾರ್ಯಕರ್ತರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಇದಾದ ಬಳಿಕ ಆತನ ರುಂಡವನ್ನು ಕತ್ತರಿಸಿ ಕೊಂಡೊಯ್ಯುವ ಮೂಲಕ ಕ್ರೌರ್ಯ ಮೆರೆದಿದ್ದಾರೆ. ಈ ಕೃತ್ಯವನ್ನು ಎಸಗಿದವರು ಸಮಾಜ ಘಾತುಕರು. ಅವರು ಇಷ್ಟು ಮಾತ್ರವಲ್ಲದೇ ಮತ್ತೊರ್ವ ಬಿಜೆಪಿ ಕಾರ್ಯಕರ್ತರ ಮನೆಗೆ ಬಾಂಬ್ ಎಸೆದಿದ್ದಾರೆ. ನನ್ನ ಸಹೋದರ ಬಹಳ ಒಳ್ಳೆಯವನು. ಖಾಸಿಂ, ಸೊಹೋಜ್, ನಸೀಂ, ಸೊಬುಜ್, ಅಲಿ, ಬಂದು ಸೇರಿದಂತೆ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ನನ್ನ ಸಹೋಹರನ ಹತ್ಯೆ ಬಗ್ಗೆ ಸಿಬಿಐ ತನಿಖೆ ನಡೆಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಾಂಬ್ ಸ್ಫೋಟ
ಚುನಾವಣೆ ಮುಗಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ ಹೆಚ್ಚಾಗಿದ್ದು, ಭಾತ್ಪರಾ ಮತ್ತು ನೈಹಾತಿ ಪ್ರದೇಶಗಳಲ್ಲಿ ನಿನ್ನೆ ಬಾಂಬ್ ಸ್ಫೋಟಗೊಂಡಿದೆ. ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ನಡೆಸಿದ್ದು, ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದೆಡೆ ತೃಣಮೂಲ ಕಾಂಗ್ರೆಸ್ ಕಚೇರಿ ಎದುರೇ ಬಾಂಬ್ ಸ್ಫೋಟಗೊಂಡಿದೆ.
ಕಳೆದ ವಾರ ಇಂತಹದ್ದೇ ಒಂದು ಘಟನೆ ನಂದಿಗ್ರಾಮದಲ್ಲಿ ನಡೆದಿತ್ತು. ನಂದಿಗ್ರಾಮ ಜಿಲ್ಲೆಯಲ್ಲಿ ನಿನ್ನೆ ಸಂಜೆ ಬಿಜೆಪಿ ಕಾರ್ಯಕರ್ತೆಯೊಬ್ಬರ ಹತ್ಯೆ ನಡೆದಿದ್ದು, ಇದರಲ್ಲಿ ಟಿಎಂಸಿ(TMC) ಮುಖಂಡರದ್ದೇ ಕೈವಾಡ ಇದೆ ಎಂದು ಆರೋಪಿಸಿ ಬಿಜೆಪಿ(BJP) ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪರಿಸ್ಥಿತಿ ನಿಯಂತ್ರಣ ತರಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು.
ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ರೋತಿಬಾಲಾ ಅರಿ ಎಂಬ ಮಹಿಳೆಯ ಮೃತಪಟ್ಟಿದ್ದಾಳೆ. ಉಳಿದ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಖಂಡಿಸಿ ಬಿಜೆಪಿ ನಂದಿಗ್ರಾಮದಲ್ಲಿ 12ಗಂಟೆಗಳ ಕಾಲ ಬಂದ್‌ಗೆ ಕರೆಕೊಟ್ಟು ಪ್ರತಿಭಟನೆ ನಡೆಸಿದೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಉದ್ರಿಕ್ತರ ಗುಂಪು ರಸ್ತೆ ತಡೆದು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದರು.. ಇನ್ನು ಜಿಲ್ಲೆಯ ಸೋನಾಚೂರ ಪ್ರದೇಶದಲ್ಲಿ ಹಿಂಸಾಚಾರದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಇದನ್ನೂ ಓದಿ:Assembly Election Results 2024: ಇಂದು ಅರುಣಾಚಲ ಪ್ರದೇಶ & ಸಿಕ್ಕಿಂ ರಿಸಲ್ಟ್; 10 ಅಭ್ಯರ್ಥಿಗಳು ಅವಿರೋಧ ಆಯ್ಕೆ