-ಡಾ. ಶಿವಕುಮಾರ. ಹೆಚ್.ಸಿ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಅಧ್ಯಕ್ಷರು, ಬಳ್ಳಾರಿ ಸ್ತ್ರೀರೋಗ ಸಂಘ ಸಹ ಪ್ರಾಧ್ಯಾಪಕರು, ವಿಮ್ಸ್, ಬಳ್ಳಾರಿ.
ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ದಿನಾಚರಣೆಯನ್ನು (World Breastfeeding Week) ಮಾಡಲಾಗುತ್ತದೆ. ಇದರ ಉದ್ದೇಶ ಪ್ರತಿಯೊಬ್ಬರಿಗೂ ಎದೆ ಹಾಲು ಉಣಿಸುವ ಅವಶ್ಯಕತೆಯನ್ನು ತಿಳಿಸುವುದಾಗಿದೆ. ಸ್ತನಪಾನವಿಲ್ಲದಿದ್ದರೆ ಮನುಷ್ಯನ ಉಳಿವು ಸಾಧ್ಯವಾಗುತ್ತಿರಲಿಲ್ಲ. ಇದು ಮಗು ಒಂದು ಉತ್ತಮ ಜೀವನ ಆರಂಭ ಮಾಡಲು ತಾಯಿಯ ಕೊಡುಗೆಯಾಗಿದೆ(Healthy Child). ಇದರೊಂದಿಗೆ ಇದು ತಾಯಿಯ ಆರೋಗ್ಯ ಚನ್ನಾಗಿರಲು ಸಹಕಾರಿಯಾಗಿರುವುದಲ್ಲದೇ ಉತ್ತಮ ಮಗು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತದೆ. ಎದೆ ಹಾಲು ಅಮೃತಕ್ಕೆ ಸಮನಾಗಿದ್ದು, ಭಾರತ ಸಕಾ೯ರವು (Indian Government) ಮಗು ಹುಟ್ಟಿದ 1 ಗಂಟೆಯೊಳಗೆ ತಾಯಿ ಎದೆ ಹಾಲು ಉಣಿಸಬೇಕು ಮೊದಲ 6 ತಿಂಗಳು ಎದೆ ಹಾಲು ಬಿಟ್ಟು ಬೇರೆ ಯಾವುದೇ ಆಹಾರವನ್ನು ಮಗುವಿಗೆ ನೀಡಬಾರದೆಂದು ಉತ್ತೇಜಿಸುತ್ತದೆ. 6 ತಿಂಗಳ ನಂತರ ಪೂರಕ ಆಹಾರದೊಂದಿಗೆ 2 ವಷ೯ಗಳವರೆಗೆ ಎದೆ ಹಾಲು ಉಣಿಸಲು ಉತ್ತೇಜಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಕೇವಲ 40% ತಾಯಂದಿರು ಮಗು ಹುಟ್ಟಿದ 1 ಗಂಟೆಯೊಳಗೆ ಎದೆ ಹಾಲು ಉಣಿಸುತ್ತಾರೆ. ಕೇವಲ 33% ತಾಯಂದಿರು ಮಾತ್ರವೆ ಮೊದಲ ಆರು ತಿಂಗಳಲ್ಲಿ ಎದೆ ಹಾಲನ್ನು ಮಾತ್ರ ಉಣಿಸುತ್ತಾರೆ. 66% ತಾಯಂದಿರುವ ಎದೆ ಹಾಲು ಉಣಿಸುವುದಿಲ್ಲ ಅಥವಾ ಎದೆಹಾಲಿನೊಂದಿಗೆ ಕೃತಕ ಹಾಲನ್ನು ಮೊದಲ ಆರು ತಿಂಗಳಲ್ಲಿ ಉಣಿಸುತ್ತಾರೆ. ಇದು ಅತ್ಯಂತ ಕಳವಳಿಯಾದ ವಿಷಯ.
ಎದೆ ಹಾಲು ಉಣಿಸದಿರಲು ಕಾರಣಗಳೆಂದರೆ….
- ಸಂಪೂಣ೯ ಮಾಹಿತಿ ಇರುವುದಿಲ್ಲ.
- ಎದೆ ಹಾಲು ಉಣಿಸುವ ತೊಂದರೆಗಳು.
- ಉದ್ಯೋಗಕ್ಕೆ ಹೋಗುವುದರಿಂದ ಯಾರು ಸಹಾಯ ಮಾಡಲು ಇಲ್ಲದಿರುವುದು.
- ಆರೋಗ್ಯ ಕಾಯ೯ಕತ೯ರು ಎದೆ ಹಾಲು ಉಣಿಸಲು ಪ್ರೋತ್ಸಾಹಿಸದಿರುವುದು.
ಎದೆ ಹಾಲಿನ ಸಂಪೂಣ೯ ಮಾಹಿತಿ ಇಲ್ಲಿದೆ…
ಎದೆ ಹಾಲು ಒಂದು ಸಂಪೂಣ೯ ಆಹಾರವಾಗಿದ್ದು ಅಮೃತಕ್ಕೆ ಸಮಾನ. ತಾಯಿಯ ಎದೆ ಹಾಲು ಮೊದಲ ದಿನ ಹಳದಿ ಬಣ್ಣವಿದ್ದು ಅದನ್ನು ಕುಡಿಸಬಾರದೆಂದು ಬಹಳ ಜನರಲ್ಲಿ ತಪ್ಪು ಕಲ್ಪನೆ ಇದೆ. ಆದರೆ ಮೊದಲ ದಿನದ ಈ ಹಳದಿ ಬಣ್ಣದ ಹಾಲು ಅತಿ ಪೌಷ್ಟಿಕಾಂಶ ಹೊಂದಿದ್ದು ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಮಗುವಿಗೆ ರೋಗಗಳೊಡನೆ ಹೋರಾಡಲು ಸಹಾಯವಾಗುತ್ತದೆ. ತಾಯಿಯ ಎದೆಹಾಲಿನಲ್ಲಿ ಎಲ್ಲಾ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿದ್ದು ಮೊದಲ ಆರು ತಿಂಗಳು ತಾಯಿಯ ಎದೆ ಹಾಲು ಬಿಟ್ಟು ಬೇರೆ ಯಾವುದೇ ಆಹಾರದ ಅವಶ್ಯಕತೆ ಇರುವುದಿಲ್ಲ. ಬೇಸಿಗೆಯಲ್ಲಿ ಸರಿಯಾಗಿ ಎದೆ ಹಾಲು ಉಣಿಸಿದ ಮಗುವಿಗೆ ನೀರಿನ ಅವಶ್ಯಕತೆಯು ಇರುವುದಿಲ್ಲ.
ಎದೆ ಹಾಲುಣಿಸುವುದರಿಂದ ಆಗುವ ಉಪಯೋಗಗಳು?
- ಮಗುವಿಗೆ: ಶ್ವಾಶಕೋಶ, ಜಾಂಡೀಸ್, ಆಸ್ತಮ, ಅಲಜಿ೯, ಬೊಜ್ಜು, ರಕ್ತಕ್ಯಾನ್ಸರ್ನಿಂದ ರಕ್ಷಣೆ, ಸ್ತನಪಾನ ಮಾಡಿದ ಮಕ್ಕಳು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಸ್ಥೂಲಕಾಯ, ಮಧುಮೇಹ ತೊಂದರೆ ಬರುವುದಿಲ್ಲ.
- ತಾಯಿಗೆ: ತಾಯಿ ಮಗು ಬಾಂಧವ್ಯ ಹೆಚ್ಚುತ್ತದೆ, ಮುಂದಿನ ಗಭಾ೯ವಸ್ಥೆಯನ್ನು ತಡೆಯುತ್ತದೆ. ದೇಹದ ತೂಕ ಸಾಮಾನ್ಯ ಸ್ಥಿತಿಗೆ ಬರುತ್ತದೆ. ರಕ್ತ ಹೀನತೆ, ಮೂಳೆಗಳ ತೊಂದರೆ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಬರುವುದನ್ನು ತಡೆಗಟ್ಟುತ್ತದೆ.
- ಸಮಾಜ ಮತ್ತು ಕುಟುಂಬಕ್ಕೆ: ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುತ್ತದೆ. ಪೂರಕ ಆಹಾರಕ್ಕೆ ವ್ಯಯಿಸುವ ಹಣ ಉಳಿಸುತ್ತದೆ. ಮುಂದಿನ ಪೀಳಿಗೆಗೆ ಆರೋಗ್ಯವಂತ ಪ್ರಜೆಯನ್ನು ನೀಡುತ್ತದೆ.
ಎದೆ ಹಾಲು ಹೆಚ್ಚಿಸಲು ತಾಯಂದಿರು ಏನ ಮಾಡಬೇಕು?
ಬಾಣಂತಿಯರು ಪತ್ಯೆ ಮಾಡಬೇಕು ಎಂಬ ಮೂಡ ನಂಬಿಕೆಗೆ ಹೋಗದೆ, ಎದೆ ಹಾಲು ಹೆಚ್ಚಿಸಲು
ಹಾಲು, ಕಪ್ಪು ಎಳ್ಳು, ಸಬ್ಬಸಿಗೆ ಸೊಪ್ಪು, ರಾಗಿ, ಸೊಂಪುಕಾಳು, ಮೆಂತ್ಯ ಸೊಪ್ಪು, ಜೋಳ, ಜೀರಿಗೆ, ಪಾಲಾಕ್ ಸೊಪ್ಪು, ಅಗಸೆ ಬೀಜ, ಗಸಗಸೆ, ಬಸ್ಲೆ ಸೊಪ್ಪು, ಮೆಂತ್ಯೆ ಬಳಸಬೇಕು. ಅಲ್ಲದೇ, ಬೆಳುಳ್ಳಿ, ಬಾದಾಮಿ,
ಮೀನು, ಶುಂಠಿ, ಗೋಡಂಬಿ, ಮೊಟ್ಟೆ, ಗೆಣಸು, ಖಜೂ೯ರ, ಕೋಳಿ ಮಾಂಸ, ತೆಂಗಿನ ಕಾಯಿ, ಪರಂಗಿಹಣ್ಣು ಸೇವಿಸಬಹುದು.
ಅತಿಯಾದ ಎಣ್ಣೆ ಮತ್ತು ಖಾರದ ಆಹಾರವನ್ನು ಸೇವಿಸಬಾರದು ಮಧ್ಯಪಾನ ಮತ್ತು ದೂಮಪಾನ ಮಾಡಬಾರದು ಇಂತಹ ಅಮೂಲ್ಯವಾದ ಎದೆ ಹಾಲು ಮಗುವಿನ ಹಕ್ಕು ಮತ್ತು ಇದನ್ನು ಕುಡಿಸುವುದು ತಾಯಿಯ ಕತ೯ವ್ಯ.
ಈ ಸ್ತನಪಾನ ಮಾಡಲು ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯದ ಹಸ್ತಕ್ಷೇಪ ಅತಿ ಅವಶ್ಯಕ. ಇದರ ಮಹತ್ವವನ್ನು ತಾಯಿಗೆ ವೈಯಕ್ತಿಕ ಸಮಾಲೋಚನೆ, ಗುಂಪು ಸಮಾಲೋಚನೆ ಮತ್ತು ಕುಟುಂಬದವರಿಗೆ ಇದರ ಮಹತ್ವ ತಿಳಿಸಿ ತಾಯಂದಿರನ್ನು ಹಾಲುಣಿಸಲು ಬೆಂಬಲಿಸ ಬೇಕಾಗಿದೆ. ಕುಟುಂಬದ ಸದಸ್ಯರು ಇದರ ಮಹತ್ವ ತಿಳಿದರೆ ಅವರು ತಾಯಿಗೆ ಹಾಲುಣಿಸಲು ಪ್ರೋತ್ಸಾಹಿಸುತ್ತಾರೆ. ಪ್ರಸವದ ನಂತರ ಸ್ತನಪಾನಕ್ಕೆ ಬೆಂಬಲ ನೀಡುವುದು ಆರೋಗ್ಯ ಕಾಯ೯ಕತ೯ರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ಹೆರಿಗೆ ಆಸ್ಪತ್ರೆಯು Baby Friendly Hospital Initiative ಪಾಲಿಸಿ ಅನುಸರಿಸಬೇಕಾಗಿದೆ. ಸ್ತನಪಾನದ ಬಗ್ಗೆ ಸಾಮಾನ್ಯ ಜನರಿಗೆ ಅಥ೯ವಾಗುವ ಬಗ್ಗೆ ಬರೆದು ಫಲಕ ಹಾಕಬೇಕು. ಪ್ರತಿಯೊಬ್ಬ ಆರೋಗ್ಯ ಕಾಯ೯ಕತ೯ರು ಸ್ತನಪಾನ ಪ್ರೋತ್ಸಾಹಿಸುವ ಕೌಶಲ್ಯ ತರಬೇತಿ ಹೊಂದಿರಬೇಕು. ತಾಯಿ ಮತ್ತು ಮಗುವನ್ನು ಚಮ೯ಕ್ಕೆ ಚಮ೯ ಹೊಂದಿಕೊಳ್ಳುವಂತೆ ಮಲಗಿಸಿ ಹುಟ್ಟಿದ ಮೊದಲ ಒಂದು ಗಂಟೆಯೊಳಗೆ ಹಾಲುಣಿಸುವಂತೆ ನೋಡಿಕೊಳ್ಳಬೇಕು. ದಿನದ 24 ಗಂಟೆಗಳು ತಾಯಿ ಮತ್ತು ಮಗು ಜೊತೆಗಿರಬೇಕು ಯಾವುದೇ ಕಾರಣಕ್ಕೂ ಮೊದಲ ಆರು ತಿಂಗಳು ಕೃತಕ ಆಹಾರ ನೀಡಬಾರದು.
ಸ್ತನಪಾನವನ್ನು ಉತ್ತೇಜಿಸಲು ಸಕಾ೯ರದ ಕೊಡುಗೆಗಳು
- ತಾಯ್ತನದ ರಜೆ/ಪಿತೃತ್ವ ರಜೆ.
- ಸಾವ೯ಜನಿಕ ಸ್ಥಳದಲ್ಲಿ ಎದೆಹಾಲುಣಿಸಲು ಶಾಸನಬದ್ದವಾಗಿ ಪ್ರೋತ್ಸಾಹಿಸಿದೆ.
- ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ.
- ರಾಷ್ಟ್ರೀಯ ಪೋಷಣ ಅಭಿಯಾನ
ಸ್ತನಪಾನ ಮಾಡುವಾಗ ಮತ್ತು ಸ್ತನಪಾನ ಯಶಸ್ಸಾಗಲು ತಾಯಿಯು ಪ್ರತಿದಿನ ಸ್ನಾನ ಮಾಡಿ, ಮೊಲೆಯನ್ನು ಸ್ವಚ್ಚಗೊಳಿಸಿ ಹಾಲುಣಿಸಲು ಶಾಂತವಾದ ಸ್ಥಳವನ್ನು ಆಯ್ಕೆಮಾಡಿ ಯಾವಾಗಲು ಸಂತೋಷದಿಂದ, ಮಗುವಿನ ಬಗ್ಗೆ ಯೋಚಿಸುತ್ತ ಮಗು ಮಾಡುವ ಶಬ್ದ ಕೇಳಿಸಿಕೊಳ್ಳುತ್ತಾ ಮಗುವನ್ನು ಗಮನಿಸುತ್ತಾ ಆತ್ಮವಿಶ್ವಾಸದಿಂದ ಹಾಲುಣಿಸಬೇಕು. ತಾಯಿಯ ಚಿಂತೆ, ಒತ್ತಡ, ಭಯ, ನೋವು ಮತ್ತು ಆತ್ಮವಿಶ್ವಾಸದ ಕೊರತೆಯಿಂದಿದ್ದಲ್ಲಿ ಎದೆಹಾಲು ಉತ್ಪತ್ತಿ ಕಡಿಮೆಯಾಗುವುದು.
ಇಂತಹ ಮನಸ್ಥಿತಿಯನ್ನು ಹೋಗಲಾಡಿಸಿ, ಪ್ರಶಾಂತ ಮನಸ್ಥಿತಿಯಲ್ಲಿ ಹಾಲುಣಿಸುವ ತಾಯಂದಿರು ಮೊಲೆಗೆ ಮಗುವಿನ ಬಾಯಿಯನ್ನು ಸರಿಯಾಗಿ ಅಂಟಿಸುವುದು ಸ್ತನಪಾನ ಯಶಸ್ವಿಯಾಗಲು ತುಂಬಾ ಅವಶ್ಯಕ. ಇದಕ್ಕೆ ಮಗು ಬಾಯಿಯನ್ನು ಅಗಲಮಾಡಿ ಕೆಳತುಟಿಯನ್ನು ಹೊರಗೆ ತಿರುಗಿಸಿ, ಗಲ್ಲವನು ಸ್ತನಕ್ಕೆ ಸ್ಪಷಿ೯ಸಿ ಸ್ತನದ ಕಪ್ಪು ಭಾಗವನ್ನು ಮಗುವಿನ ಬಾಯಿಯ ಒಳಗೆ ಇರಿಸಬೇಕು. ಇದು ಮಗುವು ಎದೆ ಹಾಲನ್ನು ನುಂಗಲು ಮತ್ತು ಹೀರಲು ಸಹಾಯ ಮಾಡುತ್ತದೆ. ಇದರಿಂದ ತಾಯಿಗೆ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ.
ಮೊಲೆಗೆ ಮಗುವಿನ ಬಾಯಿ ಸರಿಯಾಗಿ ಅಂಟಿಸದಿದ್ದಲ್ಲಿ ತೊಟ್ಟುಗಳು ಕೆಂಪಾಗುವುದು ನೋವಿನಿಂದ ಕೂಡುವುದು, ಸ್ತನ ಗಟ್ಟಿಯಾಗುವುದು ಮತ್ತು ಮಗು ಹೀರಿಕೆಯನ್ನು ನಿರಾಕರಿಸುವುದು.
ಎದೆಹಾಲು ಕುಡಿಸಿದ ನಂತರ ತಾಯಿ ಮಗುವಿನ ಬೆನ್ನನ್ನು ತಟ್ಟಬೇಕು, ಬೆರಳಿಗೆ ಶುಚಿಯಾದ ಬಟ್ಟೆ ಸುತ್ತಿಕೊಂಡು ಮಗುವಿನ ವಸಡನ್ನು ಒರೆಸಬೇಕು ಇದರಿಂದ ಮಗುವಿಗೆ ಯಾವುದೇ ಸೊಂಕು ಅಥವಾ ರೋಗಗಗಳು ಬರುವುದಿಲ್ಲ.
ಎದೆ ಹಾಲನ್ನು ಮಗು ಬಯಸುವಷ್ಟು ಸಲ ಅಥವಾ ಕನಿಷ್ಟ ದಿನಕ್ಕೆ 8-12 ಸಲ ನೀಡಬೇಕು, ಹೆಚ್ಚುಸಲ ಹಾಲು ಕುಡಿಸಿದಲ್ಲಿ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ. ಎದೆ ಹಾಲು ಸಮಪ೯ಕವಾದ ಸೂಚನೆಗಳು. ಎದೆ ಹಾಲಿನ ನಂತರ ಮಗು 2-3 ತಾಸು ಮಲಗುತ್ತದೆ. ದಿನಕ್ಕೆ 6-8 ಬಾರಿ ಬಟ್ಟೆ ಒದ್ದೆ ಮಾಡುತ್ತದೆ. ತೊಂದರೆಯಿಲ್ಲದೆ ಸಾಮಾನ್ಯವಾಗಿ ಮಲವನ್ನು ವಿಸಜ೯ನೆ ಮಾಡುತ್ತದೆ. ಮಗುವು ಕ್ರಿಯಾಶೀಲವಾಗಿರುತ್ತದೆ.
ಕೆಲವು ಮಕ್ಕಳಲ್ಲಿ ಸೀಳುತುಟಿ, ಕಡಿಮೆ ತೂಕದ ಮಕ್ಕಳು ಮತ್ತು ಕೆಲಸ ಮಾಡುವ ಮಹಿಳೆಯರು ಎದೆ ಹಾಲು ಉಣಿಸಲು ಆಗುವುದಿಲ್ಲ. ಇಂತಹ ಸಂದಭ೯ದಲ್ಲಿ ಎದೆ ಹಾಲು ಹೊರತೆಗೆದು ಸಂಗ್ರಹಿಸಿಟ್ಟು ಮಗುವಿಗೆ ಕಾಲ ಕಾಲಕ್ಕೆ ಉಣಿಸಬಹುದು. ಹೀಗೆ ತೆಗೆದ ಎದೆ ಹಾಲನ್ನು ಕೊಠಡಿಯ ಉಷ್ಣತೆಯಲ್ಲಿ 8 ಗಂಟೆಗಳು ಮತ್ತು ರೆಫ್ರಿಜರೇಟರ್ನಲ್ಲಿ 24 ಗಂಟೆಗಳು ಶೇಖರಿಸಬಹುದು.
ಎದೆ ಹಾಲುಣಿಸುವ ಮಹಿಳೆಯರಲ್ಲಿ ಕೆಲವು ವೇಳೆ ಒಳ ತಿರುಗಿದೆ, ತೊಟ್ಟುಗಳು ಕೀವು ತೊಟ್ಟು, ಊತವಾದ ಸ್ತನಗಳು ಸ್ತನದ ಸೊಂಕು ಉಂಟಾಗುವವು. ಇಂತಹ ಸಮಯದಲ್ಲಿ ವೈದ್ಯರನ್ನು ಸಂಪಕಿ೯ಸಿ ಸೂಕ್ತ ಚಿಕಿತ್ಸೆ ಮಾಡಿಸಬೇಕು.
ವಿಶ್ವ ಆರೋಗ್ಯ ಸಂಸ್ಥೆಯು ಸ್ತನಪಾನವನ್ನು ಒಂದು ಉತ್ತಮ ಆಹಾರವೆಂದು ಉತ್ತೇಜಿಸುತ್ತದೆ ಮತ್ತು ಹುಟ್ಟಿದ ಮೊದಲ ಆರು ತಿಂಗಳು ತಾಯಿಯು ಎದೆಯ ಹಾಲನ್ನು ಮಾತ್ರ ಕುಡಿಸಬೇಕು ಎಂದು ಉತ್ತೇಜಿಸುತ್ತಿದೆ. ಹುಟ್ಟಿದ ಮೊದಲ 6 ತಿಂಗಳಲ್ಲಿ ಕೇವಲ ಎದೆ ಹಾಲನ್ನು ಮಾತ್ರ ಕುಡಿಸುವ ತಾಯಂದಿರ ಸಂಖ್ಯೆಯನ್ನು 2025ರೊಳಗೆ 50%ಗಿಂತ ಹೆಚ್ಚಾಗಿಸಲು ಪ್ರಯತ್ನಿಸುತ್ತಿದೆ.
ಈ ಸುದ್ದಿಯನ್ನೂ ಓದಿ: Breast Feeding Awareness | ಸ್ತನ್ಯಪಾನ ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ: ನಟಿ ಪ್ರಣೀತ ಸುಭಾಷ್
ಇದಕ್ಕೆ ನಾವು ಮಾಡಬೇಕಾಗಿರುವುದು ಮಗು ಹುಟ್ಟಿದ 1 ಗಂಟೆಯೊಳಗೆ ತಾಯಿಯ ಎದೆ ಹಾಲು ಉಣಿಸಲು ಪ್ರಾರಂಬಿಸಬೇಕಾಗಿದೆ. ಮೊದಲ 6 ತಿಂಗಳಲ್ಲಿ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕಾಗಿದೆ. ಮತ್ತು 6 ತಿಂಗಳ ನಂತರ 2 ವಷ೯ದವರೆಗೆ ಎದೆ ಹಾಲನ್ನು ಪೂರಕ ಆಹಾರದೊಂದಿಗೆ ಮುಂದುವರೆಸಬೇಕಾಗಿದೆ. ಇದಕ್ಕೆ ನಾವು ಮಾಡಬೇಕಾದದು ಹೀಗೆ…
- ಸಾಮಾಜಿಕ ಮತ್ತು ಮಾಧ್ಯಮಗಳ ಮೂಲಕ ಎದೆ ಹಾಲು ಉಣಿಸುವುದನ್ನು ಉತ್ತೇಜಿಸಬೇಕು.
- ಶಾಸನಬದ್ದವಾಗಿ ಎದೆ ಹಾಲು ಉಣಿಸುವುದರ ಬಗ್ಗೆ ನೀತಿ ಸಂಹಿತೆಗಳನ್ನು ಜಾರಿ ಮಾಡಬೇಕು.
- ಸಮಾಲೋಚನೆ, ಕುಟುಂಬದ ನೆರವು ಮತ್ತು ಹಾಲುಣಿಸುವಾಗ ಆಗುವ ತೊಂದರೆಗಳನ್ನು ನಿವಾರಿಸಬೇಕು.
ಇದಕ್ಕೆ ಆರೋಗ್ಯ ವ್ಯವಸ್ಥೆ ಮತ್ತು ಸೇವೆಗಳು, ಕುಟುಂಬ ಮತ್ತು ಸಮುದಾಯದ ಪ್ರೋತ್ಸಾಹ, ಹೆಣ್ಣುಮಕ್ಕಳು ಕೆಲಸ ಮಾಡುವ ಜಾಗದಲ್ಲಿ ಪ್ರೋತ್ಸಾಹ/ ಮಾತೃತ್ವ/ಪಿತೃತ್ವ ರಜೆಯ ಮೂಲಕ ಶ್ರಮಿಸಬೇಕಾಗಿದೆ. ತಾಯಿ ಮತ್ತು ಮಗುವಿನ ಉತ್ತಮ ಭಾಂದವ್ಯಕೂಡ ಎದೆ ಹಾಲು ಉಣಿಸಲು ಅತಿ ಅವಶ್ಯಕ.